ಚಿತ್ರ ವಿಮರ್ಶೆ
ಚಿತ್ರ: ಜನ್‌ ಧನ್‌
ನಿರ್ಮಾಣ: ಶ್ರೀ ಸಿದ್ಧಿವಿನಾಯಕ ಫಿಲಂಸ್‌
ನಿರ್ದೇಶನ: ಮರಡಿಹಳ್ಳಿ ಟಿ.ನಾಗಚಂದ್ರ
ತಾರಾಗಣ: ಸುನೀಲ್‌ ಶಶಿ, ರಚನಾ, ಅರುಣ್‌, ಸಾಯಿ ಲಕ್ಷ್ಮಣ್‌, ಟಾಪ್‌ ಸ್ಟಾರ್‌ ರೇಣು, ಸುಮಂತ್‌ ಶರ್ಮ ಇತರರು.
ರೇಟಿಂಗ್: 3.5/5
 
ಜನ್ ದನ್, ಸ್ವಲ್ಪ ದಿನಗಳ ಹಿಂದಿನ ಜನಪ್ರಿಯ ಘೋಷಣೆಯಿದು. ಈಗಿನ ವಾಸ್ತವ ಪ್ರಪಂಚ ಯಾವ ರೀತಿಯಿದೆ, ಏನಾಗುತ್ತಿದೆ ಎಂಬುದಿದೆ. ದುಡ್ಡಿದ್ರೆ ದುನಿಯಾನೇ ನಮ್ಮಿಂದೆ ಬರುತ್ತೆ. ಜನ್‌ ಧನ್‌ ಕಪ್ಪು ಹಣ ಕುರಿತಾದ ಚಿತ್ರ. ಡಿಮಾನಿಟೇಜೇಶನ್‌ ನಂತರ ಆದಂತಹ ಸಮಸ್ಯೆಗಳು, ನಷ್ಟಗಳು, ಕಷ್ಟಗಳ ಕುರಿತು ಇಲ್ಲಿ ಹೇಳಲಾಗಿದೆ.
 
ಬೆಂಗಳೂರು ಮತ್ತು ಶಿರಾವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯೋ ಕಥೆ. ಇಡೀ ಚಿತ್ರ ಜರ್ನಿಯಲ್ಲೇ ಸಾಗುವುದರಿಂದ ಆ ಕಾರು ಎಷ್ಟು ವೇಗವಾಗಿ ಸಾಗುತ್ತೋ, ಅಷ್ಟೇ ವೇಗವಾಗಿ ಚಿತ್ರವೂ ಸಾಗುತ್ತೆ.ಹಾಗಾಗಿ ಇಲ್ಲಿ ವಿನಾಕಾರಣ ದೃಶ್ಯಗಳಿಲ್ಲ, ಸುಖಾಸುಮ್ಮನೆ ಪಾತ್ರಗಳ ಎಂಟ್ರಿಯೂ ಇಲ್ಲ.ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಹೊಂದಿರುವುದರಿಂದ, ಮೊದಲರ್ಧದಲ್ಲಿ ಕೊಂಚ ಗೊಂದಲ ಎನಿಸಿದರೂ, ದ್ವಿತಿಯಾರ್ಧದಲ್ಲಿ ಎಲ್ಲೂ ಗೊಂದಲಗಳಿಲ್ಲ.
 
ಕೇವಲ ಎರಡುಗಂಟೆ ಅವಧಿಯಲ್ಲೇ ಒಂದು ವ್ಯವಸ್ಥೆಯ ಹುಳುಕನ್ನೆಲ್ಲಾ ಹೊರಗೆಡುವ ಅಂಶ ಚಿತ್ರದ ಪ್ಲಸ್‌. ಆ ಬಗ್ಗೆ ನೋಡುವ ಕುತೂಹಲವಿದ್ದರೆ, “ಜನ್‌ ಧನ್‌’ ನೋಡಲ್ಲಡ್ಡಿಯಿಲ್ಲ. ಒಬ್ಬ ಸ್ವಾಭಿಮಾನಿ ನಿರ್ದೇಶಕನಿಗೆ ಹೊಸ ದೊಂದು ಸಿನಿಮಾ ಮಾಡುವ ಆಸೆ. ಆದರೆ, ಕಾಸಿಲ್ಲ. ಆ ಕಾರು ಬೆನ್ನು ಹತ್ತುವ ಇಬ್ಬರು ಖದೀಮರು ಒಂದು ಕಡೆಯಾದರೆ, ನಿರ್ದೇಶಕನನ್ನು ಕೊಲ್ಲಲು ಸಂಚು ರೂಪಿಸುವ ವ್ಯಕ್ತಿ ಇನ್ನೊಂದು ಕಡೆ. ಇದರೊಂದಿಗೆ ಕಾರಲ್ಲಿ ಗೋಲ್ಡ್‌ ಬಿಸ್ಕೆಟ್‌ ಬ್ಯಾಗ್‌ ಸಾಗಿಸುವ ಹೊಣೆ ನಿರ್ದೇಶಕನದ್ದು. ಕೊನೆಗೆ ಅಲ್ಲಿ ಏನಾಗುತ್ತೆ, ಎಷ್ಟೆಲ್ಲಾ ತೊಂದರೆ ಆಗುತ್ತೆ ಅನ್ನೋದು ಸಸ್ಪೆನ್ಸ್‌.
 
ಸುನೀಲ್‌ ಶಶಿ ಸೂಪರ್, ರಚನಾ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಅರುಣ್‌, ಸಾಯಿ ಲಕ್ಷ್ಮಣ್‌, ಟಾಪ್‌ಸ್ಟಾರ್‌ ರೇಣು, ಸುಮಂತ್‌ ಶರ್ಮ ಓಕೆ. ಟಾಪ್‌ ಸ್ಟಾರ್‌ ರೇಣು ಸಂಗೀತ ಒಂದು ಹಾಡು ಪರವಾಗಿಲ್ಲ. ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತ ಪೂರಕವಾಗಿದೆ. ಉಮೇಶ್‌ ಕಂಪ್ಲಾಪುರ್‌ ಛಾಯಾಗ್ರಹಣದಲ್ಲಿ ಜರ್ನಿಯ ಸೊಬಗಿದೆ. ಇನ್ನಷ್ಟು ಕುತೂಹಲವಿದ್ದರೆ ಚೆಂದವಿರೋದು.

మరింత సమాచారం తెలుసుకోండి: