ಆ ಸಿನಿಮಾ 7 ವರ್ಷಗಳ ಹಿಂದೆ ತೆರೆಕಂಡ ಸಿನಿಮಾ ಮಾಡಿದ ಮೋಡಿಯಿಂದ ಜನರು ಫಿದಾ ಆಗಿದ್ದರು. ಹಾಗಾಘಿ  ಈ ಸಿನಿಮಾವನ್ನು ಅನೇಕ ಭಾಷೆಗಗಳಲ್ಲಿ ರೀಮೇಕ್ ಮಾಡುವ ಹಕ್ಕನ್ನು ಪಡೆದು ಆಯಾ ಭಾಷೆಗಳಲ್ಲಿ ಸಿದ್ದವಾಗಿ ಚಿತ್ರರಂಗಕ್ಕೆ ಬಂದು ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಆದರೆ  ಈಗ  ಈ ಸಿನಿಮಾದ ಸ್ವೀಕ್ವೆಲ್ ಬರುತ್ತಿದ್ದು ಸಿನಿಪ್ರಿಯರ ಕುತೂಹಲ ಮತ್ತಷ್ಟು ಹೆಚ್ಚಾಗುಂತೆ ಮಾಡಿದೆ

 

ಹೌದು 7 ವರ್ಷಗಳ ಹಿಂದೆ ಮಾಲಿವುಡ್​ನಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ ಸಿನಿಮಾ ದೃಶ್ಯಂ. ಆ ನಂತರ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ರೀಮೇಕ್​ ಆಗಿ ಸಕ್ಸಸ್​ ಕಂಡಿತ್ತು. ಇದೀಗ ದೃಶ್ಯ ಸೀಕ್ವೆಲ್​ ಬರೋದು ಪಕ್ಕಾ ಆಗಿದ್ದು, ಟೀಸರ್​ ಸಹ ರಿವೀಲ್​ ಆಗಿದೆ.

 

ದೃಶ್ಯಂ. ಸ್ಮಾಲ್​ ಬಜೆಟ್​​ನಲ್ಲಿ ನಿರ್ಮಾಣವಾಗಿ ಮಾಲಿವುಡ್​ ಬಾಕ್ಸಾಫೀಸ್​​ನಲ್ಲಿ ಧೂಳೆಬ್ಬಿಸಿದ ಸಿನಿಮಾ. ಕಂಪ್ಲೀಟ್ ಆಯಕ್ಟರ್​ ಮೋಹನ್​ ಲಾಲ್​ ಮತ್ತು ಮೀನಾ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದರು. ಜಿತು ಜೋಸೆಫ್​ ನಿರ್ದೇಶನದ ಸಿನಿಮಾ ಅಕ್ಕಪಕ್ಕದ ಇಂಡಸ್ಟ್ರಿಗಳ ಗಮನ ಸೆಳೆದಿತ್ತು.

 

ಬಹಳ ವರ್ಷಗಳಿಂದ ದೃಶ್ಯ ಸೀಕ್ವೆಲ್​ ಬಗ್ಗೆ ಮಾತುಗಳು ಕೇಳಿಬರ್ತಿತ್ತು. ಈ ಸಣ್ಣ ಎಳೆ ಇಟ್ಟುಕೊಂಡು ಜಿತು ಜೋಸೆಫ್​​​​​​ ಬೊಂಬಾಟ್​ ಸ್ಕ್ರೀನ್​​ಪ್ಲೇ ಮಾಡಿ ಪ್ರೇಕ್ಷಕರು ಸೀಟಿನ ತುದಿಗೆ ಬಂದು ಕೂರುವಂತೆ ಮಾಡಿದರು. ದೃಶ್ಯ ಸಿನಿಮಾ ಮಾಲಿವುಡ್​ನಲ್ಲಿ ಹೊಸ ದಾಖಲೆ ಬರೀತು.

 

ಕ್ರೇಜಿಸ್ಟಾರ್​ ರವಿಚಂದ್ರನ್​​, ನವ್ಯ ಕಾಂಬಿನೇಷನ್​ನಲ್ಲಿ ಪಿ. ವಾಸು ದೃಶ್ಯ ಚಿತ್ರವನ್ನ ಕನ್ನಡಕ್ಕೆ ರೀಮೇಕ್​ ಮಾಡಿದ್ರು.. ಕನ್ನಡದಲ್ಲೂ ಸಿನಿಮಾ ಸಕ್ಸಸ್​ ಆಯ್ತು. ತೆಲುಗಿನಲ್ಲಿ ವೆಂಕಟೇಶ್​​- ಮೀನಾ, ತಮಿಳಿನಲ್ಲಿ ಕಮಲ್​- ಗೌತಮಿ, ಹಿಂದಿಯಲ್ಲಿ ಅಜಯ್​ ದೇವಗನ್- ಶ್ರಿಯಾ ಸರಣ್​ ಹೀಗೆ ಸೌತ್​ ಮಾತ್ರವಲ್ಲದೇ ಬಾಲಿವುಡ್​ಗೂ ದೃಶ್ಯಂ ಸಿನಿಮಾ ರೀಮೇಕ್​ ಆಯ್ತು.

ಬರೀ ಭಾರತೀಯ ಭಾಷೆಗಳು ಮಾತ್ರವಲ್ಲದೇ ಸಿಂಹಳಿ ಮತ್ತು ಮ್ಯಾಂಡ್ರಿನ್​ ಭಾಷೆಗಳಿಗೂ ದೃಶ್ಯ ಸಿನಿಮಾ ರೀಮೇಕ್​ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಒಂದು ಸಿನಿಮಾ ಇಷ್ಟು ಭಾಷೆಗಳಿಗೆ ಅದ್ರಲ್ಲೂ ಮ್ಯಾಂಡ್ರಿನ್​ ಭಾಷೆಗೆ ರೀಮೇಕ್​ ಆಗಿದ್ದು ಇದೇ ಮೊದಲು. ಇಷ್ಟು ಭಾಷೆಗಳಿಗೆ ರೀಮೇಕ್​ ಆಗಿ ಸಕ್ಸಸ್​ ಕಂಡಿರೋ ಚಿತ್ರದ ಸೀಕ್ವೆಲ್​ ಬರುತ್ತೆ ಅಂದ್ರೆ, ಸಹಜವಾಗಿಯೇ ಕುತೂಹಲ ಮೂಡುತ್ತದೆ.

 

ದೃಶ್ಯಂ ಕ್ಲೈಮ್ಯಾಕ್ಸ್​​ನಲ್ಲೇ ಸೀಕ್ವೆಲ್​ ಬಗ್ಗೆ ಸುಳಿವು ಕೊಟ್ಟಿತ್ತು ಚಿತ್ರತಂಡ. ಮತ್ತೊಮ್ಮೆ ಜಿತು ಜೋಸೆಫ್​ ಮತ್ತು ಮೋಹನ್​ ಲಾಲ್​ ಜೊತೆಯಾಗಿರೋದ್ರಿಂದ ಸೀಕ್ವೆಲ್​ ಬಗ್ಗೆ ಭಾರೀ ನಿರೀಕ್ಷೆಯಿದೆ. ಲಾಕ್​ಡೌನ್​​ ಮುಗಿದು ಶೂಟಿಂಗ್​ಗೆ ಅನುಮತಿ ಸಿಕ್ಕಿದ ಕೂಡಲೇ ದೃಶ್ಯಂ ಸಿನಿಮಾ ಶುರುವಾಗಲಿದೆ. ಮಲಯಾಳಂನಲ್ಲಿ ಒಂದು ವೇಳೆ ಸಿನಿಮಾ ಸಕ್ಸಸ್​ ಆದ್ರೆ, ಇತರೆ ಭಾಷೆಗಳಿಗೂ ರೀಮೇಕ್​ ಆಗುವ ಸಾಧ್ಯತೆಯಿದೆ.

మరింత సమాచారం తెలుసుకోండి: