ಸದ್ಯ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯ ಸೆನ್ಸೆಶೇನ್ ಹುಟ್ಟಿಸಿರುವುದೇ ಗೋದ್ರಾ. ಹೌದು, ಹುಟ್ಟು ದರಿದ್ರ್ರಾಗಿದ್ದರೂ ಸಾವು ಚರಿತ್ರೆ ಆಗಬೇಕು, ಫ್ರೀಡಮ್ ಯಾವತ್ತೂ ಫ್ರೀ ಆಗಿ ಸಿಗಲ್ಲ, ರಕ್ತ ಹರಿಸಬೇಕು ಇಂತಹ ಪವರ್​ಫುಲ್ ಡೈಲಾಗ್ಸ್ ಕೇಳಿಬಂದಿದ್ದು ‘ಗೋದ್ರಾ’ ಚಿತ್ರದ ಟೀಸರ್​ನಲ್ಲಿ. ಹೌದು, ಏನೀ ಡೈಲಾಗ್ಸ್ ಗಳ ಅಸಲೀ ಕತೆ ಎಂಬುದು ಇಲ್ಲಿದೆ ನೋಡಿ. 
 
ಕಾಲೇಜು, ಪ್ರೇಮಕಥೆ, ರಾಜಕೀಯ ವ್ಯವಸ್ಥೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಕುರಿತ ಸಿನಿಮಾ ಇದು ಎಂಬುದು ಟೀಸರ್ ಮೂಲಕ ಸ್ಪಷ್ಟವಾಗಿ ಗೋಚರವಾಗುತ್ತದೆ. ಎರಡು ವರ್ಷ ಸಮಯ ತೆಗೆದುಕೊಂಡು ಸಿನಿಮಾ ಮಾಡಿ, ಟೀಸರ್ ಬಿಡುಗಡೆ ಮೂಲಕ ‘ಗೋದ್ರಾ’ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ನಟ ಸತೀಶ್ ನೀನಾಸಂ, ‘ಮೂರು ಶೇಡ್​ಗಳಲ್ಲಿಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಮಾಜದ ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಟ ಇರುವ ಸಿನಿಮಾ ಇದು.
 
ನಾನು ಕೂಡ ಹೋರಾಡುತ್ತಲೇ ಬಡತನದಿಂದ ಮೇಲೆ ಬಂದಿದ್ದೇನೆ.ಬಡವರು ಬಡವರಾಗಿಯೇ ಇದ್ದಾರೆ. ಅವರು ಬಡತನದಿಂದ ಮೇಲೆ ಬರಲು ಕೆಲವು ವ್ಯವಸ್ಥೆಗಳು ಬಿಡುತ್ತಿಲ್ಲ. ಅದರ ವಿರುದ್ಧ ಕ್ರಾಂತಿ ಮಾಡಬೇಕು ಎಂದು ಈ ಸಿನಿಮಾ ಎಚ್ಚರಿಸುತ್ತದೆ’ ಎಂದರು.‘ಎಲ್ಲ ಕಾಲಗಳ ದೃಶ್ಯಗಳು ಬೇಕಿದ್ದರಿಂದ ಚಿತ್ರೀಕರಣ ತಡವಾಯಿತು. ಎಲ್ಲರೂ ಸಾಕಷ್ಟು ಶ್ರಮವಹಿಸಿ ಒಂದೊಳ್ಳೆಯ ಥ್ರಿಲ್ ನೀಡುವ ಸಿನಿಮಾ ಮಾಡಿದ್ದು, ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ ನೀನಾಸಂ ಸತೀಶ್. 
 
‘ಗೋದ್ರಾ’ ಕಮರ್ಷಿಯಲ್ ಚಿತ್ರ. ನನ್ನ ಬದುಕಿನಲ್ಲಿ ನಡೆದ ಕೆಲವು ಘಟನೆಗಳ ಕುರಿತು ಕಥೆ ಬರೆದು ಸಿನಿಮಾ ಮಾಡಿದ್ದೇನೆ. ಮಧ್ಯಮವರ್ಗದ ಜನರ ದಿನನಿತ್ಯದ ಹೋರಾಟದ ಕುರಿತು ತಿಳಿಸುವ ಚಿತ್ರ. ಇದರ ನಡುವೆ ಪ್ರೀತಿ, ರಾಜಕಾರಣ, ನಕ್ಸಲಿಸಂ ಬಂದು ಹೋಗಲಿದೆ’ ಎಂದರು ನಿರ್ದೇಶಕ ಕೆ.ಎಸ್.ನಂದೀಶ್.ನಿತ್ಯಾ ಎಂಬ ಶ್ರೀಮಂತ ಹುಡುಗಿಯ ಪಾತ್ರ ನನ್ನದು. ಕಾಲೇಜಿನಲ್ಲಿ ಮಧ್ಯಮ ವರ್ಗದ ಹುಡುಗನ ಜತೆ ಸ್ನೇಹ ಬೆಳೆಯುತ್ತದೆ, ಬಳಿಕ ಪ್ರೀತಿಯಾಗುತ್ತದೆ. ಆತನಿಗೆ ರಾಜಕೀಯ, ಹೋರಾಟದಲ್ಲಿ ಆಸಕ್ತಿ. ಅವನಿಗೆ ಸಹಾಯ ಮಾಡುವುದು ನನ್ನ ಪಾತ್ರ. ಒಂದೊಳ್ಳೆಯ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂಬ ಖುಷಿ ಇದೆ ಎಂದು ಸಿನಿಮಾ ಕುರಿತು ಮಾತನಾಡಿದರು ನಟಿ ಶ್ರದ್ಧಾ.
 
 
 

మరింత సమాచారం తెలుసుకోండి: