ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಫೆ.14 ಪ್ರೇಮಿಗಳ ದಿನದಂದೇ ಲಿಪ್ ಲಾಕ್ ಮಾಡಿದ್ದಾರೆ. ಅದು ಯಾರ ಜೊತೆ ಗೊತ್ತಾ!? ಇಲ್ಲಿದೆ ನೋಡಿ ಆ  ಇಂಟರೆಸ್ಟಿಂಗ್ ಸ್ಟೋರಿ. 
 
ದಿ ವಿಲನ್​ ಗುಂಗಿನಿಂದ ಹೊರ ಬಂದಿರೋ ಜೋಗಿ ಪ್ರೇಮ್, ಮತ್ತೆ ಲವ್​ ಸ್ಟೋರಿ ಮೊರೆ ಹೋಗಿದ್ದಾರೆ. ಬಾವಮೈದುನ ರಾಣಾನ ಹೀರೋ ಮಾಡಿ ಏಕ್​​ ಲವ್​ ಯಾ ಅನ್ನೋ ರೊಮ್ಯಾಂಟಿಕ್​ ಆ್ಯಕ್ಷನ್​ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ವ್ಯಾಲಂಟೇನ್ಸ್​ ಡೇ ಸ್ಪೆಷಲ್ಲಾಗಿ ಸಿನಿಮಾ ಟೀಸರ್​​ ರಿಲೀಸ್​​ ಆಗಿದ್ದು, ರಚ್ಚು​ ಬೋಲ್ಡ್​ ಅವತಾರ ನೋಡಿದವರು ದಂಗಾಗಿದ್ದಾರೆ.
 
ಹೌದು, ಪ್ರೇಮ್​​ ಬಹಳ ವರ್ಷಗಳ ನಂತರ ಲವ್​ ಸ್ಟೋರಿ ಹೇಳೊಕ್ಕೆ ಬರ್ತಿದ್ದು, ಟೀಸರ್​​ ಮೂಲಕ ಸೆನ್ಸೇಷನ್​ ಕ್ರಿಯೇಟ್ ಮಾಡಿದ್ದಾರೆ. ಇವತ್ತಿನ ಜಮಾನಕ್ಕೆ ಪ್ರೇಮ್​​ ಅಪ್​ ಡೇಟ್​ ಆಗಿರೋದು ಗೊತ್ತಾಗ್ತಿದ್ದು, ಬಹಳ ವಿಭಿನ್ನ ಕಥೆಯನ್ನ ಹೇಳೋ ಪ್ರಯತ್ನ ಮಾಡ್ತಿದ್ದಾರೆ ಅನ್ನಿಸ್ತಿದೆ. ಮೊದಲ ಬಾರಿಗೆ ರಾಣಾ ಹೀರೋ ಆಗಿ ಮಿಂಚಿದ್ದು, ರೀಷ್ಮ ಮತ್ತು ರಚಿತಾ ರಾಮ್​ ನಾಯಕಿಯರಾಗಿ ಸ್ಕ್ರೀನ್​ ಶೇರ್​ ಮಾಡ್ಕೊಂಡಿದ್ದಾರೆ.
 
ಚಿತ್ರಕ್ಕೆ ಪ್ರೇಮ್​​ ಆ್ಯಕ್ಷನ್​ ಕಟ್​ ಹೇಳಿದ್ರು, ಇದು ರಾಣಾ ಆರಂಗೇಟ್ರಂ ಸಿನಿಮಾ ಆಗಿದ್ರು, ಟೀಸರ್ ​ನಲ್ಲಿ ಎಲ್ಲರ ಹುಬ್ಬೇರಿಸಿರೋದು ಡಿಂಪಲ್​ ಕ್ವೀನ್​ ರಚಿತಾ ರಾಮ್.. ಏಕ್​ ಲವ್​ ಯಾ ಸಿನಿಮಾದಲ್ಲಿ ಡಿಂಪಲ್​ ಕ್ವೀನ್​ ಕೊಂಚ ಬೋಲ್ಡ್​ ಆಗಿಯೇ ದರ್ಶನ ಕೊಟ್ಟಿದ್ದಾರೆ. ರಾಣಾ ಜೊತೆ ರಚ್ಚು ಸಿಗರೇಟ್​ ಹಚ್ಚಿಕೊಳ್ಳೋದ್ರಿಂದ ಶುರುವಾಗೂ ಟೀಸರ್​, ಇಬ್ಬರು ತುಟಿಗೆ ತುಟಿ ಒತ್ತುವ ಮೂಲಕ ಕೊನೆಯಾಗುತ್ತದೆ. ಟೀಸರ್​ ಗೂ ಮೊದ್ಲೆ ರಚಿತಾ ರಾಮ್​ ಸಿಗರೇಟ್​ ಸೇದೋ ಸ್ಟಿಲ್ಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿತ್ತು. ಇದೀಗ ಟೀಸರ್​ನಲ್ಲೂ ಅದನ್ನ ಹೈಲೆಟ್​ ಮಾಡಲಾಗಿದೆ. 
 
ಉಪ್ಪಿ ಹೀರೋ ಆಗಿ ನಟಿಸಿದ್ದ ಐ ಲವ್​ ಯೂ ಚಿತ್ರದ ಹಾಡಿನಲ್ಲಿ ಬೋಲ್ಡ್​​​ ಆಗಿ ಕಾಣಿಸಿಕೊಂಡಿದ್ದ ರಚಿತಾ ಮುಂದೆ ಹೀಗೆ ನಟಿಸಲ್ಲ ಅಂದಿದ್ರು. ಆದರೆ, ಏಕ್​ ಲವ್​ ಯಾ ಸಿನಿಮಾದಲ್ಲಿ ಮತ್ತೆ ಅದೇರೀತಿ ಕಾಣಿಸಿಕೊಂಡಿರೋದು ನೋಡ್ತಿದ್ರೆ, ಚಿತ್ರದಲ್ಲಿ ಅವರ ಪಾತ್ರ ಹೇಗಿರುತ್ತೇ! ಅನ್ನೋ ಕುತೂಹಲ ಕೆರಳಿಸುತ್ತಿದೆ

మరింత సమాచారం తెలుసుకోండి: