ಟಾಲಿವುಡ್ ಸಿನಿಮಾ ಇತಿಹಾಸದಲ್ಲೇ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮೆಗಾಸ್ಟಾರ್ ಚಿರಂಜೀವಿ ಅಫಿನಯದ ಚಿತ್ರ 'ಸೈರಾ ನರಸಿಂಹಾ ರೆಡ್ಡಿ'. ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದೆ. ಅದ್ಭುತ ಮೇಕಿಂಗ್, ಮೈನವಿರೇಳಿಸುವ ಸಾಹಸದಿಂದ ಸಾಕಷ್ಟು ಚರ್ಚೆ ಹುಟ್ಟುಹಾಕಿರುವ 'ಸೈರಾ' ಇದೀಗ ಕನ್ನಡಿಗ ಸುದೀಪ್ ಅವರ ಪಾತ್ರದ ರಿವೀಲ್ ವಿಡಿಯೋ ಮೂಲಕ ಸಿನಿ ರಸಿಕರ ಮನ ಗೆದ್ದಿದೆ. 

ಪ್ರಸ್ತುತ ಐತಿಹಾಸಿಕ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ರಾಜ ಗುರು ಲುಕ್​ನಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಯಾಗಿದೆ. ಪ್ರಸ್ತುತ ಕನ್ನಡಿಗ ಸುದೀಪ್ ಅವುಕು ಪ್ರಾಂತ್ಯದ ರಾಜನ ರೋಲ್​ನಲ್ಲಿ  ನಟಿಸಿದ್ದಾರೆ. ರಾಜನ ಖದರ್​ನಲ್ಲಿ ಕಾಣಿಸಿಕೊಂಡಿರುವ ಬಾದ್​ಷಾನ ಅವುಕು ಪಾತ್ರದ ಮೇಕಿಂಗ್ ವಿಡಿಯೋವನ್ನು ಸೈರಾ ತಂಡ ಇದೀಗ ಬಿಡುಗಡೆ ಮಾಡಿದೆ. ಆರು ಅಡಿ ಕಟೌಟ್ ಈ ಬಾರಿ ತುಸು ಖಡಕ್ಕಾಗೇ ಕಾಣಿಸಿಕೊಂಡಿದ್ದಾರೆ.

ಮುಖದ ಹಾವಭಾವ, ಕಿಚ್ಚನ ಹೋರಾಟ ಕಿಚ್ಚು, ಖದರ್ ತುಂಬಿದ ನೋಟ, ಡೈಲಾಗ್ ಗಳು ಹೀಗೆ ಅವುಕು ರಾಜ ಸಿನಿಪ್ರಿಯರನ್ನು ತುದಿಗಾಲಲ್ಲಿರಿಸಲಿರುವುದು ಪಕ್ಕಾ ಅನ್ನುವಂತಿದೆ  ಪಾತ್ರದ ಮೇಕಿಂಗ್ ವಿಡಿಯೋ.
ಚಿತ್ರದಲ್ಲಿ ಸುದೀಪ್ ಹೊರತಾಗಿ ಕನ್ನಡತಿ ಮಂಗಳೂರು ಬೆಡಗಿ ಅನುಷ್ಕಾ ಶರ್ಮಾ ಕೂಡ ಬಣ್ಣ ಹಚ್ಚಿರುವುದು ಮತ್ತೊಂದು ವಿಶೇಷತೆಯಾಗಿದೆ. 1857ರ ದಂಗೆ ಸಂದರ್ಭ ಬರುವ ಸನ್ನಿವೇಶದಲ್ಲಿ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ  ಕಾಣಿಸಿಕೊಳ್ಳಲಿದ್ದಾರೆ.


ರಣಭೂಮಿಯಲ್ಲಿ ಗಾಯಗೊಂಡ ಸೈನಿಕರಿಗೆ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಸ್ಪೂರ್ತಿದಾಯಕ ಕಥೆಯನ್ನು ರಾಣಿ ಲಕ್ಷ್ಮೀ ಬಾಯಿ ಹೇಳುತ್ತಾ 'ಸೈರಾ' ಚಿತ್ರ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಅನುಷ್ಕಾ ಶೆಟ್ಟಿ ಮತ್ತೊಂದು ಬಿಗ್ ಬಜೆಟ್ ಚಿತ್ರದ ಭಾಗವಾಗಿದ್ದಾರೆ. 'ಸೈರಾ'ದಲ್ಲಿ ಕಿಚ್ಚ ಸುದೀಪ್ ರಾಜನಾಗಿ ಮರೆದರೆ, ಕನ್ನಡ ಮಣ್ಣಿನ ನಟಿ ಅನುಷ್ಕಾ ಶೆಟ್ಟಿ ರಾಣಿಯಾಗಿ ಮಿಂಚಲಿದ್ದಾರೆ. ಇನ್ನು  ಸೈರಾ ನರಸಿಂಹಾ ರೆಡ್ಡಿ ಚಿತ್ರಕ್ಕಾಗಿ ಈಗಾಗಲೇ ಅಭಿಮಾನಿಗಳು ಸೇರಿದಂತೆ ಪರರಾಷ್ಟ್ರದ ಜನರು ಸಹ ಕಾತುರದಿಂದ ಕಾಯುತ್ತಿದ್ದು, ಈ ಐತಿಹಾಸಿಕ ಸಿನಿಮಾ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 


మరింత సమాచారం తెలుసుకోండి: