ಬೆಂಗಳೂರು: ಬಿಚ್ಚುಗತ್ತಿ, ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟಾಗೇ ಸದ್ದು ಮಾಡಲು ಶುರುವಾಗುತ್ತಿರುವ ಚಿತ್ರ. ಐತಿಹಾಸಿಕ ವಾದರೂ ಸಹ ವಿಚಿತ್ರ ಸ್ಪೆಷಾಲಿಟಿಯನ್ನು ಹೊಂದಿರೋ ಈ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಬಿಚ್ಚುಗತ್ತಿ ವೈರಲ್ ಹೆಚ್ಚಾಗುತ್ತಿದೆ. ಆದರೆ ಚಿತ್ರದಲ್ಲಿ ಅಂತಹದ್ದೇನಿದೆ ಸ್ಪೆಷಾಲಿಟಿ ಗೊತ್ತಾ!? ಇಲ್ಲಿದೆ ನೋಡಿ ಉತ್ತರ.... ಮುಂದೆ ಓದಿ.... 
 
ಚಿತ್ರದ ಪೋಸ್ಟರ್ ಜಾಲತಾಣಗಳಲ್ಲಿ ಸದ್ದು ಮಾಡಲು ಶುರುಮಾಡಿದೆ. ಚಿತ್ರದುರ್ಗ ಪಾಳೇಗಾರರ ಪೈಕಿ ಬಿಚ್ಚುಗತ್ತಿ ಭರಮಣ್ಣ ನಾಯಕ ಕುರಿತು ಸಾಹಿಸಿ ಬಿ.ಎಲ್‌. ವೇಣು ಕಾದಂಬರಿ ಆಧರಿಸಿ ಬರುತ್ತಿರುವ ಸಿನಿಮಾ ಇದು. ಸಿನಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ಫೆ. 9ಕ್ಕೆ ಟ್ರೇಲರ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಕನ್ನಡದ ಸ್ಟಾರ್‌ ನಟರೊಬ್ಬರು ಟ್ರೇಲರ್‌ ಲಾಂಚ್‌ ಮಾಡಲಿದ್ದಾರೆನ್ನುವುದು ಚಿತ್ರತಂಡ ಮಾತು. ಟೀಸರ್‌ನಲ್ಲಿ ಚಿತ್ರದ ಮೇಕಿಂಗ್‌ ಜತೆಗೆ ಕತೆಯ ಸಣ್ಣದೊಂದು ಸ್ಯಾಂಪಲ್‌ ತೋರಿಸಲಾಗಿದೆ.
 
ಯಾವುದಕ್ಕೂ ಕಮ್ಮಿ ಇಲ್ಲದಂತೆ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿರುವುದಕ್ಕೆ ಈ ಟೀಸರ್‌ ಸಾಕ್ಷಿ ಆಗಿದೆ. ಟೀಸರ್‌ಗೆ ಶರತ್‌ ಲೋಹಿತಾಶ್ವ ಧ್ವನಿ ನೀಡಿದ್ದು, ಹುಲಿಯ ಗ್ರಾಫಿಕ್ಸ್‌ ಕೂಡ ಅದ್ಭುತವಾಗಿ ಬಂದಿದೆ. ಹೈದರಾಬಾದ್‌ನ ನಾಗೇಶ್‌ ಹಾಗೂ ತಂಡವು ಚಿತ್ರಕ್ಕೆ ಗ್ರಾಫಿಕ್ಸ್‌ ವರ್ಕ್ ಮಾಡಿದೆ. ಅದರಲ್ಲೂ ಟೈಗರ್‌ ಎಪಿಸೋಡ್‌ ಕುತೂಹಲಕಾರಿಯಂತೆ. ನಾಲ್ಕು ನಿಮಿಷಗಳ ಕಾಲ ಟೈಗರ್‌ ಎಪಿಸೋಡ್‌ ಮೂಡಿಬಂದಿದ್ದು, ಮುದ್ದಣ್ಣ ಸಾಕಿದ ಹುಲಿ ಜೊತೆ ಭರಮಣ್ಣ ಕಾಳಗ ನಡೆಸುವ ಸೀನ್‌ ಅದ್ಭುತವಾಗಿ ಮೂಡಿಬಂದಿದ್ದು, ಥಿಯೇಟರ್ ನಲ್ಲಿ ನೋಡಿದರೆ ಅದರ ಮಜಾನೇ ಬೇರೆಯಾಗಿರುತ್ತದೆ. 
 
ಉಳಿದಂತೆ, ಭರಮಣ್ಣ ಯಾಕೆ ಆ ಟೈಗರ್‌ ಜೊತೆ ಸೆಣೆಸಾಟ ನಡೆಸುತ್ತಾರೆ ಅನ್ನೋದನ್ನು ಚಿತ್ರದಲ್ಲೇ ಕಾಣಬೇಕು ಎಂಬುದು ಚಿತ್ರತಂಡದ ಮಾತು. ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ ಬ್ಯಾನರ್‌ ನಲ್ಲಿ ತಯಾರಾಗಿರುವ ‘ಬಿಚ್ಚುಗತ್ತಿ’ಗೆ ಹಂಸಲೇಖ ಅವರ ಸಂಗೀತವಿದೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್‌ ಸಂಕಲನವಿದೆ. ಟೀಸರ್‌ನಲ್ಲಿ ರಾಜವರ್ಧನ್‌, ಹರಿಪ್ರಿಯಾ, ವಿಲನ್‌ ಪ್ರಭಾಕರ್‌ ಪಾತ್ರಗಳು ಸಾಕಷ್ಟುನಿರೀಕ್ಷೆ ಹುಟ್ಟಿಸಿದ್ದು, ಚಿತ್ರ ಐತಿಹಾಸಿಕ ದಾಖಲೆಯೇ ಬರೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

మరింత సమాచారం తెలుసుకోండి: