ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಮೇಲಿನ ಹತ್ಯಾಚಾರಗಳು ದೌರ್ಜನ್ಯ ಗಳು ಹೆಚ್ಚುತ್ತಿವೆ. ಹೌದು, ಇದಕ್ಕೆ ನಿದರ್ಶನವೆಂಬಂತೆಯೋ, ಸಮಾಜ ಜಾಗೃತಿ ಮೂಡಿಸಲು ಇದೀಗ ದೇವಿ ಶ್ರೀ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಅದ್ಯಾವ ಚಿತ್ರ ಗೊತ್ತಾ! ಇಲ್ಲಿದೆ ನೋಡಿ ಡೀಟೆಲ್ಸ್. 

 

ಮಹಿಳಾ ದೌರ್ಜನ್ಯದ ಸುತ್ತ ಸುತ್ತುತ್ತಿರುವ ಸ್ಯಾಂಡಲ್ ವುಡ್ ನ ಆ ಚಿತ್ರ ಯಾವುದು?

 

ಮಹಿಳಾ ದೌರ್ಜನ್ಯದ ಸುತ್ತ ಸುತ್ತುತ್ತಿರುವ ಸ್ಯಾಂಡಲ್ ವುಡ್ ನ ಆ ಚಿತ್ರ ಎಂದರೆ 'ಬೆಂಕಿಯಲ್ಲಿ ಅರಳಿದ ಹೂವು'. ಹೌದು, ವಿಶು ಆಚಾರ್‌ ನಿರ್ಮಾಣದ ಜೊತೆಗೆ ಹೀರೋ ಆಗಿಯೂ ನಟಿಸಿದ್ದಾರೆ. ಅಂದಹಾಗೆ, ಇದೊಂದು ಮಧ್ಯಮ ವರ್ಗದ ನೊಂದ ಹೆಣ್ಣಿನ ಕಥೆ ಇದೆ. ಅದರಲ್ಲೂ ನಾಯಕ ವಿಶು ಆಚಾರ್‌ ಅವರು, ಆರಂಭದಲ್ಲಿ ಒಂದಷ್ಟು ಕಹಿ ಅನುಭವ ಕಂಡವರು. ಅಲ್ಲದೆ, ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ನಡೆಯುವ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ನೋಡಿದವರು. ಇವೆಲ್ಲಾ ಅಂಶ ಇಟ್ಟುಕೊಂಡು, ಚಿತ್ರ ಮಾಡುವ ಉದ್ದೇಶದಿಂದ ಸಿನಿಮಾ ಮಾಡಿದ್ದಾರೆ.

 

ನಿರ್ದೇಶಕ ದೇವಿಶ್ರೀ ಪ್ರಸಾದ್‌ ಕೂಡ ಹಾಸನದಲ್ಲಿ ನೋಡಿ, ಕೇಳಿದ ಒಂದಷ್ಟು ಅಂಶಗಳನ್ನೂ ಚಿತ್ರಕ್ಕೆ ಸೇರಿಸಿದ್ದಾರೆ. ಚಿತ್ರದಲ್ಲಿ ಅನುಪಮಾ ಗೌಡ ಪ್ರಮುಖ ಆಕರ್ಷಣೆ. ಚಿತ್ರದಲ್ಲಿ ಅವರು ಒಬ್ಬ ಸೋಮಾರಿ ಗಂಡನ ಜೊತೆ ಸಂಕಷ್ಟಗಳೊಂದಿಗೆ ಬದುಕು ಸವೆಸುವ ಹೆಣ್ಣಾಗಿ ಪಾತ್ರ ಮಾಡಿದ್ದಾರೆ. 

 


ಅಂದಹಾಗೆ, ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಚಿತ್ರದ ಹಾಡು ಗಳನ್ನು ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ವಿ.ಮನೋಹರ್‌ ಸಂಗೀತದಲ್ಲಿ ದೊರಂಗೌ ಅವರು ಹೆಣ್ಣಿನ ಬವಣೆ ಕುರಿತು ಹಾಡನ್ನೂ ಬರೆದಿದ್ದಾರಂತೆ. ನಿರ್ಮಾಪಕರು ಇದೇ ವೇಳೆ ಚಿತ್ರಮಂದಿರಗಳ ಮಾಲೀಕರಿಗೆ ಮನವಿ ಇಟ್ಟರು. “ಇಂದು ಚಿತ್ರ ನೋಡಬಯಸುವ ಹೆಚ್ಚು ಮಂದಿ ಆಟೋ ಚಾಲಕರು, ಕಾರ್ಮಿಕರು, ಗಾರ್ಮೆಂಟ್ಸ್‌, ಹೋಟೆಲ್‌ ನೌಕರರು.

 

ಇವರೆಲ್ಲಾ ಮಾಲ್‌ ಗೆ ಹೋಗುವುದಿಲ್ಲ. ಹೋಗಲು ಅಷ್ಟೊಂದು ಹಣಕಾಸಿನ ಶಕ್ತಿಯೂ ಇರೋದಿಲ್ಲ. ಹಾಗಾಗಿ, ಚಿತ್ರಮಂದಿರ ಚೆನ್ನಾಗಿಟ್ಟು ಕೊಂಡರೆ, ಇವರ ಸಂಖ್ಯೆ ಹೆಚ್ಚುತ್ತದೆ. ಕನ್ನಡ ಸಿನಿಮಾಗಳಿಗೂ ಒಳ್ಳೆಯದಾಗುತ್ತೆ’ ಅಂದರು. ಈ ವೇಳೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಕೃಷ್ಣೇಗೌಡ, ನಾಗೇಂದ್ರ ಪ್ರಸಾದ್‌, ನಟ ಲಕ್ಷಣ್‌ ಇತರರು ಹಾಜರಿದ್ದರು.

మరింత సమాచారం తెలుసుకోండి: