ತಲೈವ ಸೂಪರ್ ​ಸ್ಟಾರ್ ರಜನಿಕಾಂತ್ ಅವರ 168 ನೇ ಸಿನಿಮಾಗೆ  ಟೈಟಲ್ ಫಿಕ್ಸ್ ಆಗಿದ್ದು, ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ‘ಸನ್ ಪಿಕ್ಚರ್ಸ್’ ನಿರ್ವಿುಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಮೋಷನ್ ಪೋಸ್ಟರ್ ಮೂಲಕ ರಿಲೀಸ್ ಮಾಡಲಾಗಿದೆ. ‘ವಿಶ್ವಾಸಂ’, ‘ವೀರಂ’, ‘ವೇದಾಳಂ’ ಚಿತ್ರದ ಯಶಸ್ವಿ ನಿರ್ದೇಶಕ ಸಿರುಥೈ ಸಿವಾ ‘ಅಣ್ಣಾತೆ’ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೌದು, ತಲೈವ ಚಿತ್ರಕ್ಕಾಗಿ ಈಗಲೇ ಅಭಿಮಾನಿಗಳಿಂದ ನಿರೀಕ್ಷೆ ಹೆಚ್ಚಿದೆ. 
 
ಸಿವಾ ಮತ್ತು ರಜನಿ ಕಾಂಬಿನೇಷನ್ ​ನಿಂದಲೇ ಭಾರೀ ಹವಾ ಕ್ರಿಯೇಟ್ ಮಾಡಿರುವ ಈ ಸಿನಿಮಾದ ಟೈಟಲ್ ಕೂಡ ವಿಶಿಷ್ಟವಾಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಸೂರಿ ಸೇರಿ ಬಹುತಾರಾಗಣವನ್ನು ಈ ಚಿತ್ರ ಹೊಂದಿದೆ. ಹಿರಿಯರಿಗೆ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ತಮಿಳಿನಲ್ಲಿ ‘ಅಣ್ಣಾದೆ’ ಎಂದು ಸಂಬೋಧಿಸುತ್ತಾರೆ. 
 
ಟೈಟಲ್ ನೋಡಿದರೆ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್ ಡಾನ್ ಅಥವಾ ಪ್ರಭಾವಿ ವ್ಯಕ್ತಿಯಾಗಿ ಅಬ್ಬರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ರಜನಿಕಾಂತ್ ಪುತ್ರಿಯಾಗಿ ನಟಿಸುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಡಿ ಇಮಾನ್ ಮೊದಲ ಬಾರಿಗೆ ಸೂಪರ್ ಸ್ಟಾರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸಿವಾ ನಿರ್ದೇಶನದ ‘ವಿಶ್ವಾಸಂ’, ರಜನಿಕಾಂತ್ ನಟನೆಯ ‘ಪೇಟಾ’ ಒಂದೇ ದಿನ ಬಿಡುಗಡೆಯಾಗಿ ಬಾಕ್ಸ್ ಆಫೀಸ್​ ನಲ್ಲಿ ಕ್ಲ್ಯಾಷ್ ಆಗಿತ್ತು. ಈಗ ರಜನಿಕಾಂತ್​ ಗೆ ಅದೇ ಸಿವಾ ನಿರ್ದೇಶನ ಮಾಡುತ್ತಿದ್ದಾರೆ. 
 
ರಜನಿ ಚಿತ್ರಕ್ಕೆ ತಮಿಳಿನಲ್ಲಿ ಮಾತ್ರವಲ್ಲದೇ ಹಿಂದಿ ಮತ್ತು ತೆಲುಗಿನಲ್ಲಿಯೂ ಸಹ ಭಾರೀ ಬೇಡಿಕೆಯಿದೆ. ವಿದೇಶಗಳಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ತಲೈವ ರಜನಿಯ  ಅಣ್ಣಾದೆ ಚಿತ್ರಕ್ಕಾಗಿ ಈಗಿನಿಂದಲೇ ಕಾಯುವಿಕೆ ಶುರುವಾಗಿದೆ. ಚಿತ್ರದಲ್ಲಿ ಮತ್ತೊಮ್ಮೆ ರಜನಿ ಕಾಂತ್ ಕಮಾಲ್ ಮಾಡೋದು ಪಕ್ಕಾ ಆಗಿದೆ. ಆದ್ದರಿಂದಲೇ ಅಭಿಮಾನಿಗಳಿಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.

మరింత సమాచారం తెలుసుకోండి: