ನಟ ಸತೀಶ್ ನೀನಾಸಂ ಅವರು ಇದೀಗ ಬ್ರಹ್ಮಚಾರಿ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಚಿತ್ರ ಇನ್ನೇನು ತೆರೆ ಮೇಲೆ ಬರಬೇಕಿದೆ. ಬಹುತೇಕ ಚಿತ್ರೀಕರಣವನ್ನೂ ಮುಗಿಸಿರುವ ಅವರು, ಅಭಿಮಾನಿಗಳ ಮುಂದೆ ಬರೋಕೆ ಸಜ್ಜಾಗಿದ್ದಾರೆ. 

 

ಆದರೆ, ಈ ಮಧ್ಯ ಸತೀಶ್ ನೀನಾಸಂ ಹೊಅ ಸುದ್ದಿಯನ್ನು ನೀಡಿದ್ದಾರೆ. ಹೌದು, ಬಿಗ್ ಬಜೆಟ್ ಸಿನಿಮಾ ಒಂದರಲ್ಲಿ ಸತೀಶ್ ನಟಿಸುತ್ತಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಈ ಸಿನಿಮಾ ಅವರ ಹುಟ್ಟುಹಬ್ಬದ ದಿನ ಅಂದರೆ, ಜೂನ್ 20 ಕ್ಕೆ (ನಾಳೆ) ಸೆಟ್ಟೇರಲಿದೆ. 

 

ಸತೀಶ್ ನೀನಾಸಂ ಅವರ ಈ ಚಿತ್ರಕ್ಕೆ ದೇವರಾಜ್ ಪೂಜಾರಿ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಕಿನಾರೆ ಎನ್ನುವ ಸಿನಿಮಾ ಮಾಡಿದ್ದರಿವರು. ಆದರೆ ಈ ಚಿತ್ರದಲ್ಲಿ ಸತೀಶ್ ನೀನಾಸಂ ಅವರನ್ನು ವಿಭಿನ್ನವಾಗಿ ಅಂದರೆ ರೆಟ್ರೋ ಸ್ಟೈಲ್ ನಲ್ಲಿ ತೋರಿಸಲಾಗಿದೆಯಂತೆ. 

 

మరింత సమాచారం తెలుసుకోండి: