ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳೆಂದರೆ, ಹಾಗೆ ಅವರಿಗೊಂದು ದೊಡ್ಡ ಮಟ್ಟದ ಕ್ರೇಜ್. ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ದರ್ಶನ್ ಅವರು ಆಯ್ದುಕೊಳ್ಳುವ ಸಬ್ಜೆಕ್ಟ್, ಅವರ ಬಜೆಟ್, ಕಾಸ್ಟಿಂಗ್ಸ್ ಮತ್ತು ಹಿರೋಯಿನ್ಸ್ ಹೀಗೆ ಪ್ರತಿಯೊಂದರಲ್ಲಿಯೂ ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕುರುಕ್ಷೇತ್ರ ಚಿತ್ರದ ಮೂಲಕ ಅವರು ಗೆಲವಿನ ನಗೆ ಬೀರಿದ್ದಾರೆ. ದತತ ೨೫ ದಿನಗಳಿಂದ ಕುರುಕ್ಷೇತ್ರ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಸದ್ಯ, ದರ್ಶನ್ ಅವರು ರಾಬರ್ಟ್ ಚಿತ್ರದ ತೆರೆಮರೆಯ ಕೆಲಸಗಳಲ್ಲಿ ಬ್ಯುಝಿ ಆಗಿದ್ದಾರೆ.


ಹೌದು, ರಾಬರ್ಟ್ ಚಿತ್ರತರಂಡದಿಂದ ಇದೀಗ ಹೊಸದೊಂದು ಸುದ್ದಿ ಹೊರಬರಂದಿದೆ. ಈ ಚಿತ್ರಕ್ಕೆ ನಾಯಕಿ ಆಗಿ ಆಶಾ ಭಟ್ ಆಯ್ಕೆ ಆಗಿದ್ದಾರೆ. ಆಶಾ ಭಟ್ ಅವರು ಶಿವಮೊಗ್ಗದವರು. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದರೂ, ಇಲ್ಲಿಯವರೆಗೆ ರಾಬರ್ಟ್‌ ಯಾವುದೇ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಆದರೆ ಇದೀಗ ಆಶಾ ಭಟ್ ಅವರ ಆಯ್ಕೆ ಇಡೀ ಸ್ಯಾಂಡಲ್ ವುಡ್ಗೆ ಅಚ್ಚರಿ ತಂದಿದೆ. ಅಲ್ಲದೇ ಶಿವಮೊಗ್ಗ ಜನರಿಗೆ ಸಂತಸ ತಂದಿದೆ.


ಈ ಮೊದಲು ರಾಬರ್ಟ್ ಚಿತ್ರಕ್ಕೆ ಯಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದಕ್ಕೆ ಅನೇಕ ಹೆಸರುಗಳು ಚರ್ಚೆಗೆ ಬಂದಿದ್ದವು. ಅವುಗಳಲ್ಲಿ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ರಾಕುಲ್‌ ಪ್ರೀತ್‌ ಸಿಂಗ್‌, ಕೀರ್ತಿ ಸುರೇಶ್‌, ಸಾಯಿ ಪಲ್ಲವಿ ಹೀಗ ಇಂತಹ ಮೊದಲಾದ ಘಟಾನುಘಟಿ ನಟಿಮಣಿಯರ ಹೆಸರುಗಳು ಕೇಳಿ ಬಂದಿವೆ. ಆದರೆ ಯಾರು ಈ ಚಿತ್ರದ ನಾಯಕಿ ಆಗುತ್ತಾರೆ ಎಂದು ಚಿತ್ರತಂಡ ಇಲ್ಲಿಯವರೆಗೂ ಎಲ್ಲಿಯೂ ಮಾತನಾಡಿರಲಿಲ್ಲ. ಚಿತ್ರತಂಡ ಮಾತ್ರ ಈ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಇದೀಗ ರಾಬರ್ಟ್ ಚಿತ್ರದ ನಾಯಕಿಯ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಿದೆ. ಅದೇ ಆಶಾ ಭಟ್.


ಆಶಾ ಭಟ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ಹೌದು ಇವರು ಸಿಸಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದೆ ಅದೊಂದು ರೋಚಕ. ಆಶಾ ಭಟ್‌, 2014ರ ಮಿಸ್‌ ಸುಪ್ರಾ ನ್ಯಾಶನಲ್‌ ಪ್ರಶಸ್ತಿ ವಿಜೇತೆಯೂ ಹೌದು. ಅಲ್ಲದೇ ಆಶಾ ಭಟ್ ಅವರು ಆರ್‌.ವಿ ಇಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಬಿ.ಇ ಎಲೆಕ್ಟ್ರಾನಿಕ್ಸ್‌ ಪದವಿ ಪಡೆದುಕೊಂಡಿದ್ದಾರೆ. ಇವರಿಗೆ ತಮ್ಮ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ನತ್ತ ಒಲವಿತ್ತು. ಸೌಂಧರ್ಯ ಸ್ಪರ್ಧೆಯಲ್ಲಿ ಆವಾಗಿನಿಂದಲೇ ಭಾಗವಹಿಸುತ್ತಿದ್ದರು.

ಕಾಲೇಜು ಮತ್ತು ಮಾಡೆಲಿಂಗ್‌ ಹೀಗೆ ಎರಡೂ ಕ್ಷೇತ್ರಗಳಿಗೂ ಒಮ್ಮೆಲೆ ಕಾಲಿಟ್ಟವರು ಆಶಾ ಭಟ್. ಇವರು ಈಗಾಗಲೆ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.


మరింత సమాచారం తెలుసుకోండి: