ಬಹುಭಾಷಾ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಖಾಸಗಿ ಜೀವನದ ಕುರಿತು ಆಗಾಗ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಸಾಧ್ಯವಾದಾಗಲೆಲ್ಲ ಆ ಬಗ್ಗೆ ಮಾಹಿತಿ ನೀಡುತ್ತಾರೆ ಮಿಲ್ಕಿ ಬ್ಯೂಟಿ. ಈಗ ತಮ್ಮ ಆಹಾರ ಪದ್ಧತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಮೊದಲೆಲ್ಲ ಮಾಂಸಾಹಾರ ಸೇವಿಸುತ್ತಿದ್ದ ಅವರು ನಂತರದ ದಿನಗಳಲ್ಲಿ ಸಂಪೂರ್ಣ ಸಸ್ಯಹಾರಿಯಾದರು. ಹಾಗಾದರೆ ಮಾಂಸಾಹಾರಿ ಯಾಗಿದ್ದ ಅವರು ಸಸ್ಯಹಾರಿಯಾಗಲು ಕಾರಣವೇನು ಗೊತ್ತಾ!? ಆ ಅಚ್ಚರಿಗೆ ಕಾರಣವಾದ ಉತ್ತರ ಇಲ್ಲಿದೆ ನೋಡಿ.
 
ತಮ್ಮ ವೈಯಕ್ತಿಕ ವಿಚಾರಗಳಲ್ಲಿ ನಟ-ನಟಿಯರು ಶಿಸ್ತು ಕಾಪಾಡಿಕೊಂಡು ಬರುತ್ತಾರೆ. ಊಟ-ತಿಂಡಿಯಲ್ಲೂ ಕಟ್ಟುನಿಟ್ಟಿನ ನಿಯಮ ಪಾಲಿಸುವ ಸೆಲೆಬ್ರಿಟಿಗಳಿದ್ದಾರೆ. ಆ ಪೈಕಿ ತಮನ್ನಾ ಭಾಟಿಯಾ ಕೂಡ ಒಬ್ಬರು. ದೇಶಾದ್ಯಂತ ಜನಪ್ರಿಯತೆ ಗಿಟ್ಟಿಸಿರುವ ಈ ನಟಿ ಆಹಾರ ಪದ್ದತಿಯಲ್ಲಿ ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅಚ್ಚರಿ ಎಂದರೆ, ಅವರು ಮಾಂಸಾಹಾರ ಸೇವಿಸುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ತಮನ್ನಾ ಮಾಂಸಾಹಾರ ಸೇವಿಸುತ್ತಿದ್ದರು. ಆದರೆ ಜೀವನದ ಒಂದು ಹಂತದಲ್ಲಿ ಅವರಿಗೆ ಅದರ ಬಗ್ಗೆ ತಿಳಿವಳಿಕೆ ಮೂಡಿತು. ಕೂಡಲೇ ಮಾಂಸಾಹಾರ ತ್ಯಜಿಸುವ ನಿರ್ಧಾರಕ್ಕೆ ಅವರು ಬಂದರಂತೆ. ಅಂದಹಾಗೆ, ಅವರ ಜೀವನದಲ್ಲಿ ಈಬದಲಾವಣೆಗೆ ಒಂದು ಪುಸ್ತಕ ಕಾರಣವಾಗಿದೆ. ರೋರಿ ಫ್ರೀಡ್‌ ಮನ್‌ ಮತ್ತು ಕಿಮ್‌ ಬರ್ನೋಯಿನ್‌ ಬರೆದ 'ಸ್ಕಿನ್ನಿ ಬಿಚ್‌' ಪುಸ್ತಕ ಓದಿದ ಬಳಿಕ ತಮನ್ನಾ ಬದಲಾದರಂತೆ. ಸಸ್ಯಾಹಾರದ ಮಹತ್ವ ಸಾರುವ ಈ ಪುಸ್ತಕದಿಂದ ಅವರಿಗೆ ಸಾಕಷ್ಟು ಅನಕೂಲ ಆಗಿದೆ. ಜೀವನದಲ್ಲಿ ಮತ್ಯಾವತ್ತೂ ಮಾಂಸಾಹಾರ ಸೇವನೆ ಮಾಡಬಾರದು ಎಂದು ಅವರು ನಿರ್ಧರಿಸಿದರೆಂಬುದು ತಿಳಿದು ಬಂದಿದೆ. 
 
ಸದಾ ಶೂಟಿಂಗ್‌ ಸಲುವಾಗಿ ಬ್ಯುಸಿ ಆಗಿರುವ ತಮನ್ನಾಗೆ ಪುಸ್ತಕಗಳನ್ನು ಓದಲು ಸಮಯ ಸಿಗುವುದಿಲ್ಲ. ಹಾಗಾಗಿ ಅವರಿಗೆ ಹೆಚ್ಚು ಪುಸ್ತಕಗಳನ್ನು ಓದಲು ಸಾಧ್ಯವಾಗುವುದಿಲ್ಲವಂತೆ. ಇರುವ ಸಮಯದಲ್ಲೇ ಹೊಂದಾಣಿಕೆ ಮಾಡಿಕೊಂಡು ಕೆಲವು ಪುಸ್ತಕಗಳನ್ನು ಅವರು ಓದಿದ್ದಾರೆ. ಅವುಗಳಲ್ಲಿ ಓಶೋ ಬರೆದ 'ದ ಟ್ರೂ ನೇಮ್‌' ಕೂಡ ಪ್ರಮುಖವಾದದ್ದು. ಈ ಪುಸ್ತಕ ಓದಿದ ನಂತರ ಆಧ್ಯಾತ್ಮದ ಬಗ್ಗೆ ತಮನ್ನಾಗೆ ಇದ್ದ ಅರಿವು ವಿಸ್ತಾರ ಆಯಿತಂತೆ. 'ಈ ಎರಡು ಪುಸ್ತಕಗಳು ನನ್ನ ಬದುಕನ್ನು ಬದಲಾಯಿಸಿವೆ' ಎಂದು ತಮನ್ನಾ ತಿಳಿಸಿದ್ದಾರೆ

మరింత సమాచారం తెలుసుకోండి: