ರಾಜ್ಯಾದ್ಯಂತ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 69ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಅನ್ನದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸಾವಿರಾರು ಅಭಿಮಾನಿಗಳು ಕ್ಕಿಕ್ಕಿರದು ನೆರೆದಿದ್ದರು. 


ಸ್ಯಾಂಡಲ್ ವುಡ್ ನಟ, ನಟಿಯರು, ಸೆಲೆಬ್ರಿಟಿಗಳೆಲ್ಲರು ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣುವರ್ಧನ್ ದಾದಾನನ್ನು ಶುಭಾಶಯ ಕೋರಿ ಸ್ಮರಿಸಿದ್ದಾರೆ. ಸುಯೋಧನ ಚಾಲೆಂಜಿಂಗ್ ಸ್ಟಾರ್ ದರ್ಶನ್, “ಕನ್ನಡಿಗರ ಯಜಮಾನ, ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ” ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟಿಟ್ವರ್ ನಲ್ಲಿ ದರ್ಶನ್ ಅಭಿಮಾನಿ ಗಳಿಂದಲೂ ದಾದ ಅವರಿಗೆ ಶುಭಾಶಯ ಕೋರಿದ್ದಾರೆ. 


ಪ್ರಸ್ತುತ ರಾಜ್ಯ ಮುಖ್ಯಮಂತ್ರಿ ಇಂದು ಕನ್ನಡ ‌ಚಿತ್ರರಂಗ ಕಂಡ ಮಹಾನ್ ನಟರಲ್ಲೊಬ್ಬರಾದ ಡಾ‌‌. ವಿಷ್ಣುವರ್ಧನ್ ಅವರ ಜನ್ಮದಿನ.  ಮೇರು ನಟ ವಿಷ್ಣುವರ್ಧನ್ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಟಿಟ್ವರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 


 ಇನ್ನು ಕಿಚ್ಚ ಸುದೀಪ್ "ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ.ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ಧೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು.  ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ." ಎಂದಿದ್ದಾರೆ.ನಟ ರಮೇಶ್ ಅರವಿಂದ್, “ನೂರೊಂದು ನೆನಪು ಎದೆಯಾಳದಿಂದ” ಎಂದು ಬರೆದುಕೊಂಡಿದ್ದು, ವಿಷ್ಣುವರ್ಧನ್ ಕ್ಲಾಪ್ ಮಾಡುತ್ತಿರುವ ಭಾವಚಿತ್ರವನ್ನು ಶೇರ್ ಮಾಡಿದ್ದಾರೆ. 


ನೆನಪಿದೆ ಆ ದಿನ ನನ್ನಹರಸಿದ ನಿಮ್ಮ ಮನ. ದೇಹತ್ಯಾಗ ನಶ್ವರ ಜಗದ ಸಹಜಕ್ರಿಯೆ, ಆದರೆ ಸವಿ ನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯ ಮಾತ್ರ. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ. ಹು.ಹ ಶುಭಾಶಯಗಳೆಂದು ನವರಸ ನಾಯಕ ಜಗ್ಗೇಶ್ ಟ್ವಿಟಿಸಿದ್ದಾರೆ. 


మరింత సమాచారం తెలుసుకోండి: