ಬೆಂಗಳೂರು: ಶೈನ್ ಶೆಟ್ಟಿ ಅವರು ಬಿಗ್​ ಬಾಸ್ ಸೀಸನ್​ 7ರ ಸ್ಪರ್ಧಿಯಾಗಿ ಭಾಗವಹಿಸಿದ್ದರು ಸತತ 113 ದಿನಗಳು ದೊಡ್ಡ ಮನೆಯಲ್ಲಿಯಿದ್ದು ಈ ಸೀಸನ್​ ವಿನ್ನರ್​ ಆಗಿ ಹೊರಹೊಮ್ಮಿದರು ರನರ್​ ಅಪ್​ ಆಗಿ ಕುರಿ ಪ್ರತಾಪ್​ ಅವರು ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ವಿನ್ನರ್ ಶೈನ್ ಶೆಟ್ಟಿ ಇದೀಗ ಏನ್ ಹೇಳಿದ್ದಾರೆ ಗೊತ್ತಾ!? 
 
​ಪ್ರಸ್ತುತ ಶೈನ್​ ಶೆಟ್ಟಿ ಅವರು ಬಾಗ್ ​ಬಾಸ್​​ ಕಿರೀಟ ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದ್ದಾರೆ. ದೊಡ್ಡ ಮನೆಯಿಂದ ಹೊರಬಂದ ನಂತರ ನೇರವಾಗಿ ಮನೆಗೆ ಹೋಗದೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿ ತಮ್ಮ ಸಂಭ್ರಮ ಹಂಚಿ ಕೊಂಡಿದ್ದಾರೆ. ಅಷ್ಟೇ ಅಲ್ಲದೇ, ತಮ್ಮದೇ ಆದ ಫುಡ್​ಟ್ರಕ್​ಗೆ ಭೇಟಿ ನೀಡಿ ಕೆಲಕಾಲ ಅಲ್ಲೇ ಇದ್ದು, ದೊಸೆ ಹಾಕಿ, ವ್ಯಾಪಾರ ಮಾಡಿದರು. ಈ ಬಗ್ಗೆ ಶೈನ್​ ಶೆಟ್ಟಿ ಅ ಜೊತೆ ಮಾತನಾಡಿದ್ದು, ನಾನು ನಿಂತಿರುವ ಜಾಗದಿಂದ ನನ್ನ ಜರ್ನಿ ಶುರುವಾಯ್ತು ಸದ್ಯ ಇಲ್ಲಿಗೆ ಈಗ 4 ತಿಂಗಳ ಬಳಿಕ ಬಂದಿದ್ದೇನೆ. ಏನೋ ಒಂಥರ ಡಿಫರೆಟ್​ ಫಿಲಿಂಗ್ಸ್​​ ಆಗತ್ತಾ ಇದೆ. ಇಷ್ಟು ದಿನ ಒಂದೇ ಮನೆಯಲ್ಲಿದ್ದೆ. ಇದೀಗ ಯಾವುದೋ ಬೇರೆ ಪ್ರಪಂಚಕ್ಕೆ ಬಂದಂತೆ ಆಗುತ್ತಿದೆ ಎಂದು ತಮ್ಮ ಭಾವನೆ ಗಳನ್ನು ಹಂಚಿಕೊಂಡರು.
 
ಈ ಹಿಂದೆ ಬಿಗ್​ ಬಾಗ್​ ವಿನ್ನರ್ ​ಅನ್ನು ಘೋಷಣೆ ಮಾಡಿದಾಗ ಅವರು ಗೆಲ್ಲಬೇಕಿತ್ತು ಇವರು ಗೆಲ್ಲಬೇಕಿತ್ತು ಎಂದು ಚರ್ಚೆ ನಡೆಯುತ್ತಿತ್ತು ಆದರೆ ಈ ಸಲ ಆ ರೀತಿಯ ಘಟನೆಗಳಿಗೆ ಜಾಗವಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬಾ ಸಂತೋಷವಾಗುತ್ತಿದೆ. ಯಾರಿಗೂ ಕೂಡ ಈ ನಿರ್ಧಾರ ಬಗ್ಗೆ ಬಯಸ್ಡ್​​ ಆಗಿ ಇರಲಿಲ್ಲ, ತುಂಬಾ ಜನ ನನಗಂತೂ ಇಲ್ಲಿತನಕ ಸಿಕ್ಕಿದವರೆಲ್ಲಾ ಅದನ್ನೇ ಹೇಳುತ್ತಿದ್ದರು ಇದು ಬಳಹ ಸಂತೋಷ ಕೊಡುತ್ತೆ ಎಂದರು. ಸದ್ಯ ನಾನು ಪ್ರೀಯಾಗಿದ್ದೇನೆ. ಫ್ಯಾಮಿಲಿ ಯೊಂದಿಗೆ ಕಾಲ ಕಳೆಯಬೇಕಿದೆ, ವಿನ್ನರ್ ಆಗಿದ್ದು ಖುಷಿ ನೀಡಿದೆ ಎಂದು ತಿಳಿಸಿದ್ದಾರೆ.
 
 

మరింత సమాచారం తెలుసుకోండి: