ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮತ್ತು ಪ್ರತೀ ಸುದ್ದಿಯಿಂದಲೇ ಭಾರೀ ಸದ್ದು ಮಾಡಿದ್ದ ದುನಿಯಾ ಸೂರಿ ಕಲ್ಪನೆಯ ಭೂಗತ ಜಗತ್ತು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಮೂಲಕ ಅನಾವರಣವಾಗಿದೆ. ಟೀಸರ್​ ನಿಂದ ಹುಚ್ಚೆಬಿಸಿಕೊಂಡ ಪ್ರೇಕ್ಷಕ ಭರ್ಜರಿಯಾಗಿ ಡಾಲಿ ಧನಂಜಯ ಬಳಗವನ್ನು ಬಾಚಿ ಅಪ್ಪಿಕೊಂಡಿದ್ದಾನೆ. ಹೌದು, ಚಿತ್ರದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
ದುನಿಯಾ ಸೂರಿ ಕಲ್ಪನೆಯ ಭೂಗತ ಲೋಕವೇ ಬೇರೆ. ನಿಜವಾದ ಅಂಡರ್ ​​ವರ್ಲ್ಡ್​ ಮೀರಿದ ಅಪ್ ಗ್ರೇಡ್ ಅವರ ಸಿನಿ ಕಲ್ಪನೆ. ಸಿನಿಮಾದಿಂದ ಸಿನಿಮಾಕ್ಕೆ ರಾನೇಸ್ ಅನ್ನು ಹೆಚ್ಚೆಚ್ಚು ತೋರಿಸುತ್ತ ಪ್ರೇಕ್ಷಕರಿಗೆ ಚಿರಪರಿಚಿತರಾದವರು ನಿರ್ದೇಶಕ ಸೂರಿ. ಅದಕ್ಕೆ ಅವರನ್ನ ಸುಕ್ಕ ಸೂರಿ ಎನ್ನುತ್ತೇ ಚಿತ್ರರಂಗ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿಯೂ ರಾ ನೇಸ್ ಎದ್ದು ಕಾಣುತ್ತದೆ , ಸೂರಿ ಅಂಡರ್​ ವರ್ಲ್ಡ್ ಕಲ್ಪನೆ ಮುಂದಿನ ಹಂತಕ್ಕೆ ಸಾಗಿದೆ ಎಂದರೆ ತಪ್ಪಾಗಲಾರದು. 
 
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಸ್ಟೋರಿ ಏನು ಅನ್ನೋದನ್ನು ಸ್ಪಷ್ಟವಾಗಿ ಹೇಳೋದು ಕಷ್ಟ. ಜೈಲು ಶಿಕ್ಷೆಯನ್ನು ಅನುಭವಿಸಿದ ದೇವಿಕಾ ಮತ್ತು ಆಕೆಯ ಪುಟ್ಟ ಕಂದಮ್ಮ, ಬಿಸಿ ರಕ್ತದ ಟೈಗರ್ ಸೀನ , ಸೀನನಿಗೊಬ್ಬಳು ಲವ್ವರು, ಹೆಂಡತಿ, ದೇವಿಕಳೋಟ್ಟಿಗೆ ಲವ್ ಅಫೇರ್, ಅವನ ಸ್ನೇಹಿತ ಮೂಗ , ಅಕ್ಕ-ಭಾವ, ಅಮ್ಮ, ಬೆಂಗಳೂರು ಡಾನ್, ಹಾವು ರಾಣಿ ಹಿಂಗೆ ಸೂರಿಯವರ ಕಲ್ಪನೆ ವರ್ಣಿಸಲಸಾಧ್ಯವಾಗಿದೆ. ಡಾಲಿ ಧನುಂಜಯ್ ನಟನೆ ನೋಡಗರ ಹೃದಯ ತಟ್ಟಿದ್ದರೆ, ನಟಿ ನಟನೆ ಅದ್ಭುತವಾಗಿ ಮೂಡಿಬಂದಿದೆ. 
 
ಸುಧೀರ್ ನಿರ್ಮಾಣದಲ್ಲಿ ಸಾಕಷ್ಟು ಶ್ರಮವಹಿಸಿ ಅದ್ಭುತವಾಗಿ ಸಿದ್ದವಾಗಿ ನಿಂತಿದೆ ಪಾಪ್ ಕಾರ್ನ್ ಮಂಕಿ ಟೈಗರ್. ಮ್ಯೂಸಿಕ್ , ಮೇಕಿಂಗ್ ಎಲ್ಲವೂ ಎಕ್ಸ್​​ಲೆಂಟ್. ಡೈಲಾಗ್ಸ್​​​​, ರಕ್ತ , ಧೂಮಪಾನ , ಮದ್ಯಪಾನ ಕೊಂಚ ಅತೀ ಅನ್ನಿಸೋದು ಸುಳ್ಳಲ್ಲ. ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್​​ ಇದು ಪಡ್ಡೆ ಹೈಕ್ಳಾ ಮಾಸ್ ಎಂಟರ್ ​​​ಟೈನರ್ ಎನ್ನಬಹುದು. ಫ್ಯಾಮಿಲಿ ನೋಡುದು ಕೊಂಚ ಕಷ್ಟವಾದರೂ ಸಹ ಪಡ್ಡೆ ಹೈಕಳಿಗೆ ಮೆಚ್ಚಲಿದೆ.

మరింత సమాచారం తెలుసుకోండి: