ಸೂರ್ಯ ತಮಿಳಿನ ಖ್ಯಾತ ನಟ. ಈ ನಟನ ಹೆಂಡತಿ ಜ್ಯೋತಿಕಾ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದೀಗ ವೊಷಯ ಏನಪ್ಪ ಅಂದರೆ, ತಮ್ಮ ಮೈದುನ ಜೊತೆಗೆ ಜ್ಯೋತಿಕಾ ತೆರೆ ಹಂಚಿಕೊಳ್ಳಲಿದ್ದಾರೆ. ಹೌದು, ಪಾಪನಾಶಂ ಖ್ಯಾತಿಯ ನಿರ್ದೆಶಕ ಜೀತು ಜೋಸೆಫ್ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ. 

ಈ ಚಿತ್ರದಲ್ಲಿ ಮೈದುನ ಕಾರ್ತಿ ಜೊತೆಗೆ ಜ್ಯೋತಿಕಾ ಅವರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟರ್ ಟೈನ್ ಮೆಂಟ್. ಈ ಚಿತ್ರಕ್ಕೆ ಪೊನ್ ಮಗಳ್ ವಂದಾಳ್ ಎಂದು ಹೆಸರಿಡಲಾಗಿದೆ. 

ಈ ಚಿತ್ರದ ವಿಶೇಷತೆ ಏನಪ್ಪ ಅಂದರೆ, ಪ್ರಸಿದ್ಧ ನಿರ್ದೇಶಕರು ಇದರಲ್ಲಿ ಅಭಿನಯಿಸಲಿದ್ದಾರೆ. ಜೊತೆಗೆ 96 ಸಿನಿಮಾಗೆ ಸಂಗೀತ ನೀಡಿದ್ದ ಗೋವಿಂದ್ ವಸಂತ ಅವರೇ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಇದೇ ವೇಳೆ ಜ್ಯೋತಿಕಾ ಅವರು ಮತ್ತೊಂದು ಚಿತ್ರಕ್ಕೂ ಸಹಿ ಮಾಡಿದ್ದಾರೆ. 



మరింత సమాచారం తెలుసుకోండి: