ನಿತ್ಯಾ ಮೆನನ್, ಕನ್ನಡದಲ್ಲಿ ನಟ ಚೇತನ್ ಅವರೊಂದಿಗೆ ಮೈನಾ ಚಿತ್ರದಲ್ಲಿ ನಟನೆ ಮಾಡಿ ಕನ್ನಡಿಗರ ಮನ ಗೆದ್ದವರು. ಇವರು ಬಹುಭಾಷಾ ನಟಿ. ಇಲ್ಲಿಯತನಕ ಕನ್ನಡ, ಮಲಯಾಳಂ ನಲ್ಲಿ ಮಾತ್ರವೇ ನಟನೆ ಮಾಡುತ್ತಿದ್ದ ನಿತ್ಯಾ ಮೆನನ್ ಅವರು ಇತ್ತೀಚೆಗೆ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಹೌದು ಮಿಷನ್ ಮಂಗಲ್ ಸಿನಿಮಾದ ಮೂಲಕ ನಿತ್ಯಾ ಬಾಲಿವುಡ್ ಪಾದಾರ್ಪಣೆ ಮಾಡಿದ್ದಾರೆ. 

ಇನ್ನೊಂದು ವಿಶೇಷ ಏನಪ್ಪ ಅಂದರೆ, ನಿತ್ಯಾ ಮೆನನ್ ಅವರು ನಟಿಸಿರೋ ಓ ಕಾದಲ್ ಕಣ್ಣನಿ ಸಿನಿಮಾ ಹಿಂದಿಯಲ್ಲಿ ಓಕೆ ಜಾನು ಎನ್ನುವ ಹೆಸರಿನಲ್ಲಿ ರಿಮೇಕ್ ಆಗಿದೆ. ಹೀಗಾಗಿ ಇದೀಗ ನಿತ್ಯಾ ಮೆನನ್ ಅವರು ಬಾಲಿವುಡ್ ಲೋಕಕ್ಕೆ ಒಂದು ಮಟ್ಟಿಗೆ ಪರಿಚಯವಾದಂತೆ ಆಗುತ್ತಿದ್ದಾರೆ. ಅಲ್ಲದೇ ಮಿಷಮ್ ಮಂಗಲ್ ಸಿನಿಮಾದಲ್ಲಿ ಅವರು ನಟಿಸುತ್ತಿರೋ ನಿತ್ಯಾ ಅವರಿಗೆ ಒಂದು ದೊಡ್ಡ ಹೆಸರನ್ನು ಇದು ತಂದು ಕೊಡಲಿದೆ. 

ನಿತ್ಯಾ ಮೆನನ್ ಅವರು ತಮ್ಮ ಪಾತ್ರಗಳನ್ನು ಆಯ್ಕೆ ಮಾಡೋದರಲ್ಲಿ ಯಾವಾಗಲೂ ಚ್ಯೂಸಿ. ಹೌದು ಇದೇ ಕಾರಣಕ್ಕೆ ಅವರಿಗೆ ಉತ್ತಮ ನಟನೆ ವಿಭಾಗದಲ್ಲಿ ಮೂರು ಭಾರಿ ಫಿಲ್ಮ ಫೇರ್ ನಲ್ಲಿ ಅತ್ಯುತ್ತಮ ನಾಯಕಿ ಅನ್ನೋ ಪ್ರಶಸ್ತಿ ದೊರಕಿದೆ. ಹೀಗಾಗಿ ಇದೀಗ ನಿತ್ಯಾ ಮೆನನ್ ಅವರಿಗೆ ಒಂದರ ಮೇಲೆ ಒಂದರಂತೆ ಬಾಲಿವುಡ್ ಸಿನಿಮಾಗಳು ತೆರೆದುಕೊಳ್ಳುತ್ತಿವೆ. ಆದರೆ ಇದೀಗ ಮಿಷನ್ ಮಂಗಲ್ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ನಿತ್ಯಾ ಮೆನನ್ ಮುಂದಾಗಿದ್ದಾರೆ. 

ಅಷ್ಟಕ್ಕೂ ಸಿನಿಮಾಗಳ ಆಯ್ಕೆ ಬಗ್ಗೆ ಅವರು ಹೇಳಿದ್ದು ಇಲ್ಲಿದೆ ನೋಡಿ; ' ಬಾಲಿವುಡ್ ಸಿನಿಮಾ ಎಂದಾಕ್ಷಣ ನಾನು ಕಣ್ಮುಚ್ಚಿಕೊಂಡು ಎಲ್ಲವನ್ನೂ ಒಪ್ಪಿಕೊಂಡು ಬಿಡೋದಿಲ್ಲ. ಮಿಷನ್ ಮಂಗಲ್ ಸಿನಿಮಾವನ್ನು ಒಪ್ಪಿಕೊಳ್ಳುವ ಮುಂಚೆಯೂ ಇದೇ ನನ್ನ ತತ್ವವಾಗಿತ್ತು. ಅಲ್ಲದೇ, ತಮಿಳು , ಕನ್ನಡ, ತೆಲುಗು ಮಲಯಾಳಂ ಭಾಷೆಗಳಲ್ಲಿ ನಟಿಸುವಾಗಲೂ ನಾನು ಪಾತ್ರಗಳ ಪ್ರಾಮುಖ್ಯತೆಯನ್ನು ಗಮನಿಸುತ್ತಿದ್ದೆ. ಚಿತ್ರಕ್ಕೆ ಅಗತ್ಯವಿದ್ದಾಗ ಮಾತ್ರ ನಾನು ಸಣ್ಣ ಪಾತ್ರಗಳನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. 

ಅಲ್ಲದೇ ಅವರು ಹೇಳಿದ ಇನ್ನೊಂದು ಪ್ರಮುಖ ವಿಷಯ ಏನಪ್ಪ ಅಂದರೆ, ನನಗೆ ಪಾತ್ರ ಮುಖ್ಯ. ಆ ಪಾತ್ರದಲ್ಲಿ ಹೊಸತನ ಇದ್ದರೆ, ಆ ಪಾತ್ರ ನನಗೆ ಚಾಲೆಂಜ್ ಅನಿಸಿದರೆ ನಾನು ಅದರಲ್ಲಿ ನಾಯಕಿ ಆಗದೆಯೂ ನಟಿಸೋಕೆ ಸಿದ್ದ ಎಂದು ನಿತ್ಯಾ ಮೆನನ್ ಅವರು ಹೇಳಿದ್ದಾರೆ. ಒಟ್ಟಾರೆಯಾಗಿ ಅವರು ತಮ್ಮ ಪಾತ್ರಗಳನ್ನು ಅಳೆದು ತೂಗಿ ನೋಡಿಯೇ ಆಯ್ಕೆ ಮಾಡಿಕೊಳ್ಳುತ್ತಿರೋದರಿಂದ ಅವರಿಗೆ ಉತ್ತಮ ನಟಿ ಪ್ರಶಸ್ತಿ ಬಂದಿದೆ. 



మరింత సమాచారం తెలుసుకోండి: