ಬೆಂಗಳೂರು: ಮಾಲ್ಗುಡಿ ಡೇಸ್, ಬಹು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಹೌದು, ಹತ್ತು ಹಲವಾರು ವಿಶೇಷತೆಗಳನ್ನು ಹೊತ್ತು ತಂದಿರುವ ಈ ಚಿತ್ರ ಈಗಾಗಲೇ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ವಿಜಯ ರಾಘವೇಂದ್ರ ಅಭಿನಯದ ಹೊಸ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಮಾಲ್ಗುಡಿ ಡೇಸ್‌’. ರೆಗ್ಯುಲರ್‌ ಜಾನರ್‌ನಿಂದ ಹೊರಬಂದು ಮಾಡಿರುವ ಈ ಸಿನಿಮಾದ ಲುಕ್ಸ್‌ ಗಮನ ಸೆಳೆಯುತ್ತಿದ್ದು, ಈಗ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. 
 
ಹ್ಯಾಟ್ರಿಕ್ ಹೀರೋ ನಟ ಶಿವರಾಜ ಕುಮಾರ್‌ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಕಿಶೋರ್‌ ಮೂಡಬಿದ್ರೆ ನಿರ್ದೇಶನದ ಈ ಚಿತ್ರವನ್ನು ಕೆ. ರತ್ನಾಕರ್‌ ಕಾಮತ್‌ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕಿಶೋರ್‌, “ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಾಲ್ಪನಿಕ ಕಥೆ ಇದು. ಮುಖ್ಯವಾಗಿ ಈ ಚಿತ್ರ ನೆನಪುಗಳ ಸುತ್ತ ಸಾಗಲಿದ್ದು, ಚಿತ್ರ ನೋಡುವ ಪ್ರತಿಯೊಬ್ಬರಿಗೂ ಇದು ತಮ್ಮ ಸುತ್ತಮುತ್ತಲಿನಲ್ಲಿ ನಡೆದ ಕಥೆಯೇನೋ ಎಂಬ ಭಾಸವಾಗುತ್ತದೆ. ಈ ಚಿತ್ರದ ಹೈಲೈಟ್‌ ಅಂದರೆ ವಿಜಯ ರಾಘವೇಂದ್ರ ಅವರು 75 ವರ್ಷ ವ್ಯಕ್ತಿಯಾಗಿ ಕಾಣಿಸಿ ಕೊಂಡಿರುವುದು. ಪ್ರಾಸ್ಥೆಟಿಕ್‌ ಮೇಕಪ್‌ ಮೂಲಕ ಅವರೊಬ್ಬ ಸಾಹಿತಿಯಾಗಿ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದುದ್ದಕ್ಕೂ ವಿಜಯ ರಾಘವೇಂದ್ರ ಅವರು ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲೇ ಕಾಣುತ್ತಾರೆ. ಕೇರಳ ಮೂಲದ ರೋಶನ್‌ ಆ ಮೇಕಪ್‌ ಮಾಡಿದ್ದಾರೆ. ಇದು ಬಿಟ್ಟರೆ, ಇದರ ನಡುವೆ ಬೇರೆ ಗೆಟಪ್‌ ಇದ್ದರೂ, ಅದು ಸಹ ವಿನೂತನವಾಗಿಯೇ ಇರಲಿದೆ’ ಎನ್ನುವುದು ನಿರ್ದೇಶಕರ ಅಭಿಮತ. ಚಿತ್ರ ಫೆಬ್ರವರಿ ಮೊದಲ ವಾರ ಬಿಡುಗಡೆ ಯಾಗಲಿದೆ ಎಂಬುದು ಸದ್ಯದ ಮಾಹಿತಿಯಾಗಿದೆ. 
 
ಮಾಲ್ಗುಡಿ ಡೇಸ್ ಚಿತ್ರವು ತುಂಬಾ ವಿಭಿನ್ನತೆಯನ್ನು ಹೊಂದಿದೆ. ಈ ಚಿತ್ರ ನೂರಾರು ನೆನಪುಗಳ ಮಧ್ಯೆ ಸಾಗುತ್ತದೆ. ಮಾಲ್ಗುಡಿ ಡೇಸ್ ಚಿತ್ರ ವೀಕ್ಷಿಸುವವರೆಲ್ಲರಿಗೂ ಇದು ನಮ್ಮ ಸುತ್ತಮುತ್ತಲಿನ ಸನ್ನಿವೇಶ ಅಲ್ಲವೇ ಎಂಬಂತೆ ಚಿತ್ರ ಭಾಸವಾಗುತ್ತದೆ. ಪ್ರಸ್ತುತ ಟೀಸರ್ ಔಟ್ ಆಗಿದ್ದು, ಸೆನ್ಸೇಷನ್ ಕ್ರಿಯೆಟ್ ಮಾಡುತ್ತಿದೆ.

మరింత సమాచారం తెలుసుకోండి: