ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ತೆರೆ ಮೇಲೆ ನೋಡೋಕೆ ಅಪ್ಪು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಅಪ್ಪು ಡ್ಯಾನ್ಸ್ ನೋಡಬೇಕು ಎಂದು ಹಂಬಲಿಸುತ್ತಿದ್ದಾರೆ. ಅದರಲ್ಲೂ ಯುವರತ್ನ ಅವರ ಸಿನಿಮಾ ಬರೋದಕ್ಕೂ ಮೊದಲೇ ನಮ್ಮ ಬಾಸ್ ಲುಕ್ ಹೇಗಿರಲಿದೆ ಎನ್ನೋದು ಅಭಿಮಾನಿಗಳ ಕಾತುರವಾಗಿದೆ.


ಹೌದು, ಈ ಬಗ್ಗೆ ಡೈರೆಕ್ಟರ್ ಸಂತೋಷ್ ರಾಮ್ ಮಾತನಾಡಿ, ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿಂದಿನ ಯಾವ ಚಿತ್ರದಲ್ಲೂ ನೀವು ಪುನೀತ್ ಅವರನ್ನು ನೋಡಿರದ ಗೆಟಪ್ ನಲ್ಲಿ ನೀವು ಪುನಿತ್ ಅವರನ್ನು ನೋಡಿಲಿದ್ದಾರೆ ಎಂದು ಹೇಳಿದ್ದಾರೆ.


ಆಲ್ ಮೋಸ್ಟ್ ವರಮಹಾಲಕ್ಷ್ಮೀ ಹಬ್ಬಕ್ಕೆ ಯುವರತ್ನ ಸಿನಿಮಾ ಟೀಸರ್ ಪಕ್ಕಾ ಆದಂತೆ ಆಗಿದೆ. ಇದು ಹೊಸ ಟ್ರೆಂಡ್ ಸೃಷ್ಟಿಸೋ ನಿರೀಕ್ಷೆ ಹುಟ್ಟು ಹಾಕಿದೆ. ಡಾಲಿ ಧನಂಜಯ, ದಿಗಂತ್ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಟೀಸರ್ ತಯಾರಿ ನಡೆದಿದ್ದು ಇನ್ನೇನು ಬಹುಬೇಗನೆ ಟೀಸರ್ ಲಾಂಚ್ ಆಗಲಿದೆ.


మరింత సమాచారం తెలుసుకోండి: