ಇಳಿಯದಳಪತಿ ವಿಜಯ್ ಕಾಲಿವುಡ್ ಚಿತ್ರರಂಗದ ಪ್ರಮುಖ ನಟ. ಲಕ್ಷಾಂತರ ಅಭಿಮಾನಿಗಳು ವಿಜಯ್ ಎಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಮ್ಯಾನರಿಸಂ‌ನಲ್ಲಿ ವಿಜಯ್ ಎತ್ತಿದ ಕೈ. ಇತ್ತೀಚೆಗೆ ವಿಜಯ್ ಅವರ ಬಿಗಿಲ್ ಸಿನಿಮಾ‌ ಬಿಡುಗಡೆ ಆಗಿತ್ತು. ಅಷ್ಟಕ್ಕೂ ಈ ಸಿನಿಮಾಕ್ಕೆ ವಿಜಯ್ ಪಡೆದ ಸಂಭಾವನೆ ಎಷ್ಟು? ಐಟಿ ದಾಳಿ ವೇಳೆ ಬಹಿರಂಗ ಆದ ಸತ್ಯವೇನು ಎನ್ನುವುದು ಇಲ್ಲದೆ ನೋಡಿ. 

 

ಹೌದು, ವಿಜಯ್ ಕಾಲಿವುಡ್ ನ ದೊಡ್ಡ ನಟ. ಕೆಲವು ತಿಂಗಳ ಹಿಂದೆಯಷ್ಟೇ ವಿಜಯ್ ಅವರ ಬಿಗಿಲ್ ಸಿನಿಮಾ ಬಿಡುಗಡೆ ಆಗಿತ್ತು. ಬಿಡುಗಡೆ ಆದ ದಿನದಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸಿತ್ತು. ಈ ಚಿತ್ರದ ನಿರ್ಮಾಪಕನ ಕಛೇರಿ‌ ಮೇಲೆಯೂ ಐಟಿ ದಾಳಿ‌ ನಡೆದಿತ್ತು. ಅದಕ್ಕೆ ಕಾರಣ ಬಿಗಿಲ್ ಸಿನಿಮಾ 300 ಕೋಟಿ ಸಂಪಾದನೆ ಮಾಡಿದೆ ಎನ್ನುವ ಸುದ್ದಿ.

 

ನಿರ್ಮಾಪಕನ‌ ಮನೆ ಮೇಲೆ ದಾಳಿ‌ಆದ ನಂತರ ನಟ ವಿಜಯ್ ಮನೆ ಮೇಲೂ ದಾಳಿ ನಡೆದಿತ್ತು. ಅದೂ ಚೆನ್ನೈನಲ್ಲಿಯೇ. ಮತ್ತೆ ಇದೀಗ ಐಟಿ ಅಧಿಕಾರಿಗಳು ವಿಜಯ್ ಮನೆ ಮೇಲೆ ದಾಳಿ‌ ಮಾಡಿದ್ದಾರೆ. ವಿಜಯ್ ಅವರ ಅಕೌಂಟ್ ಗಳನ್ನು ಅವರು ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಬಿಗಿಲ್ ಸಿನಿಮಾ ಮಾಡೋಕೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಬಹಿರಂಗ ಆಗಿದೆ. 

 

ಒಂದು ಸಮಾಧಾನದ ಸಂಗತಿ ಏನೆಂದರೆ ವಿಜಯ್ ಅವರು ತಾವು ಪಡೆದ ದೊಡ್ಡ ಸಂಭಾವನೆ ಮೊತ್ತದಲ್ಲಿ ಟ್ಯಾಕ್ಸ್ ಕೂಡ ಕಟ್ಟಿದ್ದಾರೆ. ಹೀಗಾಗಿ ಕಾನೂನು ಬದ್ಧವಾಗಿ ವಿಜಯ್ ಯಾವುದೇ ತೊಡಕಿನಲ್ಲಿ ಸಿಲುಕಿಹಾಕಿಕೊಂಡಿಲ್ಲ. ಆದರೆ ಬಿಗಿಲ್ ಸಿನಿಮಾ ಒಂದಕ್ಕೆ ವಿಜಯ್ ಪಡೆದಿರೋದು ಬರೋಬ್ಬರಿ 50 ಕೋಟಿ ಸಂಭಾವನೆ. ಇದು‌ ನಿಮಗೆ ಶಾಕಿಂಗ್ ಅನಿಸಬಹುದು. 

 

ಆದರೆ ಇದಕ್ಕಿಂತ ಶಾಕಿಂಗ್ ಏನೆಂದರೆ, ವಿಜಯ್ ಅವರ ಮುಂದಿನ‌ ಚಿತ್ರ ಮಾಸ್ಟರ್. ಈ ಚಿತ್ರಕ್ಕೆ ವಿಜಯ್ ಪಡೆದಿದ್ದು ಬರೋಬ್ಬರಿ 80 ಕೋಟಿಯಂತೆ. ಆದರೆ ಇಲ್ಲಿಯು ವಿಜಯ್ ತೆರಿಗೆ ಹಣವನ್ನು ನಿಯತ್ತಿನಿಂದಲೇ‌ ಕಟ್ಟಿದ್ದಾರೆ. ಹೀಗಾಗಿ ತೆರಿಗೆ ಅಧಿಕಾರಿಗಳು ವಿಜಯ್ ಅವರಿಗೆ ಏನೂ ಸಮಸ್ಯೆ ಮಾಡಲು ಅವಕಾಶವಿರಲಿಲ್ಲ.

 

మరింత సమాచారం తెలుసుకోండి: