ಬೆಂಗಳೂರು: ಸಲಗ, ಸ್ಯಾಂಡಲ್ ವುಡ್ ನಲ್ಲಿ ಇದೀಗ ಭಾರೀ ಸದ್ದು ಮಾಡಲು ಶುರು ಮಾಡ್ತಿರೋ ಚಿತ್ರ ಸಲಗ. ಹೌದು, ಕೊನೆಗೂ ಟೈಟಲ್ ​ಗೆ ತಕ್ಕಂತೆ ‘ಸಲಗ, ನಡೆದಿದ್ದೇ ದಾರಿ..’ ಎಂಬಂತಾಗಿದೆ. ಆ ಮೂಲಕ ಒಂದು ಕಡೆ ಅಂದುಕೊಂಡಂತೆ ಆಗದಿದ್ದರೂ, ಮತ್ತೊಂದೆಡೆ ನುಡಿದಂತೆ ನಡೆದಂತಾಗಿದೆ. ಅದೇಗೆ ಗೊತ್ತಾ!? ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಸ್ಟೋರಿ. 
 
ಇದೀಗ ಸಲಗ ನಡೆದಿದ್ದೇ ದಾರಿ.ಹೌದು, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣದ, ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಬಹುನಿರೀಕ್ಷಿತ ಅದ್ದೂರಿ ಸಿನಿಮಾ ‘ಸಲಗ’, ಟೈಟಲ್ ​ನಲ್ಲಿನ ‘ನಡೆದಿದ್ದೇ ದಾರಿ’ ಎಂಬ ಟ್ಯಾಗ್ ​ಲೈನ್ ​ಗೆ ತಕ್ಕಂತೆ ತನ್ನದೇ ಹಾದಿಯಲ್ಲಿ ಸಾಗುತ್ತಿದೆ. ಈ ಮೊದಲು ‘ದುನಿಯಾ’ ಚಿತ್ರದ ಫೀಲಿಂಗ್​ನಲ್ಲಿದ್ದ ‘ಸಲಗ’ ಚಿತ್ರತಂಡ ಅದೇ ಜಾಡಿನಲ್ಲಿ ಸಾಗಲು ನಿರ್ಧರಿಸಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವೂ ಆಗಿತ್ತು. ಆದರೆ ಕಾರಣಾಂತರಗಳಿಂದ ಅಂದುಕೊಂಡಂತೆ ಆಗಿಲ್ಲ. 2007ರ ಫೆ. 23ರಂದು ತೆರೆ ಕಂಡಿದ್ದ ಸೂರಿ ನಿರ್ದೇಶನದ ‘ದುನಿಯಾ’ ಮೂಲಕ ವಿಜಯ್ ನಾಯಕ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.
 
ಆ ಚಿತ್ರದ ಭರ್ಜರಿ ಯಶಸ್ಸು ನಾಯಕ-ನಿರ್ದೇಶಕರ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿದ್ದರಿಂದ, ನಿರ್ದೇಶಕ ‘ದುನಿಯಾ ಸೂರಿ’ ಹಾಗೂ ನಾಯಕ ‘ದುನಿಯಾ ವಿಜಿ’ ಎಂದೇ ಪ್ರಖ್ಯಾತರಾದರು. ಇನ್ನು ‘ಸಲಗ’ ವಿಜಿ ಅವರ ಪ್ರಪ್ರಥಮ ನಿರ್ದೇಶನದ ಚಿತ್ರವಾಗಿರುವುದರಿಂದ ಮತ್ತು ‘ದುನಿಯಾ’ದಲ್ಲಿ ಸಿಕ್ಕಂಥ ಯಶಸ್ಸು ‘ಸಲಗ’ದಲ್ಲೂ ಸಿಗಬೇಕು ಎಂಬ ಆಶಯದಿಂದ ಕೆಲವೊಂದು ವಿಷಯದಲ್ಲಿ ‘ದುನಿಯಾ’ ಜಾಡಲ್ಲೇ ಸಾಗುವ ಆಶಯ ವಿಜಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ವಿಚಾರದಲ್ಲಿ ‘ದುನಿಯಾ’ ಹಾದಿ ಹಿಡಿದಿದ್ದ ಚಿತ್ರತಂಡ ಸಿನಿಮಾ ಬಿಡುಗಡೆ ವಿಚಾರದಲ್ಲೂ ಅದೇ ದಾರಿಯಲ್ಲೇ ನಡೆಸಲು ತೀರ್ಮಾನಿಸಿದೆ. 
 
ಟೈಟಲ್ ಸಾಂಗ್ ಬಹಳ ವಿಶೇಷವಾಗಿ ಚಿತ್ರೀಕರಿಸಲು ಮಿನರ್ವ ಮಿಲ್ಸ್ ನಲ್ಲಿ 6ವಿಭಿನ್ನ ಸೆಟ್​ ಗಳನ್ನು ಹಾಕಿ, ಆರು ದಿನ ಶೂಟಿಂಗ್ ಮಾಡಬೇಕಿತ್ತು. ಆದ್ದರಿಂದ ಟೈಟಲ್ ಸಾಂಗ್ ಶೂಟಿಂಗ್ ಕಳೆದ ವಾರವಷ್ಟೇ ಮುಗಿದಿದೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ನಡೆಯುತ್ತಿವೆ. ಅದಕ್ಕೆ 15-20ದಿನಗಳು ಬೇಕಾದ್ದರಿಂದ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬೇಕಾಗುತ್ತದೆ’ ಎಂದು ನಿರ್ಮಾಪಕರು ಹೇಳಿದ್ದಾರೆ.

మరింత సమాచారం తెలుసుకోండి: