ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಅಭಿನಯಿಸಿದ್ದ ಅಮಲಾ ಪೌಲ್ ಅವರು ಇದೀಗ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂದು ಗುಸು ಗುಸು ಕಾಲಿವುಡ್ ಅಂಗಳಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕ ಎಂಬಂತೆ ಅಮಲಾ ಪೌಲ್ ಅವರು ಗಾಯಕನೊಬ್ಬನ ಜೊತೆಗೆ ಸುತ್ತಾಡಿದ ಫೋಟೋ ಕೂಡ ವೈರಲ್ ಆಗಿದೆ. ಆದರೆ ಇದಕ್ಕೆ ಅಮಲಾ ಪೌಲ್ ಅವರಿಂದಲೇ ಸ್ಪಷ್ಟವಾದ ಪ್ರತಿಕ್ರಿಯೆ ಸಿಗಬೇಕಿದೆ.

 

ಅಮಲಾ ಪೌಲ್ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆಯೇ ?

 

ಕಳೆದ ವರ್ಷದಲ್ಲಿ ತಮ್ಮ ಒಂದು ಸಿನಿಮಾ ಪ್ರಚಾರದ ವೇಳೆ, ಅಮಲಾ ಪೌಲ್ ಅವರು, ತಾವು ಒಬ್ಬ ವ್ಯಕ್ತಿಯನ್ನು ಇಷ್ಟಪಡುತ್ತಿರೋದಾಗಿ ಹೇಳಿದ್ದರು. ಅಲ್ಲದೇ ಅವರ ಪ್ರೀತಿ ತಮ್ಮ ನೋವನ್ನು ವಾಸಿ ಮಾಡಿದೆ ಎಂದು ತಿಳಿಸಿದ್ದರು. ಆದರೆ ಅವರು ತಮ್ಮ ಬಾಯ್ ಫ್ರೆಂಡ್ ಅವರ ಗುರುತನ್ನು ಬಹಿರಂಗಪಡಿಸಲು ಅವರು ನಿರಾಕರಣೆ ಮಾಡಿದ್ದರು. ಇದೀಗ ಒಂದು ವರ್ಷದ ಬಳಿಕ ಅಮಲಾ ಪೌಲ್ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.

 

ಹಾಗಾದರೆ ಅಮಲಾ ಪೌಲ್ ಯಾರ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂದು ಹುಡುಕುತ್ತ ಹೋದರೆ, ಅವರು ಮುಂಬೈ ಮೂಲದ ಗಾಯಕನಾದ ಭವ್ನಿಂದರ್ ಸಿಂಗ್ ಜೊತೆಗೆ ಎಂದು ತಿಳಿದು ಬಂದಿದೆ. ಹೌದು ಭವ್ನಿಂದರ್ ಸಿಂಗ್ ಅವರ ಜೊತೆಗೆ ಅಮಲಾ ಓಡಾಡುತ್ತಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.  ಮತ್ತೊಂದು ವಿಶೇಷ ಎಂದರೆ, ಭವ್ನಿಂದರ್ ಸಿಂಗ್ ತಮ್ಮ ಇನ್ಟಾಗ್ರಾಮ್ ನಲ್ಲಿ ಹುಡುಗಿಯೊಬ್ಬಳನ್ನು ತಬ್ಬಿಕೊಂಡಿರುವ ಚಿತ್ರವನ್ನು ಹರಿಬಿಟ್ಟಿದ್ದರು. ಅದರಲ್ಲಿ ಅಮಲಾ ಪೌಲ್ ಮುಖ ಮಾತ್ರ ಕಾಣಿಸುತ್ತಿರಲಿಲ್ಲ. ಆದರೆ ಇಬ್ಬರೂ ತಬ್ಬಿಕೊಂಡಿರುವುದು ಸ್ಪಷ್ಟವಾಗಿತ್ತು,

 

ಅಮಲಾ ಪೌಲ್ ಅವರು 2014 ರಲ್ಲಿ ವಿಜಯ್ ಎನ್ನುವರ ಜೊತೆ ದಾಂಪತ್ಯ ಜೀವನದಕ್ಕೆ ಕಾಲಿಟ್ಟಿದ್ದರು. ಆದರೆ ಅವರು 2017ರಲ್ಲಿ ವಿಚ್ಚೇಧನ ಪಡೆದಿದ್ದರು. ಇದೀಗ ಭವ್ನಿಂದರ್ ಸಿಂಗ್ ಜೊತೆಗೆ ಅಮಲಾ ಪೌಲ್ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎನ್ನುವ ಗಾಳಿ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹಾರಿದಾಡುತ್ತಿರೋದು ಸುಳ್ಳಲ್ಲ.

మరింత సమాచారం తెలుసుకోండి: