ಫೈಲ್ವಾನ್, ದಬಾಂಗ್-3 ರ ನಂತರ ಇದೀಗ ಕಿಚ್ಚನ ಬಹು ನಿರೀಕ್ಷಿತ ಹೊಸ ಚಿತ್ರ ಕೋಟಿಗೊಬ್ಬ-3ರಲ್ಲಿ ಕಿಚ್ಚ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಹು ನಿರೀಕ್ಷೆ ಇತ್ತು. ಇದೀಗ ಕೋಟಿಗೊಬ್ಬ-3 ರಲ್ಲಿ ಕಿಚ್ಚನ ನ್ಯೂ ಲುಕ್ ರಿವಿಲ್ ಆಗಿದೆ. ಕಿಚ್ಚನ ಸ್ಟೈಲಿಶ್ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.
 
ಕೋಟಿಗೊಬ್ಬ ಚಿತ್ರ ಮೊದಲಿನಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸುದ್ದುಯಾಗುತ್ತಲೇ ಇದೆ. ಕ್ಲಬ್ ನಲ್ಲಿ ಹಾಡಿನ ಚಿತ್ರೀಕರಣ ನಡೆದಿದ್ದು, ಕಪ್ಪು ಬಣ್ಣದ ಹ್ಯಾಟ್ ಜೊತೆಗೆ ರೌನೆಲ್ ಸನ್‍ಗ್ಲಾಸ್ ಧರಿಸಿರುವ ಕಿಚ್ಚನ ಫೋಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಈ ಹಿಂದೆ ಮಾಣಿಕ್ಯ ಸಿನಿಮಾದಲ್ಲಿಯೂ ಕ್ಲಬ್ ಹಾಡಿತ್ತು. ಸಿನಿಮಾದ ಹಾಡಿನ ದೃಶ್ಯದ ಕೆಲ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
 
ಕೋಟಿಗೊಬ್ಬ-2 ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದರ ಮುಂದುವರಿದ ಭಾಗವೇ ಕೋಟಿಗೊಬ್ಬ-3 ಎನ್ನಲಾಗುತ್ತಿದೆ. ಆದ್ರೆ ಚಿತ್ರತಂಡ ಸಿನಿಮಾದ ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಡದೇ ಗೌಪ್ಯವಾಗಿ ಕಾಯ್ದುಕೊಂಡು ಬಂದಿದೆ. ಸಿನಿಮಾದ ಮೇಕಿಂಗ್ ಫೋಟೋ ಹೊರತು ಪಡಿಸಿದ್ರೆ ಚಿತ್ರದ ಬಗೆಗಗಿ ಇನ್ನಿತರ ಅಂಶಗಳನ್ನು ರಿವೀಲ್ ಗೊಳಿಸಿಲ್ಲ. ಮೇಕಿಂಗ್ ನಲ್ಲಿ ಸುದೀಪ್ ಅದ್ದೂರಿಯಾಗಿಯೇ ಕಾಣಿಸಿಕೊಂಡಿದ್ದಾರೆ. 
 
ಕೋಟಿಗೊಬ್ಬ-3 ಚಿತ್ರವೂ ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಇನ್ನು ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕೋಟಿಗೊಬ್ಬ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಯಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪೈಲ್ವಾನ ಸಿನಿಮಾದ ಮೂಲಕ ಸುನಿಲ್ ಶೆಟ್ಟಿ ಚಂದನವನ ಪ್ರವೇಶಿಸಿದ್ದಾರೆ. ಇದೀಗ ಕಿಚ್ಚನ ಪೋಟೋಸ್  ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಒಂಚೂರು ಸೀಕ್ರೆಟ್ ಅನ್ನು ಸಹ ಬಿಟ್ಟು ಕೊಟ್ಟಿಲ್ಲ. ಕೋಟಿಗೊಬ್ಬ-3 ರ ದರ್ಶನಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
 
 

మరింత సమాచారం తెలుసుకోండి: