ಮಲಯಾಳಂ ನಟ, ಮಮ್ಮುಟ್ಟಿ ಅಭಿನಯದ ಪೌರಾಣಿಕ ಚಿತ್ರ ಮಾಮಂಗಂ ಸಿನಿಮಾದ ಟೀಸರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.  ಅಭಿಮಾನಿಗಳು ಈ ಟೀಸರ್‌ ಗೆ ಫಿದಾ ಆಗಿದ್ದಾರೆ.


ಪೌರಾಣಿಕ ಚಿತ್ರವಾದ್ದರಿಂದ ಮುಮ್ಮಟ್ಟಿ ಅವರ ಅಭಿಮಾನಿಗಳು ಸೇರಿದಂತೆ, ಪೌರಾಣಿಕ ಸಿನಿ ರಸಿಕರಲ್ಲಿ ಕುತೂಹಲ ಗರಿಗೆದರಿದೆ. ಟ್ರೇಲರ್ ನಲ್ಲಿ ಒಂದಿಷ್ಟು ಕಥಾಹಂದರ ತಿಳಿಸಿದ್ದರೂ  ಸಹ ಕಥೆಯ ಗುಟ್ಟು ಮಾತ್ರ ಸಸ್ಪೆನ್ಸ್ ಆಗಿಯೇ ಇದೆ.  ಈ ಸಿನಿಮಾದಲ್ಲಿ ಮಮ್ಮುಟ್ಟಿ ಹೇಗೆ ಕಾಣಿಸಲಿದ್ದಾರೆ ಎಂಬ ಕುತೂಹಲಕ್ಕೆ ಸಿನಿಮಾ ತಂಡ ತೆರೆಎಳೆದಿದೆ. ಅವರ ಮೊದಲ ಲುಕ್ ಬಿಡುಗಡೆಯಾಗಿದೆ. ಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳು ಮೊದಲ ಲುಕ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಮಮ್ಮುಟ್ಟಿ ಇದುವರೆಗೂ ಕಾಣಿಸಿಕೊಳ್ಳದ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಮಮ್ಮುಟ್ಟಿ ಅವರನ್ನು ಗುರುತಿಸುವುದೇ ಕಷ್ಟ ಅವರ ಹೊಸ ಅವತಾರ ಇಷ್ಟವಾಯಿತು ಎಂದು ಟ್ವಿಟ್ಟರ್ನಲ್ಲಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಇದಕ್ಕೆ ನೂರಾರು ಲೈಕ್ ದೊರೆತಿದ್ದು ಹೌದು ಎಂಬ ಅಭಿಪ್ರಾಯವನ್ನು ಹೆಚ್ಚಿನ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. 


ಟಿಟ್ವರ್ ನಲ್ಲಿ ಮುಮ್ಮಟ್ಟಿ ಅಭಿಮಾನಿಗಳಿಂದ ಮಾಮಾಂಗಂ ಹವಾ ಜೋರಾಗಿಯೇ ಸದ್ದು ಮಾಡುತ್ತಿರುವ ಕಾರಣ ಸಿನಿಮಾದ ಮೇಲಿನ ನಿರೀಕ್ಷೆಗಳು ಹೆಚ್ಚಲಿಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೇ ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ಮಮ್ಮುಟ್ಟಿ ತಮ್ಮ ಹೊಸ ಸಿನಿಮಾದ ಬಗ್ಗೆ ತುಂಬ ಉತ್ಸುಕರಾಗಿದ್ದಾರೆ. ಪದ್ಮಕುಮಾರ್ ಅವರ ನಿರ್ದೇಶನದ ಸಿನಿಮಾ ರೂಪಾಯಿ 45 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಕಾವ್ಯ ಫಿಲಂ ಕಂಪನಿ ನಿರ್ಮಾಣದ ಹೊಣೆ ಹೊತ್ತಿದೆ ಪ್ರಾಚಿ ತೇಹ್ಸನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವುದು ತುಂಬಾ ವಿಶೇಷತೆಯಾಗಿದೆ. 


ಟ್ರೇಲರ್ ಮತ್ತು ಪೋಸ್ಟರ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿವೆ. ಮಮುಟ್ಟಿ  ಅವರಿಗೆ ಮೊದಲ ಪೌರಾಣಿಕ ಕಥೆಯ ಚಿತ್ರವಾದ್ದರಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಲು ಕಾರಣವಾಗಿದೆ. ಪ್ರಸ್ತುತ ಅಭಿಮಾನಿಗಳು ಹಾಗೂ ಪೌರಾಣಿಕ ಕಥೆ ಇಷ್ಟ ಪಡುವವರು ಸಿನೇಮಾ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. 


మరింత సమాచారం తెలుసుకోండి: