ಟಾಲಿವುಡ್ ನ ಮೋಸ್ಟ್ ಬ್ಯೂಟಿಫುಲ್ ಕ್ವೀನ್, ಪಡ್ಡೆ ಹೈಕಳ ಫೇವರಿಟ್ ಹೀರೋಯಿನ್ ನಟಿ ಪೂಜಾ ಹೆಗ್ಡೆ ಸಂಭಾವನೆ ಎಷ್ಟು ಗೊತ್ತಾ. ಮೊದಲಿಗೆ ಚಿತ್ರಕ್ಕೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಪೂಜಾ ಇದೀಗ ಅವರ ಸಂಭಾವನೆ ಎಷ್ಟು ಗೊತ್ತಾ! ಅದನ್ನು ಕೇಳಿದ್ರೆ ನೀವ್ ಕೂಡ ಓಮ್ಮೆ ಶಾಕ್ ಆಗೋದು ಗ್ಯಾರಂಟಿ. ಹೌದು, ಆ ಬಗೆಗಿನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
ಟಾಲಿವುಡ್ ನ ಮಹರ್ಷಿ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಜೋಡಿಯಾಗಿ ಮಿಂಚಿದ ನಟಿ ಪೂಜಾ ಹೆಗ್ಡೆ ದಿಢೀರನೇ ತಮ್ಮ  ಸಂಭಾವನೆ ಹೆಚ್ಚಿಸಿಕೊಂಡು ಟಾಲಿವುಡ್ ನಿರ್ದೇಶಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಹೌದು, ಟಾಲಿವುಡ್‌ ಹಾಗೂ ಬಾಲಿವುಡ್‌ ಲೋಕದಲ್ಲಿ ನಟಿಯಾಗಿ ಮಿಂಚುತ್ತಿರುವ ಮಾಡೆಲ್ ಪೂಜಾ ಹೆಗ್ಡೆ 2010ರಲ್ಲಿ ಮಿಸ್‌ ಯೂನಿವರ್ಸ್‌ ದ್ವಿತಿಯ ಸ್ಥಾನ ಪಡೆದು ಕೊಂಡಿದ್ದಾರೆ. 'ಮುಗಮೂದಿ' ಚಿತ್ರದ ಮೂಲಕ ಕಾಲಿವುಡ್‌ ಗೆ ಕಾಲಿಟ್ಟ ಪೂಜಾ ವೃತ್ತಿ ಜೀವನದಲ್ಲಿ ಪ್ರತಿಯೊಂದು ಸಿನಿಮಾಗಳು ಬ್ರೇಕ್ ನೀಡಿದ್ದೆ. ಬಾಲಿವುಡ್‌ 'ಮಹೆಂಜೊ ದಾರೋ' ಚಿತ್ರದಲ್ಲಿ ಹೃತಿಕ್ ರೋಷನ್‌ಗೆ ಜೋಡಿಯಾಗಿ, 'ಹೌಸ್‌ ಫುಲ್-4'ರಲ್ಲಿ ಅಕ್ಷಯ್ ಕುಮಾರ್‌ ಜೊತೆಯೂ ಮಿಂಚಿದ್ದಾರೆ. ೊಇನ್ನು ಸಂಭಾವನೆ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲ ಮೂಲಗಳ ಪ್ರಕಾರ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ಪೂಜಾ ಹೆಗ್ಡೆ  1.5 ರಿಂದ 2 ಕೋಟಿ ರೂ. ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಚಿತ್ರದ ನಾಯಕ ಅಲ್ಲು ಅರ್ಜುನ್‌ ಆದ ಕಾರಣ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. 
 
ಈಗಾಗಲೆ ಕೈ ತುಂಬಾ ಆಫರ್‌ ಗಳನ್ನು ತುಂಬಿಕೊಂಡಿರುವ ಪೂಜಾ ತಮ್ಮ ಮುಂದಿನ ಚಿತ್ರಕ್ಕೆ 2.5 ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂದು ಖಾಸಗಿ ವೆಬ್‌ ಸೈಟ್ ಒಂದು  ವರದಿ ಮಾಡಿದೆ. ಹೌದು, ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಬಾಲಿವುಡ್ ಟಾಲಿವುಡ್ ಕಾಲಿವುಡ್ ನಲ್ಲಿ ಮಿಂಚುತ್ತಿರುವ ಈ ನಟಿ ಇದೀಗ ಬರೋಬ್ಬರಿ ಚಿತ್ರವೊಂದಕ್ಕೆ ತಮ್ಮ ಸಂಭಾವನೆ ಯನ್ನು 2.5 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿ ಕೊಂಡಿದ್ದಾರೆ.

మరింత సమాచారం తెలుసుకోండి: