ಭಜರಂಗ್ ಭಾಯ್ ಜಾನ್ ಚಿತ್ರದಲ್ಲಿ ಕೋಟಿಗಟ್ಟಲೆ ಹಣ ಗಳಿಸಿ, ಬಾಲಿವುಡ್ ನಲ್ಲಿ ಭಾರೀ ಖ್ಯಾತಿ ಗಳಿಸಿದ್ದರು. ಇಷ್ಟೇ ಅಲ್ಲದೇ ತಮ್ಮದೇ ಆದಂತಹ ವರ್ಚಸ್ಸನ್ನು ಹೊಂದಿದ್ದಾರೆ. ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.  ಇದೀಗ ಹೊಸ ಚಿತ್ರದ ಕುರಿತು ವಿಶೇಷ ಮಾಹಿತಿಯೊಂದು ಸಿಕ್ಕಿದೆ. ಇದರಿಂದ ಸಲ್ಲು ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. 
 
ಬಾಲಿವುಡ್​ನ ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಬಗ್ಗೆ ಒಂದು ಸುಳಿವು ಕೊಟ್ಟಿದ್ದರು. ಅದು ಮುಂದಿನ ವರ್ಷ ಅಂದರೆ 2020ರ ಈದ್​ಗೆ ಒಂದು ಹೊಸ ಚಿತ್ರವನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಈದ್​ಗೆ ಬಿಡುಗಡೆಯಾಗಬೇಕಿದ್ದ ಸಂಜಯ್​ ಲೀಲಾ ಬನ್ಸಅಲಿ ಅವರ 'ಇನ್ಶಾ ಅಲ್ಲಾಹ್​' ಸಿನಿಮಾಗೂ ಗುಡ್​ ಬೈ ಹೇಳಿದ್ದರು. ಆದರೆ ಈದ್​ಗೆ ಸಲ್ಮಾನ್​ ಮಾಡಲಿರುವ ಸಿನಿಮಾ ಬಗ್ಗೆ ಮತ್ತಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ. ಆದರೆ ಈಗ ಸಲ್ಲು ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರು ಲೀಕ್ ಆಗಿದೆ. ಹೌದು, ಸಲ್ಮಾನ್​ ಖಾನ್​ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾ ಮುಂದಿನ ಈದ್​ಗೆ ಬಿಡುಗಡೆಯಾಗಲಿದೆಯಂತೆ. ಅಯಾಂಕಾ ಬೋಸ್​ ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
 
ಈಗಾಗಲೇ ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿರುವ ಸಿನಿಮಾಟೋಗ್ರಾಫರ್ ಆಯಾಂಕಾ ಬೋಸ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಲ್ಲು ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರನ್ನು ಹಂಚಿಕೊಂಡಿದ್ದಾರೆ. 'ರಾಧೆ: ಇಂಡಿಯಾಸ್​ ಮೋಸ್ಟ್​ ವಾಂಟೆಡ್​ ಕಾಪ್​' ಎಂಬ ಶೀರ್ಷಿಕೆಯಲ್ಲಿ ಸಲ್ಮಾನ್​ರ ಹೊಸ ಸಿನಿಮಾ ಸೆಟ್ಟೇರಲಿದೆ. ಇದರಲ್ಲೂ ಸಲ್ಲು ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರಭುದೇವ ನಿರ್ದೇಶಿಸಲಿರುವ ಈ ಸಿನಿಮಾ ಮುಂದಿನ ವರ್ಷ ಈದ್​ಗೆ ತೆರೆ ಕಾಣಲಿದೆ. ಇನ್ನು ಸಿನಿಮಾದ ಶೀರ್ಷಿಕೆ ಕುರಿತಾಗಿ ಚಿತ್ರತಂಡ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ​ ಪ್ರತಿ ವರ್ಷ ಈದ್​ಗೆ ಸಲ್ಮಾನ್​ರ ಹೊಸ ಸಿನಿಮಾವೊಂದು ತೆರೆ ಕಾಣುತ್ತದೆ. ಈ ಸಲ ಈದ್​ಗೆ ಸಲ್ಲು 'ರಾಧೆ'ಯಾಗಿ ಎಂಟ್ರಿಕೊಡಲಿದ್ದಾರೆ. ಈ ಸಿನಿಮಾ 2017ರಲ್ಲಿ ತೆರೆಕಂಡ ಹಾಲಿವುಡ್​ ಸಿನಿಮಾ 'ಔಟ್​ ಲಾ' ರಿಮೇಕ್​ ಎನ್ನಲಾಗುತ್ತಿದೆ.

మరింత సమాచారం తెలుసుకోండి: