ಚಿತ್ರ ನಟ, ನಟಿಯರು ಪ್ರತಿಯೊಂದು ಸಿನಿಮಾ ಒಪ್ಪಬೇಕಾದರೂ ಚಿತ್ರ ತಂಡದ ಜೊತೆಗೆ ಅಗ್ರಿಮೆಂಟ್ ಗೆ ಸೈನ್ ಮಾಡಬೇಕಾಗುತ್ತದೆ. ಈ ಒಪ್ಪಂದದಲ್ಲಿ ಸಾಮಾನ್ಯವಾಗಿ ಅವರು ಪಡೆಯುವ ಸಂಭಾವನೆ, ಸೆಕ್ಯೂರಿಟಿ, ಶೂಟಿಂಗ್ ಡೇಟ್ಸ್ ಸೇರಿದಂತೆ ಯಾವುದು ಅಗತ್ಯ, ಯಾವುದು ಅನಗತ್ಯ, ಏನು ಮಾಡ್ತೀವಿ, ಏನು ಮಾಡಲ್ಲ ಎನ್ನುವುದನ್ನು ಈ ಅಗ್ರಿಮೆಂಟ್ ನಲ್ಲಿ ದಾಖಲಿಸ ಲಾಗಿರುತ್ತದೆ. 
 
ಹೀಗೆ, ಪ್ರತಿ ಸಿನಿಮಾ ತಂಡದ ಜೊತೆ ಮಾಡಿಕೊಳ್ಳುವ ಅಗ್ರಿಮೆಂಟ್ ನಲ್ಲಿ ನಟಿ ತಮನ್ನಾ 'ಈ ದೃಶ್ಯ ಮಾಡಲ್ಲ' ಎಂದು ವಿಶೇಷವಾಗಿ ನಮೂದಿಸಿ ಸಹಿ ಹಾಕ್ತಾರಂತೆ. ಅಭಿಮಾನಿಗಳು ಶಾಕ್ ಆದರೂ ಕೂಡ ನಂಬಲೇ ಬೇಕಾದ ವಿಷಯವಿದು. ಇದನ್ನು ಸ್ವತಹ ತಮನ್ನಾ ಅವರೇ ತಿಳಿಸಿದ್ದಾರೆ. ಹೌದು, ಪ್ರತಿಯೊಂದು ಚಿತ್ರದ ಅಗ್ರಿಮೆಂಟ್ ಗೆ ಸಹಿ ಹಾಕುವಾಗ ಲಿಪ್ ಲಾಕ್ ದೃಶ್ಯಗಳು ಮಾಡುವುದಿಲ್ಲ ಎಂದು ಸಹಿ ಮಾಡ್ತಾರಂತೆ.
 
ಅವಶ್ಯಕವಿದ್ದರೆ ಹಾಟ್ ಆಗಿ ಕಾಣಿಸಿಕೊಳ್ಳುವುದಕ್ಕೆ ಸಿದ್ಧ ಎನ್ನುವ ತಮನ್ನಾ, ಚುಂಬನ ದೃಶ್ಯಕ್ಕೆ ಮಾತ್ರ ಓಕೆ ಎನ್ನುವುದಿಲ್ಲವಂತೆ. ಈ ಸುದ್ದಿ ಇದೀಗ ಹೊರ ಬಿದ್ದಿದೆ. 'ನಾನು 13 ವರ್ಷವಿದ್ದಾಗಲೇ ಚಿತ್ರರಂಗಕ್ಕೆ ಬಂದೆ. ಆಗಲೇ ಈ ಲಿಪ್ ಲಾಕ್ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೆ. ಇದನ್ನ ಪ್ರತಿ ಚಿತ್ರದ ಅಗ್ರಿಮೆಂಟ್ ನಲ್ಲೂ ನಮೂದಿಸುತ್ತೇನೆ. ಅದು ಮುಂದೆಯೂ ಮುಂದುವರಿಯುತ್ತೆ. ಈ ನೀತಿ ಯಿಂದ ಹೊರಬರುವುದಕ್ಕೆ ಯಾವ ಕಾರಣವೂ ನನಗೆ ಸಿಗುತ್ತಿಲ್ಲ'' ಎಂದು ಮಿಲ್ಕಿ ಬ್ಯೂಟಿ ತಮ್ಮನ್ನಾ ಹೇಳಿಕೊಂಡಿದ್ದಾರೆ.
 
 ಇಲ್ಲಿಯ ವರೆಗೂ ಅಭಿನಯಿಸಿರುವ ಸಿನಿಮಾಗಳಲ್ಲಿಯೂ ತಮನ್ನಾ ಎಲ್ಲಿಯೂ ಲಿಪ್ ಲಾಕ್ ಮಾಡಿಲ್ಲ. ಕಿಸ್ಸಿಂಗ್ ದೃಶ್ಯದಲ್ಲೂ ಕಾಣಿಸಿಕೊಂಡಿದ್ದರೂ ಅದು ಕೇವಲ ಕ್ಯಾಮೆರಾ ಆಂಗಲ್ ಬದಲಿಸಿ ಚಿತ್ರೀಕರಿಸಲಾಗಿದೆ. ಅದನ್ನ ಬಿಟ್ಟರೆ ಬಿಕಿನಿ ತೊಟ್ಟಿದ್ದಾರೆ, ಹಾಟ್ ಆಗಿ ನಟಿಸಿದ್ದಾರೆ. ಸೈರಾ ನರಸಿಂಹ ರೆಡ್ಡಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾಗಳ ಬಳಿಕ ಆಕ್ಷನ್, ಮಹೇಶ್ ಬಾಬು ಹಿರೋ ಹಾಗಿ ಕಾಣಿಸಿಕೊಂಡಿರುವ ಸರಿಲೇರು ನೀಕೆವರು, ದಟ್ ಈಸ್ ಮಹಾಲಕ್ಷ್ಮಿ ಜೊತೆಗೆ ಒಂದು ಹಿಂದಿ ಸಿನಿಮಾದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

మరింత సమాచారం తెలుసుకోండి: