ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರು ಹೆಚ್ಚುತ್ತಿರುವಂತಹ ಹಿನ್ನಲೆಯಲ್ಲಿ ಸಾಕಷ್ಟು ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ಗಳ ಕೊರತೆ ಉಂಟಾಗುತ್ತಿದೆ ಇದನ್ನರಿತ ಬಾಲಿಹುಡ್ ನ ಬಾದ್ ಷಾ ಈ ಕ್ವಾರಂಟೈನ ಕೊರತೆಯನ್ನು ನಿವಾರಿಸಿದ್ದಾರೆ ಅದು ಹೇಗೆ ಅಂತೀರ ಈ ಸ್ಟೋರಿ ನೋಡಿ.

 

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರು ಕ್ವಾರಂಟೈನ್ ಗಾಗಿ ತಮ್ಮ ನಾಲ್ಕು ಅಂತಸ್ತಿನ ಕಚೇರಿಯನ್ನೇ ಬಿಟ್ಟುಕೊಟ್ಟಿದ್ದಾರೆ.

 

ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಕ್ವಾರಂಟೈನ್ ಗಾಗಿ ಶಾರುಖ್ ಖಾನ್ ಅವರು ತಮ್ಮ ಕಚೇರಿಯನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಗೆ ಬಿಟ್ಟು ಕೊಟ್ಟಿದ್ದಾರೆ.

 

ಬಾಲಿವುಡ್ ನಟನ ಈ ನಡೆಗೆ ಬಿಎಂಸಿ ಧನ್ಯವಾದ ಹೇಳಿದ್ದು, ಶಾರುಖ್ ದಂಪತಿಯ ಈ ಕೊಡುಗೆಯನ್ನು ಶ್ಲಾಘಿಸಿದೆ.

ಮೊನ್ನೆಯಷ್ಟೇ ಎಲ್ಲರೂ ಕೊರೋನಾ ತಡೆಗೆ ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಿದರೂ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ನೀಡಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಅದಕ್ಕೆ ಈಗ ಶಾರುಖ್ ಅವರು ತಮ್ಮ ಕಚೇರಿ ಬಿಟ್ಟುಕೊಡುವ ಮೂಲಕ ಮತ್ತು ದೇಣಿಗೆ ನೀಡುವ ಮೂಲಕ ಉತ್ತರ ನೀಡಿದ್ದಾರೆ.

 

ಕೊರೊನಾ ವೈರಸ್ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಮುಂದೆ ಬಂದು ದೇಣಿಗೆ ನೀಡುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಶಾರುಖ್ ಖಾನ್ ಕೂಡ ಹಲವು ಸಮಾಜಮುಖಿ ಕಾರ್ಯಮಾಡಲು ಮುಂದಾಗಿದ್ದಾರೆ.

 

ಪಿಎಂ ಕೇರ್ಸ್ ಫಂಡ್ಗೆ ಅಕ್ಷಯ್ ಕುಮಾರ್25  ಕೋಟಿ ರೂ. ದೇಣಿಗೆ ನೀಡಿದ ಬಳಿಕ ಇನ್ನಿತರ ಸೆಲೆಬ್ರಿಟಿಗಳು ಕೂಡ ಆರ್ಥಿಕ ನೆರವು ನೀಡುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿ ತಾವು ನೀಡುತ್ತಿರುವ ದೇಣಿಗೆ ಮತ್ತು ಮಾಡುತ್ತಿರುವ ಕಾರ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ’ಪಿಎಂ ಕೇರ್ಸ್ ಫಂಡ್’ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ಶಾರುಖ್ ಹೇಳಿದ್ದಾರೆ.

 

 

 

 

 

మరింత సమాచారం తెలుసుకోండి: