ಪ್ರಸಕ್ತ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲಿಸ್​ ನಲ್ಲಿ ಅದ್ದೂರಿಯಾಗಿ ನಡೆದಿದ್ದು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಯಾರಿಗೆ ಒಲಿದಿದ ಗೊತ್ತಾ!? ಪ್ರತಿಷ್ಠಿತ ಆಸ್ಕರ್ ನ ಅತ್ಯುತ್ತಮ ನಟ ನಟಿಯಾಗಿ ಯಾರು ಹೊರಹೊಮ್ಮಿದ್ದಾರೆ ಗೊತ್ತಾ!? ಇಲ್ಲಿದೆ ನೋಡಿ ಮಾಹಿತಿ. 
 
ಪ್ರಪ್ರಥಮವಾಗಿ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ಸೌತ್ ಕೊರಿಯ ಮೂಲದ ‘ಪ್ಯಾರಾಸೈಟ್’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲ ಚಿತ್ರದ ನಿರ್ದೇಶಕ ಬೊಂಗ್ ಜೋನ್ ಹು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿದೆ. ಇನ್ನುಳಿದಂತೆ ಬೆಸ್ಟ್ ಒರಿಜಿನಲ್ ಸ್ಕ್ರೀನ್ ​ಪ್ಲೆ ಮತ್ತು ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಅವಾರ್ಡ್ ಸೇರಿ ಒಟ್ಟು ನಾಲ್ಕು ಆಸ್ಕರ್ ಮುಡಿಗೇರಿಸಿಕೊಂಡಿದೆ. 
 
ಕಳೆದ ವರ್ಷ ಹಾಲಿವುಡ್​ನಲ್ಲಿ ಸಿದ್ಧವಾಗಿದ್ದ ‘ಜೋಕರ್’ ಸಿನಿಮಾದ ಅಭಿನಯಕ್ಕಾಗಿ ಜಾಕ್ವಿನ್ ಫೊನೆಕ್ಸ್ ಮೊದಲ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ‘ಜೂಡಿ’ ಚಿತ್ರದ ನಾಯಕಿ ರೇನಿ ಜೆಲ್ವಗೇರ್ ಅತ್ಯುತ್ತಮ ನಟಿಯಾಗಿ ಎರಡನೇ ಆಸ್ಕರ್ ಎತ್ತಿ ಹಿಡಿದಿದ್ದಾರೆ. ‘ಒನ್ಸ್ ಅಪಾನ್ ಅ ಟೈಮ್ ಚಿತ್ರದಲ್ಲಿನ ನಟನೆಗಾಗಿ ಹಾಲಿವುಡ್ ನಟ ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾದರೆ, ಲೌರಾ ಡೆರ್ನ್ ‘ಮ್ಯಾರೇಜ್ ಸ್ಟೋರಿ’ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಅವಾರ್ಡ್ ಪಡೆದಿದ್ದಾರೆ.
 
ಪ್ರಶಸ್ತಿ ವಿಜೇತರ ಪಟ್ಟಿ:-
 
ಅತ್ಯುತ್ತಮ ಚಿತ್ರ: ಪ್ಯಾರಾಸೈಟ್
ಅತ್ಯುತ್ತಮ ನಿರ್ದೇಶಕ: ಬೊಂಗ್ ಜೋನ್ ಹು (ಪ್ಯಾರಾಸೈಟ್)
ಅತ್ಯುತ್ತಮ ನಟ: ಜಾಕಿನ್ ಫೊನೆಕ್ಸ್ (ಜೋಕರ್)
ಅತ್ಯುತ್ತಮ ನಟಿ: ರೇನಿ ಜೆಲ್ವಗೇರ್ (ಜೂಡಿ)
ಅತ್ಯುತ್ತಮ ಅನಿಮೇಟೆಡ್ ಸಿನಿಮಾ: ಟಾಯ್ ಸ್ಟೋರಿ 4
ಅತ್ಯುತ್ತಮ ಅನಿಮೇಟೆಡ್ ಶಾರ್ಟ್ ಫಿಲಂ: ಹೇರ್ ಲವ್
ಅತ್ಯುತ್ತಮ ಅಡಾಪ್ಡೆಡ್ ಸ್ಕ್ರೀನ್​ಪ್ಲೇ: ಜೋಜೊ ರ್ಯಾಬಿಟ್
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ದಿ ನೇಬರ್ಸ್ ವಿಂಡೋ
ಅತ್ಯುತ್ತಮ ಡಾಕ್ಯುಮೆಂಟರಿ: ಅಮೇರಿಕನ್ ಫ್ಯಾಕ್ಟರಿ
ಅತ್ಯುತ್ತಮ ಹಿನ್ನೆಲೆ ಸಂಗೀತ: ಹಿಲ್ಡರ್ (ಜೋಕರ್)
ಅತ್ಯುತ್ತಮ ಓರಿಜಿನಲ್ ಸಾಂಗ್: ಎಲ್ಟನ್ ಜಾನ್, ಬೆರ್​ನಿ (ದಿ ರಾಕೆಟ್ ಮ್ಯಾನ್)

మరింత సమాచారం తెలుసుకోండి: