ಬೆಂಗಳೂರು: ಸ್ಯಾಂಡಲ್ ವುಡ್ ನ ಕಾಮಿಡಿ ಸ್ಟಾರ್ ಚಿಕ್ಕಣ್ಣ ಹಾಗೂ ಶಿಶಿರ ಅಭಿನಯದ “ಬಿಲ್‌ಗೇಟ್ಸ್‌’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಹಾಗು ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದೇ ಖುಷಿಯಲ್ಲಿರುವ ಚಿತ್ರತಂಡ, ಈಗ ಸಂಕ್ರಾಂತಿಗೆ ಚಿತ್ರದ ಟ್ರೇಲರ್‌ ಬಿಡುಗಡೆಗೆ ಸಿದ್ದವಾಗಿದೆ. 
 
ಬಿಲ್ ಗೇಟ್ಸ್ ಟೀಸರ್ ಜನವರಿ 15ರಂದು ಬಿಡುಗಡೆಯಾಗಲಿದೆ.  ಈ ಕುರಿತು ಹೇಳುವ ನಿರ್ದೇಶಕ ಶ್ರೀನಿವಾಸ್‌, “ಚಿತ್ರ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಬಿಡುಗಡೆಗೊಂಡ ಹಾಡು, ಟೀಸರ್‌ ಜೋರು ಸದ್ದು ಮಾಡಿದೆ. ಈಗ ಸಂಕ್ರಾಂತಿ ಹಬ್ಬದಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು ಎರಡುವರೆ ನಿಮಿಷ ಇರುವ ಟ್ರೇಲರ್‌ ಅನ್ನು ವಿಶೇಷವಾಗಿ ಬಿಡುಗಡೆ ಮಾಡುವ ತಯಾರಿ ನಡೆದಿದೆ. ಇದು ಔಟ್‌ ಅಂಡ್‌ ಔಟ್‌ ಎಂಟರ್‌ಟೈನ್‌ಮೆಂಟ್‌ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇಲ್ಲಿದೆ.
 
ಹುಟ್ಟು ತರಲೆ ಹುಡುಗರು, ಹಳ್ಳಿಯಲ್ಲಿ ಸದಾ ಹಾವಳಿ ಇಡುತ್ತಿರುತ್ತಾರೆ. ಅವರಿಗೆ ಆ ಊರಿನಲ್ಲಿ ಒಬ್ಬ ಮಾಸ್ಟರ್‌ ಸ್ಪೂರ್ತಿಯಾಗುತ್ತಾರೆ. ಅವರಂತೆ, ನಾವೂ ಆಗಬೇಕು ಎಂಬ ಮನಸ್ಸು ಮಾಡುತ್ತಾರೆ. ಹಾಗಾಗಿ, ಸಾಧಿಸಬೇಕು ಅಂತ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಏನೆಲ್ಲಾ ಆಗಿ ಹೋಗುತ್ತೆ ಅನ್ನೋದು ಸಾರಾಂಶ. ಬೆಂಗಳೂರು, ಮೈಸೂರು, ಮಂಡ್ಯ, ಪಾಂಡವಪುರ, ಕೊಳ್ಳೆಗಾಲ, ಶ್ರೀರಂಗಪಟ್ಟಣ್ಣ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಈಗಾಗಲೇ ಪೋಸ್ಟರ್ ಗಳ ಮೂಲಕ ಭಾರೀ ಹವಾ ಕ್ರಿಯೇಟ್ ಮಾಡಿದೆ. 
 
ಬಿಲ್ ಗೇಟ್ಸ್ ಚಿತ್ರಕಥೆ ರಾಜಶೇಖರ್‌ ಬರೆದರೆ, ಸಂಭಾಷಣೆಯನ್ನು ರಾಜಶೇಖರ್‌ ಹಾಗೂ ಜಯ ಮಲ್ಲಿಕಾರ್ಜುನ್‌ ಬರೆದಿದ್ದಾರೆ. ನೊಬಿನ್‌ ಪೌಲ್‌ ಸಂಗೀತವಿದೆ. ರಾಕೇಶ್‌ ಪಿ.ತಿಲಕ್‌ ಛಾಯಾ ಗ್ರಹಣವಿದೆ. ಚಿತ್ರದಲ್ಲಿ ಅಕ್ಷರಾ ರೆಡ್ಡಿ ಮತ್ತು ರೋಜಾ ನಾಯಕಿಯರಾದರೆ, ಗಿರಿ, ಕುರಿಪ್ರತಾಪ್‌, ರಾಜಶೇಖರ, ವಿ.ಮನೋಹರ್‌, ಬ್ಯಾಂಕ್‌ ಜನಾರ್ದನ್‌, ರಾಜೇಶ್‌ ನಟರಂಗ ಇತರರು ನಟಿಸಿದ್ದಾರೆ. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಡಿ ಗೆಳೆಯರು ಸೇರಿ “ಬಿಲ್‌ಗೇಟ್ಸ್‌’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರವು ಪ್ರೆಬ್ರುವರಿ ಮೊದಲ ವಾರವೇ ತೆರಗಪ್ಪಳಿಸಲಿದೆ. 

మరింత సమాచారం తెలుసుకోండి: