ನಿಮಗೆಲ್ಲಾ ಒಂದು ಪ್ರಶ್ನೆ ಕಾಡಿರಬಹುದು. ಬಾಲಿವುಡ್ ಲೋಕದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಅನ್ನೋದು ನಿಮ್ಮ ಆ ಪ್ರಶ್ನೆ ಅಲ್ಲವೇ? ಸದ್ಯಕ್ಕೆ ಆ ನಿಮ್ಮ ಪ್ರಶ್ನೆಗೆ ಉತ್ತರ ದೊರಕಿದೆ ನೋಡಿ. ಬಾಲಿವುಡ್ ಅಂದರೆ ಅದೊಂದು ವಿಭಿನ್ನ ಜಗತ್ತು. ಇಲ್ಲಿ ಎಲ್ಲ ನಾಯಕನಟರಿಗೂ ತಮ್ಮದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಇದರಲ್ಲಿ ಅತಿಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರೋದು ಸಲ್ಮಾನ್ ಖಾನ್.


ಹೌದು, ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಅಷ್ಟಕ್ಕೂ ಅವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ? 60 ಕೋಟಿ ರೂಪಾಯಿ ಎಂದರೆ ನೀವು ನಂಬಲೇ ಬೇಕು, ಇನ್ನು ಸಲ್ಮಾನ್ ಆದ ಮೇಲೆ ನಂತರದ ಸ್ಥಾನದಲ್ಲಿ ಇರೋದು ಅಮಿರ್ ಖಾನ್, ಹೌದು ಮಿಸ್ಟರ್ ಫರ್ಫೆಕ್ಟ ಎಂದೇ ಖ್ಯಾತಿ ಆದ ಅಮಿರ್ ಖಾನ್ 45 ಕೋಟಿ ಸಂಭಾವನೆ ಒಂದು ಚಿತ್ರಕ್ಕೆ ಪಡೆಯುತ್ತಾರೆ. ಇನ್ನೂ ಮೂರನೇ ಸ್ಥಾನದಲ್ಲಿ ಇರೋದು ಬೇರೆ ಯಾರೂ ಅಲ್ಲ ಅದೇ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್. 


ಅಕ್ಷಯ್ ಕುಮಾರ್ ಅವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 40-45 ಕೋಟಿ. ಹೌದು ಹೀಗಾಗಿ ಅಕ್ಷಯ್ ಅವರು ಮೂರನೇ ಸ್ಥಾನದಲ್ಲಿ ಇದ್ದಾರೆ. ಆದರೆ ವಿಷ್ಯ ಏನಪ್ಪ ಅಂದರೆ, ಪೋರ್ಬ್ಸ್ ನಿಯತಕಾಲಿಕ ವರದಿಯ ಪ್ರಕಾರ, ಅಕ್ಷಯ್ ಕುಮಾರ್ ಅವರು 2018ರ ಜೂನ್ 1ರಿಂದ 2019ರ ಜೂನ್ 1ರ ಅವಧಿಯಲ್ಲಿ ಪಡೆದ ಒಟ್ಟು ಸಂಭಾವನೆ ಇಡೀ ಬಾಲಿವುಡ್ ಲೋಕದಲ್ಲಿ ಅತಿ ಹೆಚ್ಚು ಎನ್ನಲಾಗುತ್ತಿದೆ. ಅಂದರೆ ಈ ಅವಧಿಯಲ್ಲಿ ಅಭಿನಯಿಸಿದ ಚಿತ್ರಗಳಿಗೆ ಒಟ್ಟು ಸರಿಸುಮಾರು 466 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.


ಈ ಮೂಲಕ ಅಕ್ಷಯ್ ಕುಮಾರ್ ಅವರು ಈ ಕಳೆದ ವರ್ಷದಲ್ಲಿ ಅತಿಹೆಚ್ಚು ಒಟ್ಟಾರೆ ಸಂಭಾವನೆ ಪಡೆದ ನಟ,, ಅಷ್ಟೇ ಅಲ್ಲದೇ ಇಡೀ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿ ಅಕ್ಚಯ್ ಇದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರು ಡ್ವೈನೆ ಜಾನ್ಸನ್, ಕ್ರಿಸ್ ಹೆಮ್ಸ್ ವರ್ತ್ ಮತ್ತು ಜೂ. ರಾಬರ್ಟ್ ಡ್ವೈನೆ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಪೋರ್ಬ್ಸ್ ಹೇಳಿದೆ.
ಸದ್ಯಕ್ಕೆ ಅಕ್ಷಯ್ ಕುಮಾರ್ ಅವರ ಮಿಷನ್ ಮಂಗಲ್ ಚಿತ್ರವು ಉತ್ತಮ ಗಳಿಕೆಯೊಂದಿಗೆ ಸಾಗುತ್ತಿದೆ. 


మరింత సమాచారం తెలుసుకోండి: