ಟಾಲಿವುಡ್ ನ ಪ್ರೇಕ್ಷಕರಲ್ಲಿ ನೃತ್ಯ ಹಾಗೂ ಸಿಂಪಲ್ ಸ್ಟೋರಿ ಮೂಲಕ ಸಖತ್ ಸುದ್ದಿಯಾಗಿದ್ದ ಚಿತ್ರವೆಂದರೆ ಅದು 'ಫಿದಾ'. ಈ ಸಿನಿಮಾದಲ್ಲಿ ವರುಣ್​ ಹಾಗೂ ಸಾಯಿ ಪಲ್ಲವಿ ಜೋಡಿಯನ್ನು ನೋಡಿದವರು ನಿಜ ಜೀವನದಲ್ಲೂ ಇವರು ಫ್ಯಾರ್ ಆದರೆ ಸೂಪರ್ ಅಲ್ವಾ ಎಂದು ಕೊಂಡಿದ್ದರು. ಆದರೆ ಅದು ಸಿನಿಮಾ. ನಿಜವಾಗಿ ಎಲ್ಲಿ ಆಗಬೇಕು ಎಂದು ಸುಮ್ಮನಾಗಿದ್ದರು. 


ಈಗ ಈ ಜೋಡಿಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ವರುಣ್​ ತೇಜ್​ ಹಾಗೂ ಸಾಯಿ ಪಲ್ಲವಿ ಹಸೆಮಣೆ ಏರುವ ಸಮಯ ದೂರವೇನಿಲ್ಲ. ಹೌದು, ಹೀಗೆಂದು ನಾವು ಹೇಳುತ್ತಿಲ್ಲ. ನಟ ವರುಣ್​ ತೇಜ್​ ಖುದ್ದು ಹೇಳಿಕೊಂಡಿರುವುದು ಅಭಿಮಾನಿಗಳಿಗೆ ದಿಲ್ ಖುಷ್ ಸಿದ್ದಿಯಾಗಿದೆ. ವರುಣ್ ಹಾಗೂ ವೆಂಕಟೇಶ್ ಅಭಿನಯದ 'ಎಫ್​ 2' ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ವರುಣ್ ತೇಜ್​ ಸದ್ಯ ಟಾಲಿವುಡ್​ನಲ್ಲಿ ಮದುವೆಯಾಗುವ ನಾಯಕರ ಲಿಸ್ಟ್​ನಲ್ಲಿರುವ ನಟ. 'ಗದ್ದಲಕೊಂಡ ಗಣೇಶ್​' ಸಿನಿಮಾದಲ್ಲಿ ವರುಣ್​ ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಸಖತ್ತಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಕುರಿತಾಗಿ ಆ್ಯಪ್​ ಒಂದಕ್ಕೆ ಸಂದರ್ಶನ ನೀಡಿದ್ದಾರೆ. 


ಈ ಸಂದರ್ಶನದಲ್ಲಿ ವರುಣ್​ ಅವರಿಗೆ ಸಾಕಷ್ಟು ಆಸಕ್ತಿಕರ ವಿಷಯಗಳ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉತ್ತರಿಸುವಾಗ ವರುಣ್​ ವಿವಾಹದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಬಂದಾಗ ಅವಕಾಶ ಬಂದರೆ ಸಾಯಿ ಪಲ್ಲವಿಯನ್ನು ವಿವಾಹವಾಗುವುದಾಗಿಯೂ ಹಾಗೂ ಪೂಜಾ ಹೆಗ್ಡೆಯನ್ನು ಡೇಟಿಂಗ್​ ಮಾಡುವುದಾಗಿಯೂ ಹೇಳಿದ್ದಾರೆ.ಒಂದು ವೇಳೆ ನಿಜಕ್ಕೂ ವರುಣ್​ ಹೇಳಿದ ವಿಷಯ ನಿಜವಾದರೆ ಅವರ ಅಭಿಮಾನಿಗಳು ಹಬ್ಬ ಆಚರಿಸುತ್ತಾರೆ. ಆದರೆ ವರುಣ್​ ತಮ್ಮ ಮೊದಲ ಸಿನಿಮಾ 'ಫಿದಾ'ದಲ್ಲಿ ಅಭಿನಯಿಸಿದ ನಟಿಗೆ ಫಿದಾ ಆಗಿದ್ದಾರೆ ಅನ್ನೋದು ಈ ಸಂದರ್ಶನದಿಂದ ಸಾಬೀತಾಗಿರುವುದು ಸತ್ಯವಾಗಿದೆ. 


ಆದರೆ ವರುಣ್ ಅವರು ಸಾಯಿ ಪಲ್ಲವಿಯನ್ನು ವಿವಾಹವಾಗುವುದಾಗಿಯೂ ಹಾಗೂ ಪೂಜಾ ಹೆಗ್ಡೆಯವರನ್ನು  ಡೇಟಿಂಗ್ ಮಾಡುವುದಾಗಿಯೂ ಹೇಳಿದ್ದಾರೆ. ಈ ಹೇಳಿಕೆಯಿಂದ ಅಭಿಮಾನಿಗಳಿಗೆ ಗೊಂದಲ ಉಂಟಾಗಿದೆ. ಆದರೂ ಬಹುತೇಕರು ಪಲ್ಲವಿಯನ್ನು ವಿವಾಹವಾಗುವುದೇ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.


మరింత సమాచారం తెలుసుకోండి: