ಬಾಲಿವುಡ್ ಲೋಕದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ರಿಮೇಕ್ ಆಗುತ್ತಲೇ ಇವೆ. ದಕ್ಷಿಣ ಬಾರತದ ಕಡೆಗೆ ಬಾಲಿವುಡ್ ಲೋಕ ತಿರುಗಿ ನೋಡುತ್ತಲೇ ಅವುಗಳನ್ನು ರಿಮೇಕ್ ಮಾಡಿಕೊಂಡು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಎಲ್ಲರನ್ನೂ ತಲುಪುವಂತೆ ಮಾಡಲಾಗುತ್ತಿದೆ. ಈ ಸಾಲಿನಲ್ಲಿ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಕೋಟಿ ಕೋಟಿ ದುಡ್ಡನ್ನು ಬಾಚಿಕೊಂಡಿವೆ. ಇದೇ ಕಾರಣದಿಂದಲೇ ಬಿಟೌನ್ ನಿರ್ಮಾಪಕರು ಸೌತ್ ಇಂಡಿಯಾದ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. 

2017ರಲ್ಲಿ ವಿಜಯ್ ಸೇತುಪತಿ ಹಾಗೂ ಮಾಧವನ್ ಅವರ ಅಭಿನಯದ ವಿಕ್ರಂ ವೇದಾ ಅನ್ನೋ ಚಿತ್ರ ಬಾಕ್ಸ್‌  ಆಫೀಸಲ್ಲಿ ಈ ಚಿತ್ರ ಭರ್ಜರಿ ಸಕ್ಸಸ್ ಕಂಡ ಮೇಲೆ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ. ಹಾಗಾದರೆ ಬಾಲಿವುಡ್ ಲೋಕದಲ್ಲಿ ವಿಕ್ರಂ ಯಾರಾಗಲಿದ್ದಾರೆ ಹಾಗೂ ವೇದಾ ಯಾರು ಅನ್ನೋ ಕುತೂಹಲ ಸಿನಿಪ್ರಿಯರಲ್ಲಿದೆ. ಇದರ ನಡುವೆ ಶಾರುಕ್ ಖಾನ್ ಹಾಗೂ ಮಾಧವನ್ ಅವರು ಇದರಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಗಾದೆ ಮಾತುಗಳು ಹರಿದಾಡಿದ್ದವು. 

ಇದೀಗ ಏಕಾಏಕಿ 2 ವರ್ಷಗಳ ನಂತ ಈ ಚಿತ್ರದೊಂದಿಗೆ ಅಮಿರ್ ಖಾನ್ ಅವರ ಹೆಸರು ಕೇಳಿ ಬಂದಿದೆ. ವೇದಾ-ವಿಕ್ರಂ ರಿಮೇಕ್ ನಲ್ಲಿ ನಟಿಸೋಕೆ ಅಮಿರ್ ಖಾನ್ ಓಕೆ ಎಂದಿದ್ದಾರೆ. ಅಲ್ಲದೇ ಮತ್ತೊಬ್ಬ ನಟ ಎಂದರೆ ಅದು ಸೈಫ್ ಅಲಿ ಖಾನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚೋಕೆ ಯೆಸ್ ಅಂದಿದ್ದಾರೆ. ವಿಜಯ್ ಸೇತುಪತಿ ಅವರು ಮಾಡಿದ್ದ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸೋಕೆ ಅಮಿರ್ ಖಾನ್ ಓಕೆ ಎಂದರೆ, ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚೋಕೆ ನಟ ಸೈಫ್ ಅಲಿಖಾನ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಈ ಚಿತ್ರದ ಇನ್ನೊಂದು ವಿಶೇಷ ಏನೆಂದರೆ, ಮೂಲ ಚಿತ್ರವನ್ನು ನಿರ್ದೇಶನ ಮಾಡಿದ್ದ ಡೈರೆಕ್ಷರ್ ಜೋಡಿ, ಪುಷ್ಕರ್-ಗಾಯತ್ರಿ ಅವರೇ ಹಿಂದಿಯಲ್ಲಿಯೂ ಆಕ್ಷನ್ ಕಟ್ ಹೇಳಲಿದ್ದಾರೆ.  ಅಮಿರ್ ಖಾನ್ ಅವರು ಈ ಹಿಂದೆ ಘಜನಿ ರಿಮೇಕ್ ನಲ್ಲಿ ಕಾಣಿಸಿಕೊಂಡು ಸಕ್ಸಸ್ ಆಗಿದ್ದರು. ನಂತರ ಇದೀಗ ಕಾಲಿವುಡ್ ಚಿತ್ರಕ್ಕೆ ಅಮಿರ್ ಖಾನ್ ಅವರು ಯೆಸ್ ಅಂದಿರೋದು ನಿಜಕ್ಕೂ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
   


మరింత సమాచారం తెలుసుకోండి: