ನೋಟಗಾರ. ಈ ಚಿತ್ರವನ್ನು ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಸಂಭಾಷಣೆಯ ಭಾಗದ ಚಿತ್ರೀಕರಣ ಈಗಷ್ಟೇ ಮುಕ್ತಾಯವಾಗಿದೆ. ಆದರೆ, ಹಾಡುಗಳ ಚಿತ್ರೀಕರಣ ಬಾಕಿಯಿದೆ. ಇದರ ಜೊತೆಗೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಈಗಾಗಲೇ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಡಬ್ಬಿಂಗ್‌ ಕೆಲಸದಲ್ಲಿ ನಿರತವಾಗಿದೆ.


ಅಷ್ಟಕ್ಕೂ ಈ ಚಿತ್ರವನ್ನು ನಿರ್ಮಿಸುತ್ತಾ ಇರೋರು ಪರಮೇಶಿ ಎ. ಹೆಚ್‌ ಹಾಗೂ ಹರ್ಷ ಬೆಳ್ಳುಡಿ. ‘ಬೆಳ್ಳುಡಿ ಸಿನಿಮಾಸ್‌’ ಅನ್ನೋ ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಅಷ್ಟೇ ಅಲ್ಲದೇ ಈ ಚಿತ್ರದ ಬಹುತೇಕ ಭಾಗವನ್ನು ಬೆಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.


ಸಿದ್ದು ಮೂಲಿಮನಿ ಈ ಚಿತ್ರದ ನಾಯಕ ನಟನಾದರೆ, ಅಶ್ವಿ‌ನಿ ಚಂದ್ರಶೇಖರ್‌ ಈ ಚಿತ್ರದ ನಾಯಕಿ. ಇನ್ನು ಮೋಹನ್‌ ಜುನೇಜ, ಪ್ರಕಾಶ್‌, ನಾಗೇಶ್‌ ಮಯ್ಯ, ಪೃಥ್ವಿರಾಜ್‌ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಂಜು ಹೆದ್ದೂರ್‌ ಅವರು ಕಥೆ, ಚಿತ್ರಕಥೆ, ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ


మరింత సమాచారం తెలుసుకోండి: