ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್ 
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ
ನಿರ್ಮಾಣ: ವೈ.ಎನ್. ಶಂಕರೇಗೌಡ ಮತ್ತು ಮಿತ್ರರು
ಪಾತ್ರವರ್ಗ: ವಸಿಷ್ಠ ಸಿಂಹ, ಮಾನ್ವಿತಾ ಕಾಮತ್,ಅನಂತನಾಗ್, ಸುಮಲತಾ, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ ಇತರರು. 
 
ಬೆಂಗಳೂರು: ಡೈಲಾಗ್, ಪ್ರೀತಿ-ಪ್ರೇಮ, ದೇಶಪ್ರೇಮ, ಮತ್ಸರ, ವಂಚನೆ, ದೇಶ-ವಿದೇಶಗಳ ಮೇಲಾಟ, ಕೊನೆಗೆ ಭಾರತವೇ ಮಿಗಿಲು ಎಂದು ಸಾಧಿಸುವ ಹಠ.ಹೀಗೆ ಎಲ್ಲವನ್ನೂ ಒಟ್ಟೊಟ್ಟಿಗೇ ಪರದೆ ಮೇಲೆ ಮೂಡಿಸಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ. ಪ್ರೀತಿಯ ಜೊತೆಗೆ ದೇಶಪ್ರೇಮವನ್ನು ತೋರಿಸಿಕೊಟ್ಟಿದ್ದಾರೆ. 
 
ತದಲ್ಲೊಬ್ಬ ದೇಶಭಕ್ತ ಜೆಮಾಲಜಿಸ್ಟ್ (ಅನಂತನಾಗ್), ಆತನಿಗೆ ಡೈಮಂಡ್ ​ನಂಥ ಮೊಮ್ಮಗಳು (ಮಾನ್ವಿತಾ). ಇಂಗ್ಲೆಂಡ್ ​ನಲ್ಲಿ ಅನಿವಾಸಿ ಭಾರತೀಯ ದಂಪತಿ. (ಸುಮಲತಾ-ಪ್ರಕಾಶ್ ಬೆಳವಾಡಿ). ವಿಡಿಯೋ ಬ್ಲಾಗರ್ ಆಗಿರುವ ಅವರ ಪುತ್ರನಿಗೆ ಪ್ರಪಂಚ ಪರ್ಯಟನೆ ಹುಚ್ಚು. ಹಾಗೆ ಭಾರತಕ್ಕೆ ಬರುವ ಆತ (ವಸಿಷ್ಠ ಸಿಂಹ) ನೇರವಾಗಿ ತಲುಪುವುದೇ ಆ ಜೆಮಾಲಜಿಸ್ಟ್ ಮನೆಗೆ, ಅಲ್ಲಿಂದ ಶುರುವಾಗುತ್ತದೆ
 
ಡೈಮಂಡ್ ಮೊಮ್ಮಗಳು ಮೇದಿನಿ ಹಾಗೂ ವ್ಲಾಗರ್ ಅಲೆಮಾರಿ ಕನಿಷ್ಕ ನಡುವೆ ಕಿತ್ತಾಟ. ಭಾರತದಲ್ಲಿ ಬ್ರಿಟಿಷರ ಕೊಡುಗೆ ಇರುವ ಸ್ಥಳಗಳಿಗೆಲ್ಲ ಕರೆದೊಯ್ಯುವಂತೆ ಮೇದಿನಿಗೆ ಕನಿಷ್ಕ ಹೇಳುತ್ತಾನೆ. ಅಲ್ಲೆಲ್ಲ ಆತ ಬ್ರಿಟಿಷರ ಪರವಾಗಿ ಮಾತನಾಡಿದಾಗ ಅಸಲಿ ಇತಿಹಾಸ ಹೇಳಿ ವಾದಿಸುತ್ತ ಭಾರತದ ಹಿರಿಮೆ ವಿವರಿಸುತ್ತಾಳೆ ಮೇದಿನಿ.ಇದೇ ಪ್ರಪ್ರಥಮ ಬಾರಿಗೆ ನಾಯಕ ಆಗಿ ಕಾಣಿಸಿಕೊಂಡಿರುವ ವಸಿಷ್ಠ ಸಿಂಹ ಎಂದಿನಂತೆಯೇ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ನೆಗೆಟಿವ್ ಮಾತ್ರವಲ್ಲ ಪಾಸಿಟಿವ್ ಪಾತ್ರದಲ್ಲೂ ಕಲಾವಿದನೇ ಎಂದು ಅಭಿನಯದ ಮೂಲಕ ತೋರಿದ್ದಾರೆ. ಅನಂತನಾಗ್ ಎಂದಿನಂತೆ ಇಲ್ಲಿ ನಟನೆಯಲ್ಲಿ ರಿಯಲ್ ಜೆಮ್ ಮೊಮ್ಮಗಳಾಗಿ ಮಾನ್ವಿತಾ ಡೈಮಂಡ್​ ನಂತೆ ಮಿಂಚಿದ್ದಾರೆ. ಸಾಧು ಎಂದಿನಂತೆ ನಗಿಸಿದ್ದಾರೆ. 
 
ಅಂದಹಾಗೆ ಕನಿಷ್ಕ ಭಾರತಕ್ಕೆ ಬಂದಾಗ ಆತನ ಬ್ಯಾಗ್​ ನೊಳಕ್ಕೆ ಸೇರಿಕೊಳ್ಳುವ ಕಳ್ಳಸಾಗಣೆಯ ಡೈಮಂಡ್ ಆತನಿಗೆ ದೇಶದ್ರೋಹಿ ಎಂಬ ಅಪವಾದ ತರುತ್ತದೆ. ಅಪರಾಧಿ ನಾನಲ್ಲ ಎಂದು ಸಾಬೀತು ಪಡಿಸಲು ಅಸಲಿ ಡೈಮಂಡ್ ​ನ ಬೆನ್ನತ್ತಿ ಹೋಗುವ ಕನಿಷ್ಕನ ಹುಡುಕಾಟ ಪ್ರೇಕ್ಷಕರಿಗೆ ಅಸಲಿ ಇತಿಹಾಸವನ್ನು ತೆರೆದಿಡುತ್ತದೆ. ಅದೇ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರ. ವಾರಾಂತ್ಯದಲ್ಲಿ ಉತ್ತಮ ಮನರಂಜನೆ ಒದಗಿಸುತ್ತದೆ.

మరింత సమాచారం తెలుసుకోండి: