ನಾನು ಕರ್ನಾಟಕದ ಮಂಗಳೂರಿನವನು. ನನಗೂ ಕನ್ನಡ ಬರುತ್ತದೆ, ಅಲ್ಲದೇ ಕನ್ನಡ ಸಿನಿಮಾಗಳಲ್ಲಿ ಉತ್ತಮ ಅವಕಾಶ ಸಿಕ್ಕರೆ ಖಂಡಿತ ನಾನು ಅಭಿನಯಿಸುತ್ತೇನೆ ಎಂದವರು ಬೇರೆ ಯಾರೂ ಅಲ್ಲ ಅದು ಸುನೀಲ್ ಶೆಟ್ಟಿ.


ಹೌದು. ಕನ್ನಡದ ಪೈಲ್ವಾನ್ ಚಿತ್ರದಲ್ಲಿ ನಟ ಸುದೀಪ್ ಅವರೊಂದಿಗೆ ಅಭಿನಯಿಸಿರುವ ಅನುಭವದ ಬಗ್ಗೆ ಸುನೀಲ್ ಶೆಟ್ಟಿ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸುನೀಲ್ ಶೆಟ್ಟಿ, ನಾನು ಚಿತ್ರದಲ್ಲಿ ಉಸ್ತಾದ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸುದೀಪ್ ಅವರು ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೇ ಪರಿಚಯ ಆಗಿದ್ದರು, ಅವರು ಒಳ್ಳೆಯ ವ್ಯಕ್ತಿ ಎಂದು ಸುನೀಲ್ ಶೆಟ್ಟಿ ತಿಳಿಸಿದರು.


ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿರುವುದು ಖುಷಿ ತಂದಿದೆ ಎಂದಿದ್ದಾರೆ. ಅಲ್ಲದೇ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ,ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ.


మరింత సమాచారం తెలుసుకోండి: