ಮಯೂರಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಕೃಷ್ಣಲೀಲಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪಾದಾರ್ಪಣೆ ಮಾಡಿದವಳು. ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಒಂದಷ್ಟು ಹೊಸ ಭರವಸೆ ಮೂಡಿಸಿದ್ದ ನಟಿ ಮಯೂರಿ. ಪಟಪಟ ಅಂಥ ಮಾತಿನ ಮೂಲಕವೇ ಮನೆ ಕಟ್ಟುತ್ತಿದ್ದ ಈ ಮಯೂರಿ ಇದೀಗ ಮೌನಕ್ಕೆ ಜಾರಿದ್ದಾಳೆ. 


ಹೌದು, ಮೌನಂ ಅನ್ನೋದು ಮಯೂರಿ ಅಭಿನಯಿಸುತ್ತಿರುವ ಮುಂಬರುವ ಚಿತ್ರದ ಹೆಸರು. ಮಯೂರಿ ಅವರದ್ದು ಈ ಚಿತ್ರದಲ್ಲಿ ಎರಡು ಶೇಡ್‌ ಪಾತ್ರವಂತೆ. ಒಂದು ಶೇಡ್‌ನ‌ಲ್ಲಿ ಮೌನವಾಗಿರುವ ಹೋಮ್ಲಿ ಲುಕ್‌ , ಮತ್ತೂಂದು ಆ್ಯಕ್ಷನ್‌ ಕ್ವೀನ್‌ ಆಗಿಯೂ ಮಯೂರಿ ಕಾಣಿಸಿಕೊಳ್ಳುತ್ತಾರಂತೆ.


ಶ್ರೀಹರಿ ನಿರ್ಮಿಸಿರುವ 'ಮೌನಂ’ ಚಿತ್ರಕ್ಕೆ ರಾಜ್‌ ಪಂಡಿತ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿಹಾರಿಕಾ ಮೂವೀಸ್‌ ಬ್ಯಾನರ್‌ನಲ್ಲಿ ಚಿತ್ರ ಮೂಡಿ ಬರುತ್ತಿದೆ. ಚಿತ್ರಕ್ಕೆ ಶಂಕರ್‌ ಛಾಯಾಗ್ರಹಣ, ಗುರುಮೂರ್ತಿ ಹೆಗಡೆ ಸಂಕಲನ ಕಾರ್ಯವಿದೆ. ಚಿತ್ರದಲ್ಲಿ ಹಿರಿಯ ನಟ ಅವಿನಾಶ್‌ ಕೂಡ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಟವಾದ ಸುಮಾರು ಆರು ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 


ಆರವ್‌ ರಿಶಿಕ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಅಂದಹಾಗೆ ಚಿತ್ರದ ಎಳೆಯಾದ್ರೂ ಏನು ಗೊತ್ತಾ? ಮನುಷ್ಯನಿಗೆ ಮನುಷ್ಯನೇ ಶತ್ರು. ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಎಳೆಯೇ 'ಮೌನಂ’ ಚಿತ್ರದ ಕಥಾಹಂದರ


మరింత సమాచారం తెలుసుకోండి: