ಚಿಕ್ಕಬಳ್ಳಾಪುರ: ಟಾಲಿವುಡ್‍ ನ ಖ್ಯಾತ ನಟಿ ಮೌರ್ಯಾನಿ, ಸೋಮವಾರ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ಬಳಿ ಇರುವ ಮಾನಸ ವೃದ್ಧಾಶ್ರಮದಲ್ಲಿ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡದ್ದಾರೆ. ಅಭಿಮಾನಿಗಳಿಗೆ ಈ ವಿಷಯ ಬಹು ಇಷ್ಟವಾಗಿದ್ದು , ಅವರ ಬರ್ತಡೇ ಸಂಭ್ರಮಾಚರಣೆ ಗೆ ಅರ್ಥ ಬಂದಿದೆ ಎಂದಿದ್ದಾರೆ.

 

ಹೌದು, ಯಾಕೆಂದರೆ ಬರ್ತಡೇ ಗೆ ಪಾರ್ಟಿಗಳು ಮಾಡುತ್ತಾ, ಎಂಜಾಯ್ ಮಾಡೋದು ನೋಡಿದ್ದೇವೆ ಆದರೆ ಈಗೆ ಅರ್ಥಪೂರ್ಣವಾಗಿ ಬರ್ತಡೇ ಆಚರಿಸುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಇಟಪನಹಳ್ಳಿ ಗ್ರಾಮದವರಾದ ಮೌರ್ಯಾನಿಯವರು, ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾಗ ತಮ್ಮ ಸಂಬಂದಿ ಜೊತೆ ವೃದ್ಧಾಶ್ರಮಕ್ಕೆ ಆಗಮಿಸಿ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅನಾಥಾ ಶ್ರಮದಲ್ಲಿ ಕೇಕ್ ಕತ್ತರಿಸಿ ವೃದ್ಧರಿಗೆ ಕೇಕ್ ತಿನ್ನಿಸುವುದರ ಮೂಲಕ ಸರಳ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಮೌರ್ಯಾನಿ ಯವರು ಇದೊಂದು ವಿಶೇಷ ಹುಟ್ಟು ಹಬ್ಬ ಅಂತ ಮನದಾಳದ ಇಂಗಿತ ವ್ಯಕ್ತಪಡಿಸಿದರು. ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ತೆಲುಗು ನಟಿ.

 

ಅಂದಹಾಗೆ ಪ್ರತಿ ಬಾರಿ ಹೋಟೆಲ್‍ ಗಳಲ್ಲಿ ಮನೆಯವರ ಜೊತೆ ಹುಟ್ಟು ಹಬ್ಬ ಆಚರಿಸುತ್ತಿದ್ದೆ. ಆದರೆ ಈ ಬಾರಿ ವೃದ್ಧಾಶ್ರಮದಲ್ಲಿ ಆಚರಣೆ ಮಾಡಿದ್ದು ತುಂಬಾ ಖುಷಿ ತಂದಿದೆ. ಆದರೆ ಈ ರೀತಿ ಮಕ್ಕಳು ಯಾಕೆ ತಮ್ಮ ಹೆತ್ತ ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಬಿಡುತ್ತಾರೆ ಎಂದು ನೋವು ತೋಡಿಕೊಂಡರು. ವೃದ್ಧಾಶ್ರಮದಲ್ಲಿದ್ದ ವೃದ್ಧರ ಜೊತೆ ಕೆಲ ಕಾಲ ಕಳೆದ ನಟಿ ಮೌರ್ಯಾನಿ ಈ ಹುಟ್ಟು ಹಬ್ಬ ತಮ್ಮ ಜೀವನದ ಅತ್ಯಂತ ಮರೆಯಲಾಗದ ದಿನ. ಮುಂದಿನ ವರ್ಷವೂ ಸಹ ಇದೇ ರೀತಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದಾಗಿ ತಿಳಿಸಿದರು.

 

ಅದರ ಜೊತೆಗೆ ಚಿತ್ರರಂಗದ ಬಗ್ಗೆ ಪ್ರತಿಕ್ರಿಯಿಸಿದ ಮೌರ್ಯಾನಿ, ತಮ್ಮ ಸಂಬಂಧಿಕರೊಬ್ಬರು ಟಾಲಿವುಡ್‍ನಲ್ಲಿ ಸಿನಿಮಾ ನಿರ್ಮಾಣ ಮಾಡಿದಾಗ ನನಗೆ ನಟನೆಗೆ ಅವಕಾಶ ಸಿಕ್ಕಿತ್ತು. ತದನಂತರ ತೆಲುಗು ಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕ ಕಾರಣ ಅಲ್ಲೇ ನಟಿಸಬೇಕಾಯಿತು. ಸದ್ಯ ಸ್ಯಾಂಡಲ್‍ವುಡ್‍ನಿಂದಲೂ ಅವಕಾಶಗಳು ಬರುತ್ತಿದ್ದು, ಸದ್ಯದಲ್ಲೇ ಸ್ಯಾಂಡಲ್‍ವುಡ್‍ನ ಚಲನಚಿತ್ರವೊಂದರಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

మరింత సమాచారం తెలుసుకోండి: