ರಾಪ್ಪರ್ ಕಿಂಗ್ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ವಿವಾಹದ ಸಲುವಾಗಿ ಮೈಸೂರಿಗೆ ಬಂದಿದ್ದ ಅರ್ಜುನ್ ಜನ್ಯ ಹೃದಯಾಘಾತಕ್ಕೆ ಒಳಗಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು, ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಸ್ಪಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರು ಇದೀಗ ಹೆಲ್ತ್‌ ಬುಲೆಟಿನ್‌ ಬಿಡುಗಡೆಗೊಳಿಸಿದ್ದು, ಅದರಲ್ಲೇನಿದೆ ಗೊತ್ತಾ! 
 
'ಇದೇ ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ನಮ್ಮ ಆಸ್ಪತ್ರೆಗೆ ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ದಾಖಲಾಗಿದ್ದರು. ಇದಾದ ಬಳಿಕ ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ನಂತರ ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸ ಕಂಡುಬಂದಿತ್ತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೆವು' ಎಂದು ವೈದ್ಯರು ಇದೀಗ ತಿಳಿಸಿದ್ದಾರೆ. 
 
ಇಸಿಜಿ ವರದಿ ಬಳಿಕ ಅರ್ಜುನ್ ಅವರಿಗೆ ಹೊಟ್ಟೆ ನೋವು ಕಡಿಮೆ ಆಯಿತು. ಆದರೆ ತುಂಬಾ ಬೆನ್ನು ಹಾಗೂ ತಲೆ ನೋವು ಮುಂದುವರಿದಿತ್ತು. ಸ್ವಲ್ಪ ಎದೆ ನೋವು ಕೂಡ ಕಾಣಿಸಿಕೊಂಡಿತ್ತು. 'ನಂತರ ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಶೇ. 99% ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಮಂಗಳವಾರ ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಸ್ಪತ್ರೆಯ ತಂಡ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ಇನ್ನು 2 ಗಂಟೆ ತಡವಾಗಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವೂ ಸರಿಯಾಗಿದೆ. ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ' ಎಂದು ವೈದ್ಯರು ತಿಳಿಸಿದ್ದಾರೆ. 
 
ಭಾರೀ ಹಿಟ್ ಹಾಡುಗಳನ್ನು ಕಳೆದ ಹಲವು ವರ್ಷಗಳಿಂದಲೂ ನೀಡುತ್ತಲೇ ಬಂದಿದ್ದಾರೆ ಅರ್ಜುನ್‌ ಜನ್ಯ. ಕೆಲಸದ ಒತ್ತಡದಿಂದ ಅವರಿಗೆ ಲಘು ಹೃದಯಾಘಾತವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಅತೀ ಕೆಲಸದಲ್ಲಿ ಅತೀ ಒತ್ತಡವನ್ನು ಅನುಭವಿಸಿದ್ದಾರೆ ಎಂದು ಸಹ ತಿಳಿದುಬಂದಿದೆ.

మరింత సమాచారం తెలుసుకోండి: