ಚಿತ್ರವೊಂದು  ಭಾಷೆಯಲ್ಲಿ ದೊಡ್ಡ ಹಿಟ್ ಪಡೆದು ವಿಮರ್ಶಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡು ಮೇಲೆ ಮತ್ತೊಂದು ಭಾಷೆ ಗೆ ರೀಮೇಕ್ ಡಬ್ ಆಗುವುದು ಸಾಮಾನ್ಯ. ಆದರೆ ಟೀಸರ್ ಬಿಡುಗಡೆ ಹಂತದಲ್ಲಿರುವಾಗಲೇ ನಮ್ಮ ಕನ್ನಡದ ಸಿನಿಮಾವೂಂದು  ಹಿಂದಿಗೆ ರಿಮೇಕ್ ಆಗುವ ಸುವರ್ಣ ಅವಕಾಶ ಪಡೆದುಕೊಂಡಿದೆ. ಕನ್ನಡಿಗ ರಿಗೆಲ್ಲಾ ಹೆಮ್ಮೆಯ ವಿಷಯವಾಗಿದೆ. 


ಅದು ಯಾವ ಸಿನೇಮಾ ಎಂದರೆ ಬಲ್ಪೆನ್ ಖ್ಯಾತಿಯ ಶಶಿಕಾಂತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಂಚಿ.  ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ ಸಂದೀಪ್ ಚೌಟ ಅವರನ್ನು ಕಾರ್ಯನಿಮಿತ್ತ ಬೇಟಿಯಾಗಲು ಆಗಾಗ ಮುಂಬೈಗೆ ಹೋಗುತ್ತಿದ್ದ ನಿರ್ದೇಶಕ ಶಶಿಕಾಂತ್ ಅವರಿಗೆ ಬಾಲಿವುಡ್ ನಿರ್ಮಾಪಕ ರೂಪೇಶ್ ವಜಾ ಅವರನ್ನು ಭೇಟಿಯಾಗುವ ಸುವರ್ಣ ಅವಕಾಶ ಸಿಕ್ಕಿತ್ತು. ಇದೇ ನೋಡಿ ಲಕ್ಕಿಚಾನ್ಸ್ ಆಗಿದ್ದು. ಅದು ಹೇಗೆ ಅಂತೀರಾ, ಮುಂದೆ ಓದಿ. ಅವರಿಗೆ 15 ನಿಮಿಷ ಕಥೆ ಹೇಳಿದ ತಕ್ಷಣ ಅವರು ಹಿಂದಿಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ. 


ನಮ್ಮ ಚಿತ್ರದು ವಿಶಾಲವಾದ ಕಥೆ ಹಾಗಾಗಿ ಇದನ್ನು ಹಿಂದಿಯಲ್ಲಿ ಮಾಡಬೇಕು ಎನ್ನುವ ಆಸೆ ನನಗೂ ಇತ್ತು ಇದಕ್ಕೆ ಸಹಾಯ ಮಾಡಿದ ನಮ್ಮ ಚಿತ್ರದ ಹಿನ್ನೆಲೆ ಸಂಗೀತ ನಿರ್ದೇಶಕರಾದ ಸಂದೀಪ್ ಚೌಟ ಅವರ ಮೂಲಕ ರೂಪೇಶ್ ಓಜಾ ಅವರನ್ನು ಭೇಟಿ ಮಾಡಿದೆವು ಕಥೆ ಹೇಳಿದ ಅವರು ನೀವು ಪಟ್ಟಿರುವ ಸಾಹಸಕ್ಕೆ ಮೆಚ್ಚಿ ನಾನು ಇದಕ್ಕೆ ಗೌರವಾರ್ಥವಾಗಿ ಬಂಡವಾಳ ಹೂಡುತ್ತೇನೆ. ಒಳ್ಳೆಯ ಚಿತ್ರ ಮಾಡೋಣ ಎಂದರು ಎಂದು ಬಾಲಿವುಡ್ ನಲ್ಲೂ ಅವಕಾಶ ಸಿಕ್ಕಿದ ಪರಿಯನ್ನು ಹೇಳಿಕೊಂಡರು ನಿರ್ದೇಶಕ ಶಶಿಕಾಂತ್. ಕನ್ನಡದ ರಾಂಚಿ ಬಿಡುಗಡೆಯಾಗಿ ಸೆಟ್ಟೇರಲು ಏನಿಲ್ಲವೆಂದರೂ ಇನ್ನೂ ಒಂದು ವರ್ಷ ಸಮಯ ಬೇಕು ಮಾಡಿರುವ ವಿನೋದ್ ಮತ್ತು ಹಿನ್ನೆಲೆ ಸಂಗೀತ ನೀಡಿರುವ ಸಂಧಿ ಅವರನ್ನು ಹಿಂದಿಯಲ್ಲಿಯೂ ಬಳಸಿಕೊಳ್ಳುವ ಆಸೆ ಸದ್ಯಕ್ಕೆ ನಿರ್ದೇಶಕರದ್ದು. ಸಿನೇಮಾ ಸಖತ್ ಆಗಿ ಮೂಡಿಬರಲಿ  ಎಂಬುದು ನಿರ್ದೇಶಕ, ತಾರಾಗಣ ಸೇರಿದಂತೆ ಅಭಿಮಾನಿಗಳ ಆಶಯವಾಗಿದೆ. 


మరింత సమాచారం తెలుసుకోండి: