ವೈಭವಿ, ವೈನಿಧಿ ಹಾಗೂ ವೈಸಿರಿ ಇವರು ಹಿರಿಯ ನಟ ಜೈಜಗದೀಶ್‌ ಮತ್ತು ವಿಜಯಲಕ್ಷ್ಮೀ ಸಿಂಗ್‌ ಅವರ ಪುತ್ರಿಯರು. ಈ ಮೂವರು ಇದೀಗ ನಾಯಕಿಯರಾಗಿ ಎಂಟ್ರಿಕೊಟ್ಟಿರುವುದು ಗೊತ್ತೇ ಇದೆ. ಹೌದು, ಮೂವರು ಸಹೋದರಿಯರು ಯಾನ ಅನ್ನೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಹೊಸ ವಿಷಯ ಏನಪ್ಪ ಅಂದರೆ ಯಾನ ಚಿತ್ರ ತೆರೆಗೆ ಬರೋಕೆ ಸಜ್ಜಾಗಿದೆ. 


ಹೌದು.ಯಾನ ಚಿತ್ರವು ಮುಂಬರುವ ಜುಲೈ 12 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಈ ಚಿತ್ರಕ್ಕೆ, ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವೂ ದೊರೆತಿದೆ. ಹೀಗಾಗಿ ಚಿತ್ರ ಬಿಡುಗಡೆಯ ಹಾದಿ ಸುಲಭವಾಗಿದೆ ಎನ್ನಬಹುದು. 


ಈ ಚಿತ್ರವು ನಿರ್ಮಾಣವಾಗಿರುವುದು ಆಕ್ಮೆ ಮೂವೀಸ್‌ ಇಂಟರ್‌ ನ್ಯಾಷನಲ್‌ ಬ್ಯಾನರ್‌ನಲ್ಲಿ. ಹೌದು, ಜೊತೆಗೆ ಈ ಚಿತ್ರವನ್ನು ಹರೀಶ್‌ ಶೇರಿಗಾರ್‌, ಶರ್ಮಿಳಾ ಶೇರಿಗಾರ್‌ ಅವರು ನಿರ್ಮಾಣ ಮಾಡಿದ್ದಾರೆ. ಇದರ ವಿಶೇಷತೆ ಏನಂದರೆ, ಸಿನಿಮಾ ಕ್ಷೇತ್ರದ ಹಿನ್ನೆಲೆಯಿರುವ ಕುಟುಂಬದ ಮೂವರು ಸಹೋದರಿಯರು ಒಂದೇ ಚಿತ್ರದಲ್ಲಿ ನಟಿಸಿರುವುದು. 


ಈ ಸಿನಿಮಾ ಜರ್ನಿ ಕುರಿತಾದ ಕಥೆ. ಜೊತೆಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ತಾಯಿ. ನಟನೆ ಮಾಡಿದ್ದು ಮಕ್ಕಳು ಎನ್ನುವುದು ಮತ್ತೊಂದು ವಿಶೇಷ. ಬೆಂಗಳೂರಿನಿಂದ ಗೋವಾದವರೆಗೆ ಕಥೆ ನಡೆಯುತ್ತೆ. ಈ ಮಧ್ಯೆ ಏನೆಲ್ಲ ಆಗುತ್ತೆ ಅನ್ನೋದೇ ಚಿತ್ರದ ಕಥಾವಸ್ತು ಎನ್ನಲಾಗಿದೆ. 


మరింత సమాచారం తెలుసుకోండి: