ಐ ಲವ್ ಯೂ ಚಿತ್ರ ಕನ್ನಡ, ತೆಲುಗು ಭಾಷೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಉಪೇಂದ್ರ ಇದೀಗ ಖುಷ್ ಮೂಡಲ್ಲಿ ಇದ್ದಾರೆ. ಅಲ್ಲದೇ ಚಿತ್ರದ ಸಕ್ಸಸ್ ಮೀಟ್ ಕೂಡ ಮಾಡಲಾಗಿದೆ. ಈ ಎಲ್ಲದರ ಆಚೆಗರ ಉಪ್ಪಿ ಸ್ವಸ್ತಿಕ್ ಚಿತ್ರವನ್ನು ನೆನಪು ಮಾಡಿಕೊಟ್ಟಿದ್ದಾರೆ. ಅದ್ಯಾಕೆ ಅಂತೀರಾ ಇಲ್ಲಿದೆ ನೋಡಿ. 

 

ಐ ಲವ್ ಯೂ ಚಿತ್ರದ ಯಶಸ್ಸಿನಲ್ಲಿ ಇರೋ ಉಪೇಂದ್ರ ಇದೀಗ ಸಡನ್ ಆಗಿ ರಾಜಕುಮಾರ್ ಅವರ ಮನೆಗ ತೆರಳಲಿದ್ದಾರೆ. ಅಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಈ ಭೇಟಿ ಕುತೂಹಲ ಮೂಡಿಸಿದೆ. 

 

ಅಷ್ಟೇ ಅಲ್ಲದೇ, ಅಭಿಮಾನಿಗಳಲ್ಲಿ ಈ ಭೇಟಿ ಹೊಸ ಚಿತ್ರದ ಕುರಿತು ಚರ್ಚೆ ಹುಟ್ಟು ಹಾಕಿದೆ. ಹೌದು, ಈ ಹಿಂದೆ ರಾಘವೇಂದ್ರ ರಾಜಕುಮಾರ್ ಹಾಗೂ ಉಪೇಂದ್ರ ಕಾಂಬಿನೇಷನ್ ನಲ್ಲಿ ಸ್ವಸ್ತಿಕ್ ಬಿಡುಗಡೆ ಆಗಿ ದೊಡ್ ಹಿಟ್ ಆಗಿತ್ತು.  ಹೀಗಾಗಿ ಇಬ್ಬರೂ ಮುಂದೆ ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರೆಯೇ ಎಂದು ಕುತೂಹಲ ಕೆರಳಿಸಿದೆ. 

మరింత సమాచారం తెలుసుకోండి: