ಚೆನ್ನೈ: ನಟ ವಿಕ್ರಂ, ತನ್ನ ಹೆಸರಲ್ಲೇ ಅದ್ಭುತ ಗತ್ತನ್ನು ಹೊಂದಿರುವ ಬಹುಭಾಷಾ ನಟ ವಿಕ್ರಂ. ಪ್ರತಿಯೊಂದು ಚಿತ್ರದಲ್ಲೂ ಪ್ರಯೋಗಗಳನ್ನು ಮಾಡಿ, ಭಾರೀ ಖ್ಯಾತಿ ಯನ್ನು ಪಡೆದಿರುವ ನಟ ವಿಕ್ರಂ ಅಭಿನಯದ ಕೋಬ್ರಾ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು ಫುಲ್ ವೈರಲ್ ಆಗಿದೆ. 
 
ವಿಕ್ರಂ ಅಭಿನಯದ ಹೊಸ ಚಿತ್ರ ‘ಕೋಬ್ರಾ’ದಲ್ಲೂ ಚಿಯಾನ್ ವಿಕ್ರಂ ತನ್ನ ಅಭಿಮಾನಿಗಳನ್ನು ನಿರಾಶೆಪಡಿಸಿಲ್ಲ. ‘ಕೋಬ್ರಾ’ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರನ್ನು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ‘ಸೆವೆನ್ ಸ್ಕ್ರೀನ್ ಸ್ಟುಡಿಯೋಸ್’ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದು, ಈ ಫೊಸ್ಟರ್ ನಲ್ಲಿ ವಿಕ್ರಂ ಏಳು ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಇದರೊಂದಿಗೆ ‘ಕೋಬ್ರಾ’ ಚಿತ್ರದ ಕುರಿತಾಗಿ ಚಿಯಾನ್ ಅಭುಮಾನಿಗಳೂ ಸೇರಿದಂತೆ ಚಿತ್ರ ರಸಿಕರ ಕುತೂಹಲ ನೂರು ಪಟ್ಟು ಹೆಚ್ಚಿದೆ. 
 
‘ಕಾಯುವಿಕೆ ಮುಕ್ತಾಯಗೊಂಡಿದೆ #Cobra ಬಂದಿದ್ದಾನೆ, #CobraFirstLook ಎಂದು ಹ್ಯಾಷ್ ಟ್ಯಾಗ್ ರಚಿಸಿ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಫೊಸ್ಟರನ್ನು ಬಿಡುಗಡೆ ಮಾಡಿದ್ದಾರೆ. ಹೌದು, ಇದೀಗ ಇದೇ ಪೋಸ್ಟರ್ ಭಾರೀ ಸದ್ದು ಮಾಡಲು ಶುರು ಮಾಡಿದೆ. ದೊಡ್ಡದಾದ ಕನ್ನಡಿಯೊಂದರ ಮುಂದೆ ಬೆನ್ನು ಹಾಕಿ ನಿಂತಿರುವ ವಿಕ್ರಂ ಅವರ ಎರಡೂ ಬದಿಯಲ್ಲಿ ನಮಗೆ ಮುಖ ಮಾಡಿ ನಿಂಡಿರುವಂತೆ ಉಳಿದ ಆರು ಪಾತ್ರಗಳು ಕಾಣಿಸುತ್ತವೆ. ಅದರಲ್ಲಿ ಓರ್ವ ಶ್ರೀಮಂತ, ಸಾಮಾನ್ಯ ಶ್ರೀಮಂತ, ಪ್ರಾಯದ ವ್ಯಕ್ತಿ, ಕಡುಕಪ್ಪು ಬಣ್ಣದ ವ್ಯಕ್ತಿ ಹಾಗೂ ಬೇರೆ ಬೇರೆ ವರ್ಗಕ್ಕೆ ಸೇರಿರುವ ಮೂವರು ವ್ಯಕ್ತಿಗಳ ಸಹಿತ ಒಬ್ಬನೇ ನಟನ ಒಟ್ಟು ಏಳು ಪಾತ್ರಗಳು ಈ ಪೋಸ್ಟರ್ ನಲ್ಲಿ ಪ್ರತಿಬಿಂಬಿತವಾಗಿವೆ.
 
ಕೋಬ್ರಾ ಚಿತ್ರವನ್ನು ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡುತ್ತಿದ್ದು ಕ್ರಿಕೆಟಿನ ಇರ್ಫಾನ್ ಪಠಾಣ್ ಅವರು ಈ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೆ.ಜಿ.ಎಫ್. ನಾಯಕಿ ಶ್ರೀನಿಧಿ ಶೆಟ್ಟಿ ಅವರು ವಿಕ್ರಂ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಒಟ್ಟು ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಮೇ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ಲೆಕ್ಕಾಚಾರದಲ್ಲಿದೆ.
 
 
 

మరింత సమాచారం తెలుసుకోండి: