ಬೆಂಗಳೂರು: ಹ್ಯಾಟ್ರಿಕ್ ಹೀರೋ ಸೆಂಚೂರಿ ಸ್ಟಾರ್ ಶಿವರಾಜ್ ​ಕುಮಾರ್ ಅಭಿಮಾನಿಗಳಿಗೆ ಡಬಲ್ ಧಮಾಕ. ಹೌದು, ಒಂದು ಕಡೆ ಶಿವಣ್ಣ ಆನಂದ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಣ್ಣ ಹಚ್ಚಿ 34 ವರ್ಷಗಳಾದ್ರೆ, ಜೊತೆಗೆ ಅವರ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಈ ಎರಡು ಖುಷಿಯನ್ನು ಅಭಿಮಾನಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಹೌದು, ಆ ಸ್ಟೋರಿ ಇಲ್ಲಿದೆ ನೋಡಿ. 
 
ಅಣ್ಣಾವ್ರ ಮಗ, ಹ್ಯಾಟ್ರಿಕ್​ ಹೀರೋ, ಸೆಂಚೂರಿ ಸ್ಟಾರ್, ಕರುನಾಡ ಚಕ್ರವರ್ತಿ ಅಂತೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಶಿವಣ್ಣ, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 34 ವರ್ಷ. 1986ರಲ್ಲಿ ಮೊದಲ ಸಿನಿಮಾ ಆನಂದ್, ಸತತ 38 ವಾರಗಳ ಯಶಸ್ವಿ ಪ್ರದರ್ಶನ ಕಂಡು ಚಿತ್ರರಂಗಕ್ಕೆ ಒಬ್ಬ ಅದ್ಭುತ ನಟನನ್ನ ಕೊಟ್ಟಿತ್ತು.ಇದೀಗ ಆ ನಟ ಸೂಪರ್​ ಸ್ಟಾರ್ ಆಗಿ 122 ಸಿನಿಮಾಗಳನ್ನು ಪೂರೈಸಿದ್ದಾರೆ.
 
ಆನಂದ್​ ಸಿನಿಮಾ 24 ವರ್ಷ ಪೂರೈಸಿದ ಬೆನ್ನಲ್ಲೇ ಅಭಿಮಾನಿಗಳು ಕೇಕ್​ ಕತ್ತರಿಸಿ, ಹೂಮಾಲೆ ಹಾಕಿ, ಪುಟ್ಟದೊಂದು ಗೌರವ ಸಮರ್ಪಿಸಿದರು. ಇನ್ನು ಇದೇ ದಿನ ಶಿವಣ್ಣನ 123ನೇ ಸಿನಿಮಾ ಆರ್.ಡಿ.ಎಕ್ಸ್ ಸೆಟ್ಟೆರಿದ್ದು ಕೂಡ ವಿಶೇಷವಾಗಿತ್ತು. ಅಂದ್ಹಾಗೇ ಆರ್.​ಡಿ.ಎಕ್ಸ್​ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಪವರ್ ​ಸ್ಟಾರ್​ ಪುನೀತ್ ರಾಜ್​ಕುಮಾರ್ ಮತ್ತು ಬೆಂಗಳೂರಿನ ಪೊಲೀಸ್ ಕಮೀಷನರ್​ ಭಾಸ್ಕರ್​ ರಾವ್​ ಆಗಮಿಸಿ, ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ಇನ್ನು ಈಗಾಗಲೇ ತಮಿಳಿನಲ್ಲಿ ಈಟಿ ಎಂಬ ಸೂಪರ್​ ಹಿಟ್ ಚಿತ್ರವೊಂದನ್ನ ನಿರ್ದೇಶನ ಮಾಡಿರೋ ರವಿ ಅರಸು ಕನ್ನಡದಲ್ಲಿ ಫಸ್ಟ್ ಟೈಮ್​ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಹಾಗೂ ಸೂಪರ್​ಸ್ಟಾರ್ ರಜಿನಿಕಾಂತ್, ಕಮಲ ಹಾಸನ್, ಡಾ.ವಿಷ್ಣುವರ್ದನ್​ ರ ಸಿನಿಮಾಗಳನ್ನ ನಿರ್ಮಾಣ ಮತ್ತು ಡಿಸ್ಟ್ರಿಬ್ಯೂಟ್ ಮಾಡಿರೋ ತಮಿಳಿನ ಸತ್ಯಜ್ಯೋತಿ ಫಿಲ್ಮ್ ​ನ ತ್ಯಾಗರಾಜ್​ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ.
 
ಪ್ರಸ್ತುತ ಆರ್​.ಡಿ.ಎಕ್ಸ್​ ಚಿತ್ರೀಕರಣ ಹಿಮಾಚಲ ಪ್ರದೇಶ, ಬಾಂಬೆ, ಭೂಪಾಲ್, ಹುಬ್ಬಳ್ಳಿ ಸೇರಿದಂತೆ ಹಲವೆಡೆ ನಡೆಯಲಿದ್ದು, ಏಪ್ರಿಲ್​ನಿಂದ ಶೂಟಿಂಗ್​ ಶುರುವಾಗಲಿದ್ಯಂತೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ವರ್ಷ ನವೆಂಬರ್​ ಅಥವಾ ಅಕ್ಟೋಬರ್​ ಗೆ ಸಿನಿಮಾ ಬಿಡುಗಡೆಯಾಗಲಿದೆ.

మరింత సమాచారం తెలుసుకోండి: