ಅರ್ಜುನ್ ರೆಡ್ಡಿ ಸಿನಿಮಾ  ಮೂಲಕ ಟಾಲಿವುಡ್ ನಲ್ಲಿ ವಿಶಿಷ್ಟ ರೀತಿಯ ತಮ್ಮ ಅಭಿನಯದ ಶೈಲಿಯಿಂದ ಮೋಡಿ ಮಾಡಿ, ರೌಡಿ ಹೀರೊ ಎಂದೇ ಖ್ಯಾತಿ ಪಡೆದ ವಿಜಯ್ ದೇವರಕೊಂಡ ಅವರು ಪ್ರಸ್ತುತ ವರ್ಲ್ಡ್ ಫೇಮಸ್ ಲವರ್. ಅರೇ ಇದೇನಪ್ಪಾ ಎಂದು ಆಶ್ಚರ್ಯ ಆಯ್ತಾ. ಮುಂದೆ ಓದಿ. 


ಲವ್ಲಿ ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ ಮುಂದಿನ ಸಿನಿಮಾ ಹೆಸರು "ವರ್ಲ್ಡ್ ಫೇಮಸ್ ಲವರ್". ಕ್ರಾಂತಿ ಮಾಧವ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅಭಿನಯಿಸುವುದಾಗಿ ಈ ಮೊದಲೇ ಪ್ರಕಟಿಸಿದ್ದರು. ಆದರೆ ಸಿನಿಮಾದ ಟೈಟಲ್ ಬಗ್ಗೆ ಈ ತಂಡ ಈಗಷ್ಟೇ ನಿರ್ಧಾರ ಮಾಡಿದೆ ತಮ್ಮ 9ನೇ ಸಿನಿಮಾದಲ್ಲಿ ರಾಶಿ ಕನ್ನ, ಅವರೊಂದಿಗೆ ವಿಜಯ್ ಮೊದಲಬಾರಿಗೆ ನಟಿಸಲಿದ್ದಾರೆ. 


ವರ್ಲ್ಡ್ ಫೇಮಸ್ ಲವರ್ ಸಿನಿಮಾದಲ್ಲಿ ಕ್ಯಾಥರೀನ್, ತ್ರಿಶಾ, ಐಶ್ವರ್ಯ ರಾಜೇಶ್,  ಇಸಬೆಲ್ಲ ಲೈಟ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಕೆ ಎ ವಲ್ಲಭ ಅವರ ನಿರ್ಮಾಣದಲ್ಲಿ ಸಿನಿಮಾ ಸೆಟ್ಟೇರಲಿದೆ, ಕೊಚ್ಚಿಯಲ್ಲಿ ಇತ್ತೀಚಿಗೆ ಸಿನಿಮಾ ಕುರಿತು ಅಂತಿಮ ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ. "ವರ್ಲ್ಡ್ ಫೇಮಸ್ ಲವರ್" ಸ್ಟೋರಿ ಮೂಲಕ ನಿಮ್ಮ ಮುಂದೆ ಬರಲಿದ್ದೆವೆ, ಖಂಡಿತ ನಿಮ್ಮೆಲ್ಲರ ಮನಸ್ಸು ಗೆಲ್ಲುತ್ತೇವೆ ಎಂದು ಟ್ವಿಟ್ಟರ್ನಲ್ಲಿ ಬರೆದು ಕೊಂಡಿದ್ದಾರೆ.  


ನಟಿಯರಾದ ಐಶ್ವರ್ಯ, ರಾಶಿ ಕೂಡ ಇ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಸಿನಿಮಾ ಮೊದಲ ಲುಕ್ ಬಿಡುಗಡೆಯಾಗಲಿದೆ ಕಾಯುತ್ತಿರಿ ಎಂದು ಸಿನಿ ತಂಡ ಹೇಳಿಕೆ ನೀಡಿದೆ. ವಿಜಯ್ ದೇವರಕೊಂಡ ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ನಾಲ್ಕೈದು ಲಿಪ್ ಲಾಕ್ ಕಿಸ್ಸಿಂಗ್ ಸೀನ್ ಗಳಿರುವಿದು ಸಹಜ. ಇದರ ಜೊತೆಗೆ ಪ್ರಸ್ತುತ ಈ ಚಿತ್ರದಲ್ಲಿ ಕಂಪ್ಲೀಟ್ ಲವ್ ಚಿತ್ರವಾದ್ದರಿಂದ ಇನ್ನಷ್ಟು ರೊಮ್ಯಾನ್ಸ್  ಹಾಗೂ ಡೈಲಾಗ್, ಖಡಕ್ ಫೈಟಿಂಗ್ ಹಾಗೂ ಸ್ಟೋರಿ ಅದ್ಭುತವಾಗಿರಲಿದೆಯಂತೆ. ಈಗಾಗಲೇ ಸೌಂತ್ ಇಂಡಿಯಾದಲ್ಲಿ ಭರ್ಜರಿ ಸದ್ದು  ಮಾಡುತ್ತಿರುವ ದೇವರಕೊಂಡ ಈ ಸಿನಿಮಾದಿಂದ ಮತ್ತಷ್ಟು ಫೇಮಸ್ ಆಗೋದು ಪಕ್ಕಾ ಆಗಿದೆ.


మరింత సమాచారం తెలుసుకోండి: