ಈ ಹಿಂದೆ ಸಂಯುಕ್ತ-2 ಸಿನಿಮಾ ನಿರ್ದೇಶಿಸಿದ್ದ ಅಭಿರಾಮ್ ಈಗ ಕಾಮಿಡಿ ಎಂಟರ್ ಟೈನ್ಮೆಂಟ್ ಸಿನಿಮಾ ಮೂಲಕ ಪ್ರೇಕ್ಷಕನ್ನು ರಂಜಿಸಲು ಸಜ್ಜಾಗಿದ್ದಾರೆ. ಹೌದು, ಪ್ರೆಸೆಂಟ್ ಪ್ರಪಂಚ 0% ಲವ್ ಎಂಬ ಕಾಮಿಡಿ ಎಂಟರ್ ಟೈನ್ಮೆಂಟ್ ಕಂ ಥ್ರಿಲ್ಲರ್ ಎಲಿಮೆಂಟ್ ಇರೋ ಸಿನಿಮಾ ನಿರ್ದೇಶನ ಮಾಡಿ ಬಿಡುಗಡೆ ಹಂತಕ್ಕೆ ಬಂದಿದ್ದಾರೆ. 
 
ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ಪೋಸ್ಟರ್ ರಿಲೀಸ್ ಮಾಡೋ ಮುಖಾಂತರ ಚಿತ್ರತಂಡ ಕುತೂಹಲ ಉಂಟುಮಾಡಿದೆ. ಪೋಸ್ಟರ್ ಗಳ ಮೂಲಕವೇ ಭಾರೀ ಕುತೂಹಲ ಹುಟ್ಟು ಹಾಕಿರುವ ಚಿತ್ರ ಇದಾಗಿದ್ದು 2ನೇ ಪೋಸ್ಟರ್ ಸಹ ಭಾರೀ ಸದ್ದು ಮಾಡುತ್ತಿದೆ. ಸಂಯುಕ್ತ-2 ಚಿತ್ರಕ್ಕೆ ನಿರ್ಮಾಪಕರಾಗಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ.
 
ಈ ಚಿತ್ರಕ್ಕಾಗಿ ತೂಕ ಇಳಿಸಿಕೊಂಡು ಸಖತ್ ಯಂಗ್ ಲುಕ್ ನಲ್ಲಿ ಅರ್ಜುನ್ ಮಂಜುನಾಥ್ ಕಾಣಿಸಿಕೊಂಡಿದ್ದಾರೆ. ಸಂಭ್ರಮಶ್ರೀ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಪ್ರೆಸೆಂಟ್ ಪ್ರಪಂಚ 0% ಲವ್ ಸಿನಿಮಾ ಪ್ರಸ್ತುತ ಸಾಫ್ಟ್ ವೇರ್ ಯುಗದಲ್ಲಿ ಕಳೆದು ಹೋದ ಜನರು ತಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡಿದ್ದಾರೆ, ಏನಿದ್ರೆ ಜೀವನ ಚೆನ್ನಾಗಿರುತ್ತೆ ಎಂಬ ಸೂಕ್ಷ್ಮ ಎಳೆ ಇಟ್ಟುಕೊಂಡು ಈ ಚಿತ್ರ ಹೆಣೆಯಲಾಗಿದೆ. ಇದನ್ನು ಕಾಮಿಡಿ ಎಂಟಟೈನ್ಮೆಂಟ್ ಮೂಲಕ ತೆರೆ ಮೇಲೆ ತರೋ ಪ್ರಯತ್ನವನ್ನು ನಿರ್ದೇಶಕ ಅಭಿರಾಮ್ ಮಾಡಿದ್ದಾರೆ.
 
ಸಾಪ್ಟವೇರ್ ಜೀವನದ ಎಳೆ ಎಳೆಯನ್ನು ಚಿತ್ರಿಸಲಾಗಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಪ್ರಸೆಂಟ್ ಪ್ರಪಂಚ 0% ಲವ್ ಚಿತ್ರ ಮಾರ್ಚ್ ತಿಂಗಳಲ್ಲಿ ಥಿಯೇಟರ್ ಗೆ ಲಗ್ಗೆ ಇಡಲಿದೆ. ತಬಲ ನಾಣಿ, ಚಂದನ್ ಆಚಾರ್, ಓಂ ಪ್ರಕಾಶ್ ರಾವ್,ಗೋವಿಂದೇ ಗೌಡ, ಯಶಸ್ ಅಭಿ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರಕ್ಕೆ ಕೃಷ್ಣ ಮೂರ್ತಿ ಎಲ್, ರವಿಕುಮಾರ್ ಹೆಚ್.ಪಿ ಬಂಡವಾಳ ಹೂಡಿದ್ದು, ರವಿ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆಯ ಮುನ್ಸೂಚನೆಗಳು ಸಿಕ್ಕಿವೆ.
 
 

మరింత సమాచారం తెలుసుకోండి: