ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಂದರೆ ಅದು ರಾಬರ್ಟ್. ಈ ಸಿನಿಮಾದ ಥೀಮ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ. ಈ ಥೀಮ್ ಪೋಸ್ಟರ್ ವಿಭಿನ್ನವಾಗಿ ಇದ್ದು, ದರ್ಶನ್ ಅಭಿಮಾನಿಗಳಿಗೆ ಸಂತಸ ನೀಡಿದೆ. ಹಾಗಾದ್ರೆ ಈ ಥೀಮ್ ಪೋಸ್ಟರ್ ವಿಶೇಷತೆ ಆದ್ರೂ ಏನು? 

 

 

ದರ್ಶನ್ ತಮ್ಮ ಟ್ವೀಟರ್ ಖಾತೆಯಲ್ಲಿ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿ ದರ್ಶನ್ ಬೈಕ್ ಮೇಲೆ ಕುಳಿತಿದ್ದು, ಮೈಮೇಲೆ ಜಾಕೆಟ್ ಹಾಕಿದ್ದಾರೆ. ಜಾಕೆಟ್ ಮೇಲೆ ಆಮೆ ಚಿತ್ರವಿದೆ. ಜೊತೆಗೆ ಬೈಕ್ ಕೂಡ ವಿಶೇಷತೆಯಿಂದ ಕೂಡಿದೆ. ನಂಬರ್ ಪ್ಲೇಟ್ ಬದಲಾಗಿ, ಡಿ ಬಾಸ್ ಎಂದು ಬರೆಯಲಾಗಿದೆ.



ಈ ಸಿನಿಮಾದ ಥೀಮ್ ಪೋಸ್ಟರ್ ರಂಜಾನ್ ಹಬ್ಬದ ವಿಶೇಷವಾಗಿ ಹೊರಬಂದಿದೆ. ಈ ಪೋಸ್ಟರ್ ಇದೀಗ ಸಾಮಾಜಿಕ‌ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಟ್ವೀಟರ್ ನಲ್ಲಿ #Robertthemeposter ಎಂದು ಟ್ರೆಂಟ್ ಆಗುತ್ತಿದೆ.

 

ಈ ಚಿತ್ರವನ್ನು ತರುಣ್ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಚಿತ್ರ ನಿರ್ಮಾಣ ಮಾಡಿದ್ದಾರೆ. ತರುಣ್ ಅವರಿಗೆ ಇದು ಎರಡನೇ ಸಿನಿಮಾ ಈ ಹಿಂದೆ ಚೌಕ ಅನ್ನೋ ಸಿನಿಮಾ ಮಾಡಿದ್ದರು. 

మరింత సమాచారం తెలుసుకోండి: