ಸ್ಯಾಂಡಲ್ ವುಡ್ ಒಡೆಯನ ಇದೀಗ ರಾಬರ್ಟ್ ಆಗಿ ಮಿಂಚಲು ಶುರು ಮಾಡಿದ್ದಾನೆ. ಹೌದು, ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಗಳಿಂದ ಭಾರೀ ಸದ್ದು ಮಾಡಿರುವ ಚಿತ್ರ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಹೌದು, ಚಿತ್ರ ಏಪ್ರಿಲ್ 9ಕ್ಕೆ ತೆರೆಗಪ್ಪಳಿಸುವ ಮುನ್ಸೂಚನೆ ಸಿಕ್ಕಿದ್ದು, ಬಹುತೇಕ ಅದೇ ಡೇಟ್ ಫಿಕ್ಸ್ ಎನ್ನಲಾಗುತ್ತಿದೆ. 
 
ನಟ ದರ್ಶನ್ ಕಳೆದ ವರ್ಷ ಮೂರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದಾರೆ. 'ಯಜಮಾನ' ಪಕ್ಕಾ ಸ್ವಮೇಕ್ ಮಾಸ್ ಕಮರ್ಷಿಯಲ್ ಸಿನಿಮಾ. ಆಗಂತೂ ಸ್ಯಾಂಡಲ್ ವುಡ್ ನಲ್ಲಿ ಯೇ ದರ್ಶನ್ ಯಜಮಾನನಾಗಿ ಮೆರೆದರು. ಇನ್ನು ಐತಿಹಾಸಿಕ ಪೌರಾಣಿಕ ಚಿತ್ರ 'ಮುನಿರತ್ನ ಕುರುಕ್ಷೇತ್ರ'ದಲ್ಲಿ ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ್ದರು. ನಂತರ ಬಂದ 'ವೀರಂ' ರಿಮೇಕ್‌ 'ಒಡೆಯ' ಚಿತ್ರದಲ್ಲಿ ಸಖತ್ ಎಂಟರ್‌ಟೇನ್‌ಮೆಂಟ್ ನೀಡಿದ್ದರು ಡಿ ಬಾಸ್‌. ಇದೀಗ ಬೇಸಿಗೆ ಪ್ರಾರಂಭದಲ್ಲಿ ರಾಬರ್ಟ್ ಆಗಿ ಮಿಂಚಲು ಕಾಯುತ್ತಿದ್ದಾರೆ. 
 
ಸದ್ಯ ಅವರ ಅಭಿಮಾನಿಗಳ ಗಮನ 'ರಾಬರ್ಟ್‌' ಸಿನಿಮಾದ ಮೇಲಿದೆ. 'ಚೌಕ' ನಂತರ ತರುಣ್‌ ಸುಧೀರ್‌ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ, ಇದರಲ್ಲಿ ದರ್ಶನ್ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಭಟ್ ನಾಯಕಿಯಾಗಿ ನಟಿಸಿದ್ದರೆ, ವಿನೋದ್ ಪ್ರಭಾಕರ್‌ ಇಂಪಾರ್ಟೆಂಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬ ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆಯೋ ಎಂಬ ಕುತೂಹಲ ಅಭಿಮಾನಿಗಳದ್ದು.
 
ಅದಕ್ಕೀಗ ಉತ್ತರ ಸಿಕ್ಕಿದ್ದು 'ರಾಬರ್ಟ್‌' ಚಿತ್ರವು ಏಪ್ರಿಲ್‌ 9ರ ಗುರುವಾರ ತೆರೆಕಾಣುವ ಸಾಧ್ಯತೆ ಇದೆಯಂತೆ.ವಿಶೇ ಈಗಾಗಲೇ ಈ ಕುರಿತಂತೆ ನಿರ್ದೇಶಕ ತರುಣ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತವೆ. ಆದರೆ, ಈ ಸಿನಿಮಾವನ್ನು ಗುರುವಾರ ತೆರೆಕಾಣಿಸಲು ಪ್ಲಾನ್ ಮಾಡಿರುವುದು ವಿಶೇಷವಾಗಿದ್ದು ಎಲ್ಲಾ ಅಂದು ಕೊಂಡಂತೆ ಆದರೆ ಏಪ್ರಿಲ್ ನಲ್ಲಿ ರಾಬರ್ಟ್ ಹವಾ ಶುರುವಾಗೋದು ಪಕ್ಕಾ ಆಗುತ್ತೆ.

మరింత సమాచారం తెలుసుకోండి: