ಇತ್ತೀಚೆಗಷ್ಟೇ ಸಾಂಸ್ಕೃತಿಕ ನಗರಿ ಮೈಸೂರು ಮಹಾನಗರ ಪಾಲಿಕೆಯ ಉಪ ಮೇಯರ್‌ ಆಗಿ ಆಯ್ಕೆಯಾದ ಶ್ರೀಧರ್‌ ಗೆ ಅಚ್ಚರಿಯಾದ ಸಂಗತಿ ಇದು. ದೂರವಾಣಿ ಕರೆಯೊಂದನ್ನು ಅನುಸರಿಸಿ ಹೋದರೆ ಅಲ್ಲಿ ದೊರಕಿದ್ದು ‘ಬಾಕ್ಸ್‌ ಆಫೀಸ್‌ ಸುಲ್ತಾನ್‌’, ನಟ ದರ್ಶನ್‌ ಅವರ ಆತ್ಮೀಯ ಔತಣ, ಹೌದು ಏನದು, ಯಾಕೆ ಗೊತ್ತಾ... ಮುಂದೆ ಓದಿ... 
 
ಸಿನಿಮಾ ಚಟಿವಟಿಕೆಗಳಲ್ಲಿ ದರ್ಶನ್‌ ಎಷ್ಟೇ ಬ್ಯುಸಿಯಾಗಿದ್ದರೂ ಖಾಸಗಿ ಬದುಕಿಗೆ ತಂದಷ್ಟು ಸಮಯ ಮೀಸಲಿಡುತ್ತಾರೆ. ಗೆಳೆಯರ ಜೊತೆ ಸೇರಿ ಮಸ್ತಿ ಮಾಡುತ್ತಾರೆ. ಅದು ಎಷ್ಟೇ ಹಳೆಯ ಸ್ನೇಹವಾದರೂ ಸರಿ, ಅದನ್ನು ನೆನಪಿಟ್ಟುಕೊಂಡಿರುತ್ತಾರೆ. ಅದಕ್ಕೆ ಈಗ ಲೇಟೆಸ್ಟ್‌ ಉದಾಹರಣೆ ಸಿಕ್ಕಿದೆ. ನಟ ದರ್ಶನ್‌ ಮತ್ತು ಶ್ರೀಧರ್‌ ಇಬ್ಬರೂ ಬಾಲ್ಯದ ಸ್ನೇಹಿತರು. ಒಟ್ಟಿಗೆ ತಿರುಗಾಡಿದವರು. ಮನೆಯಲ್ಲಿ ತಿಳಿಸದೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರು. ಬಳಿಕ ಬದುಕಿನ ಪಯಣದಲ್ಲಿ ಒಬ್ಬರು ಕನ್ನಡನಾಡಿನ ಸೂಪರ್‌ ಸ್ಟಾರ್‌ ಆದರು.
 
ಮತ್ತೊಬ್ಬರು ಈಗಷ್ಟೇ ಒಳ್ಳೆಯ ಪದವಿಗೇರಿದರು. ದರ್ಶನ್‌ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಬಾಲ್ಯ ಸ್ನೇಹಿತರನ್ನು ಮರೆತಿಲ್ಲ. ಬಿಡುವು ದೊರೆತಾಗ ಕೆಲವರನ್ನು ಭೇಟಿಯಾಗಿ ಅಚ್ಚರಿ ನೀಡುತ್ತಾರೆ. ಅಂಥ ಅಚ್ಚರಿಯನ್ನು 2 ದಿನದ ಹಿಂದೆ ಶ್ರೀಧರ್‌ ಅವರಿಗೂ ನೀಡಿದರು. ತಮಗೆ ಬಂದ ದೂರವಾಣಿ ಕರೆ ಆಧರಿಸಿ ಶ್ರೀಧರ್‌ ಅವರು ಹೋಟೆಲ್‌ಗೆ ಹೋದರೆ, ಅಲ್ಲಿ ಕೆಲವರು ಅವರನ್ನು ಕರೆದೊಯ್ದು ಕೇಕ್‌ ಮುಂದೆ ನಿಲ್ಲಿಸಿದರು. ‘ಉಪ ಮೇಯರ್‌ ಆಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು ಗೆಳೆಯ’ ಎಂದು ಮತ್ತೊಮ್ಮೆ ಅಪ್ಪಿಕೊಂಡರು. ಕೇಕ್‌ ಕತ್ತರಿಸಿ ಶ್ರೀಧರ್‌ಗೆ ತಿನ್ನಿಸಿದರು, ಎಲ್ಲರಿಗೂ ಹಂಚಿದರು. ‘ಇಷ್ಟಕ್ಕೆ ನಿಲ್ಲಬೇಡ ಗೆಳೆಯ, ರಾಜಕೀಯದಲ್ಲಿ ಇನ್ನೂ ಎತ್ತರದ ಸ್ಥಾನದಲ್ಲಿ ನಿನ್ನನ್ನು ನೋಡಬೇಕು’ ಎಂದರು.
 
 
ನಾವಿಬ್ಬರೂ ಒಟ್ಟಿಗೆ ಓದಿದವರು. ಒಟ್ಟಿಗೆ ಆಡಿದವರು. ದರ್ಶನ್ ಇಂದು ಬಹುದೊಡ್ಡ ನಟ. ಎತ್ತರಕ್ಕೆ ಬೆಳೆದಿದ್ದಾರೆ. ಆದರೂ ಗೆಳೆಯನನ್ನು ಮರೆತಿಲ್ಲ. ಉಪಮೇಯರ್‌ ಆಗಿರುವುದಕ್ಕೆ ಸಂತೋಷಕೂಟ ಏರ್ಪಡಿಸಿ ಅಚ್ಚರಿ ನೀಡಿದ್ದಾರೆ. ಆತನ ಸ್ನೇಹಕ್ಕೆ ಮನದುಂಬಿ ಬಂದಿದೆ ಎಂದು ಉಪ ಮೇಯರ್‌ ಶ್ರೀಧರ್‌ ಹೇಳಿದ್ದು ಅಭಿಮಾನಿಗಳಿಗೆ ಸಹ ದಿಲ್ ಖುಷ್ ಆಗಿದೆ.

మరింత సమాచారం తెలుసుకోండి: