ನ್ಯಾಚುರಲ್ ಬ್ಯೂಟಿ ಕ್ವೀನ್  ರೌಡಿ ಬೇಬಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿಗೆ ಲವ್ ಆಗಿದ್ಯಾ..? ನಿಜಕ್ಕೂ ಅದು ಸತ್ಯ ಆದ್ರೆ ರೌಡಿ ಬೇಬಿಗೆ ಇಷ್ಟ ಆಗಿರೋ ಆ ಹೀರೋ ಯಾರು ಗೊತ್ತಾ! ರೌಡಿ ಬೇಬಯ ಕಂಪ್ಲೀಟ್ ಲವ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
ಇದೇನು ಸಾಯಿ ಪಲ್ಲವಿ ಲವ್‌ ಮಾಡ್ತಿದ್ದಾರಾ..?  ಎಂದು ಶಾಕ್ ಆಯ್ತಾ!? ಹೌದು. ಆದರೆ ಸಾಯಿ ಪಲ್ಲವಿಯ ಲವ್‌ ಸ್ಟೋರಿ ತೆರೆಯ ಮೇಲಿನ ಪ್ರೇಮ ಕಥೆ. ಮಲಯಾಳಂನ ಪ್ರೇಮಂ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಮಲಯಾಳಂ, ತೆಲುಗು, ತಮಿಳು ನಟಿಗಳಲ್ಲಿ ಈಗಾಗಲೇ ಹಲವು ಸಿನಿಮಾ ಮಾಡಿದ್ದಾರೆ. ಇದೀಗ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸಿರುವ ತೆಲುಗು ಸಿನಿಮಾ 'ಲವ್‌ ಸ್ಟೋರಿ' ಯ ಮೊದಲ ಪೋಸ್ಟರ್ ಸಂಕ್ರಾಂತಿ ಸಂದರ್ಭ ಬಿಡುಗಡೆ ಯಾಗಿದೆ.
 
ಹೊಸ ಚಿತ್ರ ಲವ್‌ಸ್ಟೋರಿ ಯುವ ಜನರು ಮೆಚ್ಚು ವಂತಹ ಬ್ಯೂಟಿಫುಲ್‌ ಪ್ರೇಮ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ನಿರ್ದೇಶಕ ಶೇಖರ್ ಕಮ್ಮುಲ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಮೊದಲಬಾರಿ ಜೊತೆಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ. ನಿರ್ದೇಶಕ ಕಮ್ಮುಲ ಅವರ ಜೊತೆ ಸಾಯಿ ಪಲ್ಲವಿ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಮ್ಮುಲ ಜೊತೆ ಕೆಲಸ ಮಾಡಿದ್ದ ಸಾಯಿ ಪಲ್ಲವಿ ಫಿದಾ ಮೂಲಕ ವರುಣ್‌ ತೇಜ್‌ ಜೊತೆಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದು ಭಾರೀ ಹಿಟ್ ಆಗಿತ್ತು. 
 
ಸಿನಿಮಾ ಪೋಸ್ಟರ್‌ ನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡ ನಟ ನಾಗಚೈತನ್ಯ ಈ ಸಿನಿಮಾದ ತಿರುಳನ್ನು ಬಿಚ್ಚಿಡಲು ಇದಕ್ಕಿಂತ ಒಳ್ಳೆಯ ಟೈಟಲ್ ಇಲ್ಲ ಎಂದು ಬರೆದುಕೊಂಡಿದ್ದಾರೆ. ನಿರ್ಮಾಪಕ ರಾಮ್ ಮೋಹನ್ ರಾವ್‌ ಈ ಸಿನಿಮಾ ಪ್ರೋಡ್ಯೋಸ್ ಮಾಡುತ್ತಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದರ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಹ ಸದ್ದಿಲ್ಲದೇ ಮುಂದಾಲೋಚಿಸಲಾಗುತ್ತಿದೆ.

మరింత సమాచారం తెలుసుకోండి: