ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರಾಗಿರುವ ನಟ ಎಂದರೆ ದರ್ಶನ್. ಹೌದು ಡಿ ಬಾಸ್ ಮತ್ತು ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದುಗಳನ್ನು ಹೊಂದಿರುವ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ. ಈ ಚಿತ್ರ ನೂರು ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಕನ್ನಡಿಗರ ಚಿತ್ರಗಳ ಹವಾ ಜೋರಾಗಿದೆ. ಹೌದು ಕುರುಕ್ಷೇತ್ರ ಚಿತ್ರ ಬಿಡುಗಡೆಗೂ ಮೊದಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಹಾಕಿತ್ತು. ಇದೀಗ ನೂರು ಕೋಟಿ ಕ್ಲಬ್‌ ಸೇರಿದೆ.

ಕೆಜಿಎಫ್ ಚಿತ್ರವು ಈ ಮೊದಲು ಸ್ಯಾಂಡಲ್ ವುಡ್ ಆಚೆಗೂ ಹವಾ ಸೃಷ್ಟಿಸಿತ್ತು. ಇಡೀ ದೇಶದಲ್ಲಿ ಅಷ್ಟೇ ಅಲ್ಲದೇ, ಇಡೀ ಜಗತ್ತಿನಲ್ಲಿ ಕೆಜಿಎಫ್ ಹವಾ ಸೃಷ್ಟಿ ಮಾಡಿತ್ತು. ನೂರು ಕೋಟಿ ಗಳಿಸಿ ದಾಖಲೆ ಬರೆದ ಕನ್ನಡದ ಮೊದಲ ಚಿತ್ರವಾಗಿತ್ತು. ಇದಾದ ನಂತರ ಇದೀಗ ದರ್ಶನ್ ಅವರ ಕುರುಕ್ಷೇತ್ರ ನೂರು ಕೋಟಿ ಕ್ಲಬ್ ಸೇರಿದೆ. ಮುನಿರತ್ನ ಕುರುಕ್ಷೇತ್ರ 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಗೊಂಡಿದ್ದು ಬಹುಭಾಷೆಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.

ಮುನಿರತ್ನ ಕುರುಕ್ಷೇತ್ರದಲ್ಲಿ ದೊಡ್ಡ ನಟರ ದಂಡೆ ಇದೆ. ಹೌದು ಸ್ಯಾಂಡಲ್ ವುಡ್ ಲೋಕದ ಘಟಾನುಘಟಿ ನಟರಾದoತ ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಶ್ರೀನಿವಾಸಮೂರ್ತಿ ಇದ್ದಾರೆ ಇಷ್ಟೇ ಅಲ್ಲದೇ ಇನ್ನು ಹಿರಿಯ ನಟಿ ಭಾರತಿ, ನಿಖಿಲ್ ಕುಮಾರಸ್ವಾಮಿ, ಡ್ಯಾನಿಶ್ ಅಖ್ತರ್, ಸೋನು ಸೂದ್, ಸ್ನೇಹ, ಮೇಘನಾ ರಾಜ್, ಹರಿಪ್ರಿಯಾ ಸೇರಿದಂತೆ ದೊಡ್ಡ ತಾರಾಬಳವೇ ಇದೆ.  ಸಹಜವಾಗಿಯೇ ಕುರುಕ್ಷೇತ್ರ ಜನರನ್ನು ತನ್ನತ್ತ ಆಕರ್ಷಣೆ ಮಾಡಿದೆ. ಹೀಗಾಗಯೇ ಅದು ನುರು ಕೋಟಿ ಕ್ಲಬ್ ಸೇರಿದೆ.

ಇನ್ನು ಕುರುಕ್ಷೇತ್ರದ ಬಗ್ಗೆ ಇನ್ನೊಂದು ವಿಶೇಷತೆ ಏನಪ್ಪ ಅಂದರೆ, ಈ ಚಿತ್ರ ಕೇವಲ ಮೂರೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದೆ ಎನ್ನಲಾಗುತ್ತಿದೆ. ಹೌದು ಇದೇ ಕಾರಣಕ್ಕೆ ಡಿ ಬಾಸ್ ಅಭಿಮಾನಿಗಳೆಲ್ಲ ಒಂದು ಕಡೆ ಸೇರಿ ತಮ್ಮ ನಚ್ಚಿನ ನಟನ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ನಂತರ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ವಿಷ್ಯ ಹೀಗಿರುವಾಗ ಮತ್ತೊಂದು ಕಡೆ ಮುನಿರತ್ನ ಕುರುಕ್ಷೇತ್ರ ಸಿನಿಮಾ ವಿತರಣೆ ಮಾಡಿರುವ ರಾಕ್ ಲೈನ್ ಎಂಟರ್‌ಟೈನ್‌ಮೆಂಟ್ ಚಿತ್ರದ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ನೀಡಿಲ್ಲ. 


మరింత సమాచారం తెలుసుకోండి: